ಪುಸ್ತಕ ಪ್ರಕಟಿಸಿ ಗಿನ್ನೆಸ್ ರೆಕಾರ್ಡ್ ಸೇರಿಸಿದ ಬ್ರಿಟನ್ 5ರ ಬಾಲೆ!

By Suvarna NewsFirst Published Jun 24, 2022, 3:36 PM IST
Highlights

*ಬೆಲ್ಲಾ ಜೇ ಡಾರ್ಕ್ ಹೊಸ ಗಿನ್ನೆಸ್ ರೆಕಾರ್ಡ್ ಮಾಡಿದ ಬ್ರಿಟಿಷ್ ಹುಡುಗಿ
*ಈಕೆ ದಿ ಲಾಸ್ಟ್ ಕ್ಯಾಟ್ ಎಂಬ ಪುಸ್ತಕವನ್ನು ಪ್ರಕಟಿಸುವ ಮೂಲಕ ಈ ದಾಖಲೆ ಮಾಡಿದ್ದಾಳೆ
*ಇದಕ್ಕೂ ಮೊದಲು ಶ್ರೀಲಂಕಾ ಹುಡುಗ ಮತ್ತು ಮೊತ್ತಬ್ಬಳು ಅತ್ಯಂತ ಕಿರಿಯ ಲೇಖಕರಾಗಿದ್ದರು.

ಸಾಧನೆ (Achievement)ಗೆ ಯಾವ ವಯಸ್ಸಾದರೇನು? ಸಾಧಿಸುವ ಛಲ, ಮನಸ್ಸು ಇದ್ದರೆ ಸಾಕು. ಅಂದುಕೊಂಡಿದ್ದನ್ನ ಮಾಡಿ ತೋರಿಸಬಹುದು. ಇದಕ್ಕೆ ಯಾವ ವಯಸ್ಸಾಗಲಿ, ಅಂಕ ಆಗಲಿ ಬೇಕಾಗಿಲ್ಲ. ಪುಟ್ಟ ಕಂದನಿಂದ ಹಿಡಿದು ಇಳಿವಯಸ್ಸಿನವರೆಗೂ ಸಾಧನೆ ಮಾಡಬಹುದು. ತಮಗೆ ಆಸಕ್ತಿಯಿರೋ ಯಾವುದೇ ವಿಷಯದಲ್ಲಿ, ಕ್ಷೇತ್ರದಲ್ಲಿ ಹೊಸದಾಗಿ ಏನನ್ನಾದ್ರೂ ಸಾಧಿಸಬಹುದು. ಮಹಾನ್ ಸಾಧನೆ ಮೂಲಕ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಬಹುದು. ವೈವಿದ್ಯಮಯ ಕ್ರೀಡೆ (Sports) ಗಳಲ್ಲಿ, ಗಾಯನ (Singing) , ಸ್ಫರ್ಧಾತ್ಮಕ ಪರೀಕ್ಷೆ (Competitive Examinations), ಸ್ಪೆಲ್ಲಿಂಗ್ ಸ್ಪರ್ಧೆ (Spelling Bee), ಕರಾಟೆ (Karate), ಡ್ರಾಯಿಂಗ್ , ಪೇಂಟಿಂಗ್ (Painting), ಸ್ಕೇಟಿಂಗ್, ಪ್ರಬಂಧ - ಹೀಗೆ ಹಲವು ವಿಭಾಗಗಳಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿರೋ ಅದೆಷ್ಟೋ ಸಾಹಸಿ ಪುಟಾಣಿ (Children) ಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ರೀತಿ ಇಂಗ್ಲೆಂಡ್ನ 5ರ ಹರೆಯದ ಪೋರಿಯೊಬ್ಬಳು ಪುಸ್ತಕ (Book) ಬರೆದು ಹೊಸ ದಾಖಲೆ ನಿರ್ಮಿಸಿದ್ದಾಳೆ.  ಯುನೈಟೆಡ್ ಕಿಂಗ್‌ಡಮ್ (United Kingdum) ವೇಮೌತ್‌ನಿಂದ ಬೆಲ್ಲಾ ಜೇ ಡಾರ್ಕ್ (Bella Jay Dark) ಎಂಬ 5 ವರ್ಷದ ಪುಟಾಣಿ, ‘ದಿ ಲಾಸ್ಟ್ ಕ್ಯಾಟ್’ (The Lost Cat) ಶೀರ್ಷಿಕೆಯ ಪುಸ್ತಕ ಬರೆದು ಗಿನ್ನಿಸ್ (Guinness) ರೆಕಾರ್ಡ್ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. 

ಜುಲೈ 4, 2016 ರಂದು ಜನಿಸಿದ ಬೆಲ್ಲಾ (Bella), ತನ್ನ ಸ್ವಯಂ ಪುಸ್ತಕವನ್ನು ಜನವರಿ 31, 2022 ರಂದು ಪ್ರಕಟ ಮಾಡಿಸಿದ್ದಾಳೆ. ಈ ಪುಟಾಣಿ ಪುಸ್ತಕ ಪ್ರಕಟಿಸಿದಾಗ ಕೇವಲ 5 ವರ್ಷ ಮತ್ತು 211 ದಿನಗಳು ಮಾತ್ರ. ಕುತೂಹಲಕಾರಿ ವಿಷಯ ಅಂದ್ರೆ, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಬೆಲ್ಲಾ ಮುರಿದಿದ್ದಾಳೆ. ಆಗಸ್ಟ್ 1964 ರಲ್ಲಿ ಗಿನ್ನಿಸ್ (Guinness) ದಾಖಲೆ ಮಾಡಿದ್ದ 6 ವರ್ಷದ ಪೋರಿ ಡೊರೊಥಿ ಸ್ಟ್ರೈಟ್ ಬುಕ್ ಬರೆದು ದಾಖಲೆ ನಿರ್ಮಿಸಿದ್ದಳು. ಇನ್ನು 2017ರ ಜನವರಿಯಲ್ಲಿ ಶ್ರೀಲಂಕಾ (Sri Lanka)ದ 4 ವರ್ಷದ ಪೋರ ತನುವಾನಾ ಸೆರಸಿಂಘೆ (Tanvana Seresinghe), ಪುಸ್ತಕ ಬರೆದು ಗಿನ್ನೆಸ್ ರೆಕಾರ್ಡ್ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದ. ಈ ಎಲ್ಲಾ ರೆಕಾರ್ಡ್ ಗಳನ್ನು  ಬ್ರಿಟನ್ ಪೋರಿ ಬೆಲ್ಲಾ ಸರಿಗಟ್ಟಿದ್ದಾಳೆ.   

ಗಿನ್ನಿಸ್ ರೆಕಾರ್ಡ್ ಸಂಸ್ಥೆ ನಿಯಮಗಳ ಪ್ರಕಾರ, ಯಾವುದೇ ಪುಸ್ತಕವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಶೀರ್ಷಿಕೆಗೆ ಅರ್ಹತೆ ಪಡೆಯಬೇಕಂದರೆ, ಅದು ವಾಣಿಜ್ಯ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಬೇಕು. ಕನಿಷ್ಠ 1,000 ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಬೇಕು. ಬೆಲ್ಲಾ ಜೇ ಡಾರ್ಕ್ರ ಪುಸ್ತಕ ‘ದಿ ಲಾಸ್ಟ್ ಕ್ಯಾಟ್ (The lost Cat)’, ಬೆಕ್ಕಿನ ಕಥೆಯನ್ನು ಹೇಳುತ್ತದೆ. ರಾತ್ರಿ ವೇಳೆ ದಾರಿತಪ್ಪಿ ಹೋಗುತ್ತಿರುವ ಒಂದು ಬೆಕ್ಕು, ತನ್ನ ತಾಯಿ ಇಲ್ಲದೆ ಹೊರಗೆ ಹೋಗಬಾರದು ಅಂತ  ಅರಿತುಕೊಳ್ಳುವುದೇ ಈ ಕಥೆಯ ತಿರುಳು. ಏಕಾಂಗಿಯಾಗಿ ಹೊರಗೆ ಹೋದ್ರೆ ದಾರಿ ತಪ್ಪುತ್ತೇವೆ ಎಂಬ ಸಂದೇಶವನ್ನು ಪುಟ್ಟ ಮಕ್ಕಳಿಗೆ ಸಾರಿ ಹೇಳುತ್ತದೆ.

ಸಮುದ್ರಯಾನ ಇಷ್ಟನಾ? ಹಾಗಿದ್ದರೆ ಶಿಪ್ ಕೆಟರಿಂಗ್ ಕೋರ್ಸ್ ಮಾಡಿ!

 ಅಂದಹಾಗೇ ಬೆಲ್ಲಾ, ಈ ಪುಸ್ತಕ ಬರೆಯಲು ವಾಟ್ ದಿ ಲೇಡಿಬರ್ಡ್ ಹರ್ಡ್, ಸ್ಪ್ಲಾಟ್ ದಿ ಕ್ಯಾಟ್ ಮತ್ತು ಡೈರಿ ಆಫ್ ಎ ವಿಂಪಿ ಕಿಡ್‌ನಂತಹ ಪುಸ್ತಕಗಳಿಂದ ಸ್ಫೂರ್ತಿ ಪಡೆದಿದ್ದಾಳೆ.  ಪುಸ್ತಕವನ್ನು ಬರೆಯಲು ಮತ್ತು ವಿವರಿಸಲು ಬೆಲ್ಲಾಳ ತಾಯಿ ಚೆಲ್ಸಿ ಸೈಮ್ ಸಹಾಯ ಮಾಡಿದ್ದಾರೆ. 3 ವರ್ಷದವಳಿದ್ದಾಗಿಂದಲೂ ಬೆಲ್ಲಾಗೆ ಕಥೆ ಬರೆಯುವುದು ಅಂದ್ರೆ ಬಹಳ ಇಷ್ಟ ಅಂತೆ.   ಬೆಲ್ಲಾಳ ಸಾಧನೆಯ ಅಧಿಕೃತ ದೃಢೀಕರಣವನ್ನು ಕೆಲ ದಿನಗಳ ಹಿಂದಷ್ಟೇ  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್  ಆಕೆಯ ತಾಯಿಗೆ ಕಳುಹಿಸಿತು. "ಬೆಲ್ಲಾಳ ಅಕ್ಕ ಲೇಸಿ ಮೇ, ಕೂಡ ಸಹೋದರಿಗೆ ನೆರವಾಗಿದ್ದಾಳೆ.  ಪುಸ್ತಕ ಹಿಂಭಾಗ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ರೇಖಾಚಿತ್ರಗಳನ್ನು ಸ್ವತಃ ಬೆಲ್ಲಾಳೇ ಮಾಡಿದ್ದಾಳೆ" ಅಂತಾರೆ ತಾಯಿ ಸೈಮ್.  

ವಾಣಿಜ್ಯ ವಿಭಾಗದಲ್ಲಿ ಎಷ್ಟೊಂದು ಕೋರ್ಸು? ನಿಮಗೆ ಯಾವುದು ಸೂಕ್ತ?

click me!