GATE Exam Schedule 2022: ಇಂಜಿನಿಯರಿಂಗ್ GATE 2022ರ ಪರೀಕ್ಷೆಯ ದಿನಾಂಕ ಪ್ರಕಟ

By Suvarna News  |  First Published Dec 22, 2021, 3:12 PM IST
  • ಇಂಜಿನಿಯರಿಂಗ್  GATE ಪರೀಕ್ಷೆ 2022 ಫೆಬ್ರವರಿ 5ರಿಂದ ಆರಂಭ
  • ಒಟ್ಟು 6 ದಿನಗಳ ಕಾಲ ಎರಡು ಸೆಷನ್‌ಗಳಲ್ಲಿ  ನಡೆಯಲಿರುವ ಪರೀಕ್ಷೆ
  • ಅಡ್ಮಿಟ್ ಕಾರ್ಡ್ ಜನವರಿ 3ರಿಂದ ಲಭ್ಯ

ಬೆಂಗಳೂರು(ಡಿ.22): ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (Graduate Aptitude Test in Engineering-GATE) ಪರೀಕ್ಷೆ 2022ರ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ.  ಗೇಟ್ 2022 ಪರೀಕ್ಷೆಗಳು ಫೆಬ್ರವರಿ 5,2022 ರಂದು ಪ್ರಾರಂಭವಾಗಿ ಫೆಬ್ರವರಿ 13, 2022ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ವೇಳಾಪಟ್ಟಿ ಮತ್ತು ಹೆಚ್ಚಿನ  ಮಾಹಿತಿಗೆ  ಅಧಿಕೃತ ವೆಬ್‌ಸೈಟ್ https://gate.iitkgp.ac.in/ ನಲ್ಲಿ ವೀಕ್ಷಿಸಬಹುದು. ಪರೀಕ್ಷಾ ಕೇಂದ್ರ ನೈರ್ಮಲ್ಯೀಕರಣ ಸೇರಿದಂತೆ ಪರೀಕ್ಷಾ ಕೇಂದ್ರದ ತಯಾರಿ ಮತ್ತು ಇನ್ನಿತರ ಚಟುವಟಿಕೆಗಳು ಫೆಬ್ರವರಿ 4, 2022 ರಂದು ಆರಂಭವಾಗಲಿದೆ.  ಪ್ರವೇಶಾತಿ ಕಾರ್ಡ್ ಜನವರಿ 3ರಿಂದ ಲಭ್ಯವಿರಲಿದೆ.

ಗೇಟ್‌ 2022 ಫೆಬ್ರುವರಿ 4, 5, 6, 11, 12, 13, ಒಟ್ಟು 6 ದಿನ ಪರೀಕ್ಷೆ ಇರುತ್ತದೆ. ಎರಡು ಸೆಷನ್‌ಗಳಲ್ಲಿ  ಗೇಟ್‌ 2022 ಪರೀಕ್ಷೆಯು  ನಡೆಯಲಿದ್ದು,  ಮೊದಲನೆಯದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯದು ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ. ಗೇಟ್ 2022 ಪರೀಕ್ಷೆಯನ್ನು ಈ ಬಾರಿ ಪಶ್ಚಿಮ ಬಂಗಾಳದ ಖರಗ್‌ಪುರ (Kharagpur)ದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institutes of Technology -IIT)ಆಯೋಜನೆ  ಮಾಡುತ್ತಿದೆ.

Tap to resize

Latest Videos

undefined

GATE 2022 ಬ್ರಾಂಚ್ ವೈಸ್ ಪರೀಕ್ಷಾ ದಿನಾಂಕದ ಪ್ರಕಾರ ಫೆಬ್ರವರಿ 5, ಫೆಬ್ರವರಿ 6, ಫೆಬ್ರವರಿ 12 ಮತ್ತು ಫೆಬ್ರವರಿ 13 ರಂದು ಆಪ್ಟಿಟ್ಯೂಡ್‌ ಪರೀಕ್ಷೆ(Aptitude Test) ನಡೆಸಲಾಗುತ್ತದೆ. ಫೆಬ್ರವರಿ 4 ಮತ್ತು ಫೆಬ್ರವರಿ 11 ರಂದು ಸ್ಕ್ರೈಬ್‌ಗಳ ಆಯ್ಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ  ದಿನವನ್ನು ಮೀಸಲಿಡಲಾಗಿದೆ. ನೈರ್ಮಲ್ಯೀಕರಣ ಮತ್ತು ಇತರ ಚಟುವಟಿಕೆಗಳನ್ನು ಒಳಗೊಂಡಂತೆ ಪರೀಕ್ಷಾ ಕೇಂದ್ರದ ತಯಾರಿ (ಪೋಸ್ಟರ್‌ಗಳು, ಸೈನ್‌ಬೋರ್ಡ್, ಆಸನ ವ್ಯವಸ್ಥೆಗಳು ಇತ್ಯಾದಿ) ಮತ್ತು ಪರೀಕ್ಷಾ ಕೇಂದ್ರವನ್ನು ಪರೀಕ್ಷಿಸಲು ಅಭ್ಯರ್ಥಿಗಳು ಇಚ್ಚಿಸಿದಲ್ಲಿ ಭೇಟಿ ನೀಡಲು ಅವಕಾಶವಿದೆ.

UGC NET 2021: ಯುಜಿಸಿ-ನೆಟ್ 2ನೇ ಹಂತದ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಎಂಜಿನಿಯರಿಂಗ್‌ ಅಭ್ಯರ್ಥಿಗಳಿಗೆ ಉದ್ಯೊಗ ಪಡೆಯಲು ಮತ್ತು  ಉನ್ನತ ಶಿಕ್ಷಣಕ್ಕೆ ಗೇಟ್ ಪರೀಕ್ಷೆ ವೇದಿಕೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಪಡೆಯುತ್ತಾರೆ. ಅಲ್ಲದೆ ಸರಕಾರದ ವಿವಿಧ ಸ್ಕಾಲರ್‌ಶಿಪ್‌, ಸಹಾಯ ಧನ ಪಡೆಯಲು ಅರ್ಹರಾಗುತ್ತಾರೆ. ಉದ್ಯೊಗ ಆಕಾಂಕ್ಷಿಗಳಿಗೆ ಇದು ಅರ್ಹತಾ ಪರೀಕ್ಷೆಯಾಗಿರುತ್ತದೆ. ತೈಲ ಕಂಪನಿಗಳು, ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌, ಬಿಎಚ್‌ಇಎಲ್‌, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು 'ಗೇಟ್‌' ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ರ್ಯಾಂಕಿಂಗ್‌ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಮಾತ್ರವಲ್ಲ ರ್ಯಾಂಕಿಂಗ್‌ ಆಧಾರದಲ್ಲೇ ವೇತನ ಕೂಡ ನಿಗದಿಪಡಿಸಲಾಗುತ್ತದೆ.

KSP RECRUITMENT 2022: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕೊಟ್ಟ ಕರ್ನಾಟಕ, ಇಂದೇ ಅರ್ಜಿ ಸಲ್ಲಿಸಿ

ಸ್ನಾತಕೋತ್ತರ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಮತ್ತು ಕೆಲವು ಸಾರ್ವಜನಿಕ ವಲಯದ ಕಂಪನಿಗಳಿಗೆ ನೇಮಕಾತಿಗಾಗಿ ನಡೆಸಲಾಗುವ ಗೇಟ್ ಎಂಬುದು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆಯಾಗಿದೆ. ಗೇಟ್ 2022 ಪತ್ರಿಕೆಯು ವಸ್ತುನಿಷ್ಠ ಪ್ರಕಾರದ ಮೂರು ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಬಹು ಆಯ್ಕೆಯ ಪ್ರಶ್ನೆಗಳು (MCQ ಗಳು), ಬಹು ಆಯ್ದ ಪ್ರಶ್ನೆಗಳು (MSQ ಗಳು) ಮತ್ತು ಸಂಖ್ಯಾತ್ಮಕ ಉತ್ತರ ಪ್ರಕಾರ (NAT) ಪ್ರಶ್ನೆಗಳಿರುತ್ತವೆ. MCQ ನಲ್ಲಿ ಗುರುತಿಸಲಾದ ಪ್ರತಿಯೊಂದು ತಪ್ಪು ಉತ್ತರಕ್ಕೂ ಋಣಾತ್ಮಕ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆದರೆ MSQ ಗಳು ಮತ್ತು NAT ಗಳಿಗೆ ತಪ್ಪು ಉತ್ತರಕ್ಕೆ ಯಾವುದೇ ಋಣಾತ್ಮಕ ಅಂಕಗಳು ಕಡಿತವಾಗುವುದಿಲ್ಲ.

ಈ ವರ್ಷ ಗೇಟ್ 2022 ಪರೀಕ್ಷೆಯಲ್ಲಿ ಎರಡು ಹೊಸ ವಿಷಯ ಪತ್ರಿಕೆಗಳನ್ನು ಪರಿಚಯಿಸಲಾಗಿದೆ. ಅವುಗಳೆಂದರೆ ಜಿಯೋಮ್ಯಾಟಿಕ್ಸ್ ಎಂಜಿನಿಯರಿಂಗ್ ( geomatics engineering - ನಕ್ಷೆ ಮತ್ತು ಬೌಗೋಳಿಕ ವಿಚಾರ) ಮತ್ತು ನೇವಲ್ ಆರ್ಕಿಟೆಕ್ಚರ್(Naval Architecture-ಹಡಗುಗಳ ವಿನ್ಯಾಸ ಮಾಡುವವರು) ಮತ್ತು ಮೆರೈನ್ ಇಂಜಿನಿಯರಿಂಗ್ (Marine engineering -ಸಾಗರಕ್ಕೆ ಸಂಬಂಧಿಸಿದ ಎಂಜಿನಿಯರಿಂಗ್ ), ಒಟ್ಟು ಗೇಟ್ 29 ಪೇಪರ್‌ಗಳನ್ನು ಒಳಗೊಂಡಿದೆ. ಗೇಟ್ 2022 ಗೆ ಹಾಜರಾಗಲು ಅರ್ಹತೆಯ ಮಾನದಂಡಗಳನ್ನು ವಿಸ್ತರಿಸಲಾಗಿದ್ದು, ಬಿಡಿಎಸ್ ಮತ್ತು ಎಂಫಾರ್ಮ್ ಪದವಿ ಹೊಂದಿರುವವರು ಸಹ ಪರೀಕ್ಷೆ ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡುತ್ತಿರಿ.

click me!