ಮುಂದಿನ ದಿನಗಳಲ್ಲಿ ವಿವಿಯಲ್ಲಿ ವಿವೇಕಾನಂದ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸುತ್ತೇವೆ. ಸರ್.ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮಾ ಗಾಂಧಿ ಅವರ ಜೀವನ ಮೌಲ್ಯಗಳು, ಸಂದೇಶಗಳನ್ನು ತಿಳಿಸಲು ಒಂದು ವಿಷಯವನ್ನು ಪರಿಚಯಿಸಿ ಕಿರು ಪರೀಕ್ಷೆ ಮತ್ತು ಕ್ರೆಡಿಟ್ ಅಂಕ ವ್ಯವಸ್ಥೆ ಪರಿಚಯಿಸುವ ಉದ್ದೇಶವಿದೆ ಎಂದು ತಿಳಿಸಿದ ಎಂ.ಆರ್.ದೊರೆಸ್ವಾಮಿ
ಬೆಂಗಳೂರು(ನ.07): ಪಿಇಎಸ್ ಹೆಸರು ಜನಜನಿತವಾಗಿದ್ದು, ಈ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಇಷ್ಟ ಪಡುತ್ತಾರೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಬೇಕು ಎನ್ನುವ ವಿದ್ಯಾರ್ಥಿಗಳ ನಾಲಿಗೆಯ ಮೇಲೆ ಪಿಇಎಸ್ ಹೆಸರು ಹರಿದಾಡುತ್ತದೆ.
ಐದು ದಶಕಗಳ ಹಿಂದೆ ಬೆಂಗಳೂರಿನ ಗವಿಪುರ ಗುಟ್ಟಹಳ್ಳಿಯಲ್ಲಿ 'ತಾತ್ಕಾಲಿಕ ಕಟ್ಟಡವೊಂದರಲ್ಲಿ ಕೇವಲ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ದೂರದೃಷ್ಟಿಯ ಛಲವಾದಿ, ಪೀಪಲ್ಸ್ ಎಜುಕೇಷನ್ ಸೊಸೈಟಿ (ಪಿಇಎಸ್) ಎಂಬ ಬ್ಯಾಂಡ್ ಕಟ್ಟಿ, ಬೃಹದಾಕಾರವಾಗಿ ಬೆಳೆಸಿ ದೇಶ-ವಿದೇಶಗಳಲ್ಲಿ ಭಾಪು ಮೂಡಿಸಿರುವ ಪಿಇಎಸ್ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಅವರು ನ.7ರ ಗುರುವಾರ 87ನೇ ವಸಂತಕ್ಕೆ ಕಾಲಿಡಲಿದ್ದಾರೆ.
ಸಿಬ್ಬಂದಿಗೆ ತಿಂಗಳ ವೇತನ ನೀಡಲು ಹಣವಿಲ್ಲದ ಸವಾಲಿನೊಂದಿಗೆ 1973ರಲ್ಲಿ 45 ವಿದ್ಯಾರ್ಥಿಗಳೊಂದಿಗೆ ಪಿಯು ಕಾಲೇಜು ಆರಂಭಿಸಿದ ದೊರೆಸ್ವಾಮಿಯವರು ನಂತರ ಹಿಂದೆ ತಿರುಗಿ ನೋಡಲೇ ಇಲ್ಲ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಲೇ ಹೋದರು. ಇಂದು ಪಿಇಎಸ್ ಅಧೀನದ ಸಂಸ್ಥೆಗಳಲ್ಲಿ ಬರೋಬ್ಬರಿ 25 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 6 ಸಾವಿರ ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಪಿಇಎಸ್ ಹೆಸರು ಜನಜನಿತವಾಗಿದ್ದು, ಜನಿತವಾಗಿದ್ದು, ಈ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಇಷ್ಟ ಪಡುತ್ತಾರೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಬೇಕು ಎನ್ನುವ ವಿದ್ಯಾರ್ಥಿಗಳ ನಾಲಿಗೆಯ ಮೇಲೆ ಪಿಇಎಸ್ ಹೆಸರು ಹರಿದಾಡುತ್ತದೆ. ಬೃಹತ್ ಶೈಕ್ಷಣಿಕ ಸಾಮ್ರಾಜ್ಯ ಕಟ್ಟಿರುವ ಎಂ.ಆರ್. ದೊರೆಸ್ವಾಮಿ ಅವರು, 87ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪಿಇಎಸ್ ಸಂಸ್ಥೆ ಬೆಳೆದು ಬಂದ ದಾರಿ, ಭವಿಷ್ಯದ ಆಲೋಚನೆಗಳನ್ನು 'ಕನ್ನಡಪ್ರಭ'ದೊಂದಿಗೆ ಹಂಚಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಸ್ಕೂಲ್‌ನ ಸೌಲಭ್ಯಗಳು ದೊರಕಬೇಕು: ದೊರೆಸ್ವಾಮಿ
ಪಿಇಎಸ್ ಕಾಲೇಜು ಆಲೋಚನೆ ಬಂದಿದ್ದು ಹೇಗೆ?
ನನಗೆ ಸಮಾಜ ಸೇವೆ ಮತ್ತು ಕಾನೂನು ವೃತ್ತಿ ಮಾಡುವ ಆಸಕ್ತಿ ಇತ್ತು. ಕಾನೂನು ಪದವಿ ಪಡೆದು ಕೆಲವು ದಿನ ಪ್ಯಾಕ್ಟಿಸ್ ಮಾಡಿದೆ. 1960ರಲ್ಲಿ ಕಾರ್ಪೊರೇಷನ್ ಚುನಾವಣೆಯಲ್ಲಿ ಬಸವನಗುಡಿ ವಾರ್ಡ್‌ನಿಂದ ಶ್ಯಾಮಣ್ಣ ಎಂಬುವರ ವಿರುದ್ಧ ಸರ್ದಿಸಿದೆ. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿದ್ದ ಕಾರಣ ಮಾಜಿ ಸಚಿವರಾದ ದಯಾನಂದ ಸಾಗರ್‌ಅವರ ಪರಿಚಯ ಆಗಿತ್ತು. ಒಮ್ಮೆ ಅವರು ನನ್ನನ್ನು ಮನೆಗೆ ಕರೆಸಿಕೊಂಡು, ತಾವು ಆರಂಭಿಸುತ್ತಿರುವ ಸಂಜೆ ಕಾಲೇಜು ನಡೆಸಿಕೊಂಡು ಹೋಗಬೇಕು ಎಂದು ನನಗೆ ಹೇಳಿದರು. ಶೈಕ್ಷಣಿಕ ಕ್ಷೇತ್ರ ಆಸಕ್ತಿ ಇಲ್ಲದ ನಾನು ಬೇಡ ಎಂದು ಅವರ ಆಫರ್ ತಿರಸ್ಕರಿಸಿದೆ. ಪಟ್ಟು ಬಿಡದ ಅವರು ಕಾಲೇಜಿಗೆ ಕರೆದೊಯ್ದು ಪ್ರಾಂಶುಪಾಲರ ಹುದ್ದೆಯಲ್ಲಿ ಕೂರಿಸಿದರು. 1966ರಲ್ಲಿ ಕಿರಿಯ ವಯಸಿನಲ್ಲೇ ನಾನು ಕಾಲೇಜಿನ ಪ್ರಾಂಶುಪಾಲನಾದೆ. 60 ವಿದ್ಯಾರ್ಥಿಗಳೊಂದಿಗೆ ಕಾಲೇಜು ಆರಂಭವಾಯಿತು. ವಿದ್ಯಾರ್ಥಿಗಳಾದರು. ಆರು ವರ್ಷಗಳಲ್ಲಿ 1,000 ಈ ನಡುವೆ ಶೈಕ್ಷಣಿಕ ಕ್ಷೇತ್ರದಲ್ಲಿನ ಅನೇಕ ಹಿರಿಯರು, ಗಣ್ಯರು, ಪರಿಚಿತರು, ಸ್ನೇಹಿತರು ಸೇರಿ ನೀನೇ ಒಂದು ಕಾಲೇಜು ಆರಂಭಿಸುವಂತೆ ಸಲಹೆ ನೀಡಿದರು. ಆಶಾವಾದಿಯಾಗಿದ್ದ ನಾನು ಹಣದ ಬಗ್ಗೆ ಯೋಚಿಸುತ್ತಿರಲಿಲ್ಲ. ಅವರ ಸಲಹೆಯನ್ನು ಉತ್ಸಾಹದಿಂದ ಸ್ವೀಕರಿಸಿದೆ. ಸಾರ್ವಜನಿಕ ಬದುಕಿನ ನನ್ನ ಆಸಕ್ತಿ ತಿಳಿದು 'ಪೀಪಲ್ ಎಜುಕೇಷನ್ ಸೊಸೈಟಿ' ಎಂದು ಹೆಸರಿಡುವಂತೆ ಬೆಂಗಳೂರು ವಿವಿಯ ರಿಜಿಸ್ಟ್ರಾರ್‌ಸೂರ್ಯ ಪ್ರಸಾದ್ ಅವರು ಸಲಹೆ ನೀಡಿದರು. ಸಲಹೆಯಂತೆ ಕಾಮರ್ಸ್ ಮತ್ತು ವಿಜ್ಞಾನ ವಿಭಾಗದೊಂದಿಗೆ 197300 ಆರಂಭಿಸಲಾಯಿತು.
ಕಾಲೇಜು ಕಾಲೇಜು ಆರಂಭವಾದಾಗಿನ ಸವಾಲುಗಳೇನು?:
ಕಾಲೇಜು ನಡೆಸಲು ಕಟ್ಟಡವೇ ಇರಲಿಲ್ಲ. ಗುಟ್ಟಹಳ್ಳಿ ಗವಿಪುರದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಸಂಬಂಧಿಸಿದ ಕಟ್ಟಡವೊಂದು ಇತ್ತು. ಗರಡಿ ಮನೆಗೆ ಬಳಕೆಯಾಗುತ್ತಿದ್ದ ಆ ಕಟ್ಟಡಕ್ಕೆ ಬೀಗಹಾಕಿದ್ದರು. ತಾತ್ಕಾಲಿಕವಾಗಿ ಆ ಕಟ್ಟಡವನ್ನು ಕಾಲೇಜುನಡೆಸಲು ಒದಗಿಸುವಂತೆ ಧರ್ಮಾಧಿಕಾರಿ ವೀರೇಂದ್ರ ಹಗ್ಗಡೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಒಂದೇ ಮಾತಿಗೆ ಅವರು ಒಪ್ಪಿದರು. ಬಾಡಿಗೆ ಕುರಿತು ಕೇಳಿದಾಗ, ಅಮೇಲೆ ಮಾತನಾಡೋಣಾ. ಕಾಲೇಜು ಆರಂಭಿಸಿ ಎಂದರು. ಆದರೆ, ಕೆಲವೇ ದಿನಗಳಲ್ಲಿ ಆ ಕಟ್ಟಡ ಮಾರಾಟವಾಗಿದೆ ಎಂದು ಅವರ ಸಹೋದರ ತಿಳಿಸಿದರು. ಹೀಗಾಗಿ, ಹನುಮಂತ ನಗರದಲ್ಲಿ ಬಿಡಿಎವತಿಯಿಂದಕಾಲೇಜು ಆರಂಭಕ್ಕೆಸಿಎಸೈಟ್ ಮಂಜೂರಾಯಿತು. ಹಣ ಇಲ್ಲದೇ ಕಾಲೇಜು ಆರಂಭಿಸಿದ್ದೆ. ತಿಂಗಳಾಗುತ್ತಿದ್ದಂತೆ ಬೋಧಕರಿಗೆ ವೇತನ ಕೊಡಲು ಕೂಡ ಹಣ ಇರುತ್ತಿರಲಿಲ್ಲ. ಬೆಂಗಳೂರು ಮತ್ತು ಪರ ಊರುಗಳಲ್ಲಿನ ಹಿತೈಷಿಗಳು, ಸಂಬಂಧಿಕರು, ಸ್ನೇಹಿತರ ಬಳಿ ತೆರಳಿ ಹಣ ಕೇಳಿ ಪಡೆದು ವೇತನ ಪಾವತಿಸುತ್ತಿದೆ. ಸುಮಾರು 1 ವರ್ಷ ಕಾಲ ಆರ್ಥಿಕ ಸಂಕಷ್ಟ ಎದುರಿಸಿದೆ. ಅಮೇಲೆ ಶಿಕ್ಷಣ ಇಲಾಖೆ, ಅಲ್ಲಿನ ಅಧಿಕಾರಿಗಳು ಮತ್ತು ಸರ್ಕಾರಗಳಿಂದ ಉತ್ತಮ ಸಹಕಾರ ದೊರಕಿತು.
ನಮ್ಮ ಸಂಸ್ಥೆ ಸರ್ಕಾರಿ ಅನುದಾನಕ್ಕೆ ಒಳಪಟ್ಟು ಬೋಧಕರಿಗೆ ವೇತನ ಚಿಂತೆಯು ಮರೆಯಾಯಿತು. ಪಿಇಎಸ್ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಏನೆಲ್ಲಾ ಸೌಲಭ್ಯಗಳಿವೆ? ಭಾರತ ರತ್ನ ಸಿ.ಎನ್.ಆರ್.ರಾವ್ ಮತ್ತು ಎಂ.ಆರ್.ದೊರೆಸ್ವಾಮಿ ಹೆಸರಿನಲ್ಲಿ ಸ್ಕಾಲರ್‌ಶಿಪ್ ಯೋಜನೆ ರೂಪಿಸಲಾಗಿದೆ. ವರ್ಷಕ್ಕೆ 5 ಸಾವಿರ ವಿದ್ಯಾರ್ಥಿಗಳಿಗೆ 8 ಕೋಟಿ ರು.ಗೂ ಹೆಚ್ಚು ಹಣವನ್ನು ಸ್ಕಾಲರ್‌ಶಿಪ್ ಗಾಗಿ ವಿನಿಯೋಗಿಸಲಾಗುತ್ತದೆ. ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ. ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸುತ್ತವೆ. ನಮ್ಮ ವಿದ್ಯಾರ್ಥಿಗಳು 1 ಕೋಟಿಗೂ ಹೆಚ್ಚು ಆಫರ್‌ನೊಂದಿಗೆ ವೃತ್ತಿ ಜೀವನ ಆರಂಭಿಸಿದ್ದಾರೆ.
ಪಿಇಎಸ್ ಸಂಸ್ಥೆಯ ಸಮಾಜ ಸೇವಾ ಕಾರ್ಯಗಳ ಬಗ್ಗೆ ದಶಕದ ಹಿಂದೆ ರಾಯಚೂರಿನಲ್ಲಿ ಬಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಗುಡಿಹಾಳ ಗ್ರಾಮವನ್ನು ಸಂಪೂರ್ಣವಾಗಿ ದತ್ತು ಪಡೆದು 75 ಆರ್‌ಸಿಸಿ ಮನೆಗಳನ್ನು ನಿರ್ಮಿಸಿಕೊಡಲಾಯಿತು. ಬೆಳಗಾವಿ ಪ್ರವಾಹದಲ್ಲಿ ಹಾನಿಯಾಗಿದ್ದ 9 ಸರ್ಕಾರಿ ಶಾಲೆಗಳು ಮರು ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 40ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದು ನಿರ್ವಹಿಸಲಾಗುತ್ತಿದೆ. ಪಿಇಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ಬಜಾಜ್ ಸಂಸ್ಥೆಯಿಂದ ಕೌಶಲ್ಯ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿನ ಪಿಇಎಸ್ ಹೊರತಾದ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ, ಈ ಅವಧಿಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ ವತಿಯಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪಿಇಎಸ್ ಸಂಸ್ಥೆಯ ಸಮಾಜ ಸೇವಾ ಕಾರ್ಯಗಳ ಬಗ್ಗೆ
ದಶಕದ ಹಿಂದೆ ರಾಯಚೂರಿನಲ್ಲಿ ಬಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಗುಡಿಹಾಳ ಗ್ರಾಮವನ್ನು ಸಂಪೂರ್ಣವಾಗಿ ದತ್ತು ಪಡೆದು 75 ಆರ್‌ಸಿಸಿ ಮನೆಗಳನ್ನು ನಿರ್ಮಿಸಿಕೊಡಲಾಯಿತು. ಬೆಳಗಾವಿ ಪ್ರವಾಹದಲ್ಲಿ ಹಾನಿಯಾಗಿದ್ದ 9 ಸರ್ಕಾರಿ ಶಾಲೆಗಳು ಮರು ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 40ಕ್ಕೂ ಹೆಚ್ಚು ಶಾಲೆಗಳನ್ನು ದತ್ತು ಪಡೆದು ನಿರ್ವಹಿಸಲಾಗುತ್ತಿದೆ. ಪಿಇಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ಬಜಾಜ್ ಸಂಸ್ಥೆಯಿಂದ ಕೌಶಲ್ಯ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿನ ಪಿಇಎಸ್ ಹೊರತಾದ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ, ಈ ಅವಧಿಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ ವತಿಯಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ವಿವಿಗೆ ಪುತ್ರ ಪ್ರೊ. ಜವಹರ್ ದೊರೆಸ್ವಾಮಿ
ನನ್ನ ಪುತ್ರ ಪ್ರೊ. ಜವಹರ್ ಮತ್ತು ಆತನ ವಿಶೇಷ ತಂಡ ಪಿಇಎಸ್ ಶಿಕ್ಷಣ ಸಂಸ್ಥೆಯ ಬೆಳವಣಿಗೆ, ಪಿಇಎಸ್ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಹೊಸ ದಿಕ್ಕಿನಲ್ಲಿ ಮುನ್ನಡೆಯಲು ಮಹತ್ವದ ಪಾತ್ರ ವಹಿಸಿದ್ದಾರೆ. ಜಾಗತಿಕ ಗುಣಮಟ್ಟವನ್ನು ತಲುಪುವ ಗುರಿಯೊಂದಿಗೆ ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಹೊಸ ತಲೆಮಾರಿನ ಶಿಕ್ಷಣದ ಅಳವಡಿಕೆ, ಹೊಸ ಕೋರ್ಸ್‌ಗಳ ಪರಿಚಯ, ಮೂಲಸೌಕರ್ಯ ಅಭಿವೃದ್ಧಿ, ಬೋಧಕ ಸಿಬ್ಬಂದಿಗೆ ತರಬೇತಿ, ನಾವೀನ್ಯತೆಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಪ್ರೊ. ಜವಹರ್‌ತಂಡದ ಕೊಡುಗೆ ಮಹತ್ವದ್ದಾಗಿದೆ. ಎಂದು ಎಂ.ಆರ್.ದೊರೆಸ್ವಾಮಿ ಹೇಳಿದರು.
ಮೌಲ್ಯಯುತ ಶಿಕ್ಷಣದ ಗುರಿ
ಸಮಾಜದಲ್ಲಿ ಮೌಲ್ಯಗಳ ಕುಸಿಯುತ್ತಿವೆ. ಈ ಹಿನ್ನೆಲೆಯಲ್ಲಿ ನಿಯಮಿತವಾಗಿ ಮಕ್ಕಳಿಗೆ ಮೌಲ್ಯಗಳನ್ನು ತಿಳಿಸಲು ಗಣ್ಯರನ್ನು ಕರೆಸಿ ಉಪನ್ಯಾಸ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ವಿವಿಯಲ್ಲಿ ವಿವೇಕಾನಂದ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸುತ್ತೇವೆ. ಸರ್.ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮಾ ಗಾಂಧಿ ಅವರ ಜೀವನ ಮೌಲ್ಯಗಳು, ಸಂದೇಶಗಳನ್ನು ತಿಳಿಸಲು ಒಂದು ವಿಷಯವನ್ನು ಪರಿಚಯಿಸಿ ಕಿರು ಪರೀಕ್ಷೆ ಮತ್ತು ಕ್ರೆಡಿಟ್ ಅಂಕ ವ್ಯವಸ್ಥೆ ಪರಿಚಯಿಸುವ ಉದ್ದೇಶವಿದೆ ಎಂದು ಎಂ.ಆರ್.ದೊರೆಸ್ವಾಮಿ ತಿಳಿಸಿದರು. ವೈವಿಧ್ಯಮಯ ಕೋರ್ಸ್‌ಗಳ ಆಯ್ಕೆಗೆ ಅವಕಾಶ 1973ರಲ್ಲಿ ಪಿಯು ಕಾಲೇಜಿನಿಂದ ಆರಂಭವಾದ ಪಿಇಎಸ್ ಸಂಸ್ಥೆ 2024ರಲ್ಲಿ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಬನಶಂಕರಿ 100 ಅಡಿ ರಸ್ತೆಯಲ್ಲಿ ಪಿಇಎಸ್ ವಿಶ್ವವಿದ್ಯಾಲಯ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ಆಂಧ್ರಪ್ರದೇಶದ ಕುಪಂನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಾಗಿದೆ.
Education : ಅನ್ವೇಷಣೆ, ಆವಿಷ್ಕಾರಗಳೇ ಹೊಸತನದ ನಾಂದಿ, ಎಂ.ಆರ್.ದೊರೆಸ್ವಾಮಿ ಅಭಿಮತ
ಬೆಂಗಳೂರಿನಲ್ಲೇ ಪಿಯು, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆ ಕೋರ್ಸ್‌ಗಳು ಲಭ್ಯ ಇವೆ. ಪಾಲಿಟೆಕ್ನಿಕ್, ನರ್ಸಿಂಗ್, ಎಂಜಿನಿಯರಿಂಗ್, ಬಿಸಿನೆಸ್ ಮ್ಯಾನೇಜೆಂಟ್, ಹೊಟೇಲ್ ಮ್ಯಾನೇಜ್‌ಮೆಂಟ್, ಪ್ಯಾರಾ ಮೆಡಿಕಲ್, ಮೂರು ಸಿಬಿಎಸ್‌ಸಿ ಶಾಲೆಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಕೋರ್ಸ್‌ಗಳು ಲಭ್ಯ ಇವೆ ಎಂದು ಎಂ.ಆರ್. ದೊರೆಸ್ವಾಮಿ ಹೆಮ್ಮೆಯಿಂದ ತಿಳಿಸಿದರು. ಕೌಶಲ್ಯ, ಸಂಶೋಧನೆ, ತರಬೇತಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ, ಕೌಶಲ್ಯ ಮತ್ತು ತರಬೇತಿಗೆ ಆದ್ರತೆ ನೀಡಲಾಗುತ್ತದೆ. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿದ್ದಪಡಿಸಿದ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ನ್ಯಾನೋ ಸ್ಯಾಟಲೈಟ್ ಅನ್ನು ಇಸ್ರೋ ಕಕ್ಷೆಗೆ ಹಾರಿಸಿದೆ. ಇದಕ್ಕೂ ಮುನ್ನ ತಂತ್ರಜ್ಞಾನ ಸಾಮರ್ಥ್ಯ ಪ್ರದರ್ಶನಕ್ಕಾಗಿ ಸಿಂಧುನೇತ್ರಾ ಸ್ಯಾಟಲೈಟ್ ಅನ್ನು ನಮ್ಮ ವಿವಿಯ ವಿದ್ಯಾರ್ಥಿಗಳೇ ತಯಾರಿಸಿದ್ದಾರೆ. ಶಿಕ್ಷಣ ಎಂದರೆ ಕೌಶಲ್ಯ ನೀಡುವುದು ಮತ್ತು ಹೊಸತನ್ನು ಸಂಶೋಧಿಸುವ ಕುತೂಹಲ ಮತ್ತು ಆಸಕ್ತಿ ಮೂಡಿಸುವುದು ಎಂಬುದು ನಮ್ಮ ಮೂಲತತ್ವವಾಗಿದೆ. ಆದೇ ಕಾರಣಕ್ಕೆ ನಮ್ಮ ಸಂಸ್ಥೆಯೊಂದಿಗೆ ಯಶಸ್ಸು ಸದಾ ಇರುತ್ತದೆ ಎನ್ನುತ್ತಾರೆ ಎಂ.ಆರ್. ದೊರೆಸ್ವಾಮಿ.
ಹನುಮಂತ ನಗರದಲ್ಲಿ ವಿಶಿಷ್ಟ ಕಟ್ಟಡ ನಿರ್ಮಾಣ ಉದ್ದೇಶ
ಹನುಮಂತನಗರದ ನಮ್ಮ ಮೊದಲ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ಮತ್ತು ವಿಶಿಷ್ಟವಾದ ಕಟ್ಟಡವನ್ನು ನಿರ್ಮಿಸುವ ಯೋಜನೆಯಿದ್ದು, 2 ವರ್ಷಗಳಲ್ಲಿ ಸಾಕಾರಗೊಳಿಸುತ್ತೇವೆ. ನೂತನ ಕಟ್ಟಡದಲ್ಲೂ ಅನೇಕ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ ಎಂದು ಭವಿಷ್ಯದ ಆಲೋಚನೆಗಳ ಬಗ್ಗೆ ಎಂ.ಆರ್. ದೊರೆಸ್ವಾಮಿ ಅವರು ಮಾಹಿತಿ ಹಂಚಿಕೊಂಡರು.