ಎಸ್‌ಎಸ್‌ಎಲ್‌ಸಿ- ಪಿಯುಸಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ..!

Kannadaprabha News   | Asianet News
Published : Apr 12, 2021, 07:54 AM ISTUpdated : Apr 12, 2021, 08:01 AM IST
ಎಸ್‌ಎಸ್‌ಎಲ್‌ಸಿ- ಪಿಯುಸಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ..!

ಸಾರಾಂಶ

ಉದಯಭಾನು ಕಲಾ ಸಂಘದಿಂದ ಉಚಿತ ಶೈಕ್ಷಣಿಕ ತರಬೇತಿ|ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಬೋಧನೆ|  ಯುವಜನತೆ ಹಾಗೂ ಮಹಿಳೆಯರಿಗೆ ಮೂರು ಮತ್ತು ತಿಂಗಳ ಸ್ವಯಂ ಉದ್ಯೋಗ ತರಬೇತಿ, ಕಂಪ್ಯೂಟರ್‌ ತರಬೇತಿ| 

ಬೆಂಗಳೂರು(ಏ.12): ಉದಯಭಾನು ಕಲಾ ಸಂಘವು ಅವಕಾಶ ವಂಚಿತರು ಮತ್ತು ಅಶಕ್ತರ ಅನುಕೂಲಕ್ಕಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.

ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಜು.1ರಿಂದ ಆ.31ರ ಅವಧಿಯಲ್ಲಿ ಪ್ರವೇಶ ಆರಂಭವಾಗಲಿದೆ. ಸೆ.5ರಿಂದ ತರಗತಿಗಳು ಆರಂಭವಾಗಲಿದೆ. ಸಾಮಾನ್ಯ ದಿನಗಳಲ್ಲಿ ಸಂಜೆ 5ರಿಂದ ತರಗತಿಗಳು ಆರಂಭವಾಗಲಿದ್ದು, ಭಾನುವಾರ ಮತ್ತು ರಜಾ ದಿನಗಳಂದು ಬೆಳಗ್ಗೆ 8ರಿಂದ ತರಗತಿಗಳು ನಡೆಯಲಿವೆ. 2022ರ ಜನವರಿ ಅಥವಾ ಫೆಬ್ರವರಿಯಲ್ಲಿ ತರಗತಿಗಳು ಮುಕ್ತವಾಯವಾಗಲಿವೆ.

ಶುಲ್ಕ ವಿನಾಯಿತಿ, ವಿದ್ಯಾಸಿರಿ, ಸ್ಕಾಲರ್ಶಿಪ್ ಬಗ್ಗೆ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ಕಂಪ್ಯೂಟರ್‌ ತರಬೇತಿ:

ಇನ್ನು ಯುವಜನತೆ ಹಾಗೂ ಮಹಿಳೆಯರಿಗೆ ಮೂರು ಮತ್ತು ತಿಂಗಳ ಸ್ವಯಂ ಉದ್ಯೋಗ ತರಬೇತಿ, ಕಂಪ್ಯೂಟರ್‌ ತರಬೇತಿ ನೀಡಲಾಗುತ್ತದೆ. ಕಂಪ್ಯೂಟರ್‌ ಬೇಸಿಕ್‌, ಆ-ಆಫೀಸ್‌ ಮ್ಯಾನೇಜ್‌ಮೆಂಟ್‌ ಹೇಳಿಕೊಡಲಾಗುತ್ತದೆ. ಏ.15ರಿಂದ ಪ್ರವೇಶಾತಿ ಹಾಗೂ ಮೇ 15ರಿಂದ ತರಗತಿಗಳು ಆರಂಭವಾಗಲಿವೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ ಸಂಚಾಲಕ ಸತ್ಯ ನಾರಾಯಣ- 99802 04965 ಸಂಪರ್ಕಿಸಬಹುದು.
 

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ