ಕರ್ನಾಟಕದಲ್ಲಿ ಆಸ್ಟ್ರೇಲಿಯಾ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ?

By Kannadaprabha News  |  First Published Nov 16, 2024, 11:30 AM IST

ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಹಕಾರದೊಂದಿಗೆ ನೀವು ಕಾರ್ಯನಿರ್ವಹಿಸಬಹುದು. ವಿವಿಗಳ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳನ್ನು ನಡೆಸಬಹುದು. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ 


ಬೆಂಗಳೂರು(ನ.16):  ಕರ್ನಾಟಕದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡುವಂತೆ ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ನಿಯೋಗ ಮನವಿ ಮಾಡಿದೆ. 

ಶುಕ್ರವಾರ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಕುಲಪತಿ ಸೇರಿ ಇತರ ಅಧಿಕಾರಿಗಳು ಹಾಗೂ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಮೆಕ್‌ಗೀಚಿ ನೇತೃತ್ವದ ನಿಯೋಗ, ರಾಜ್ಯದಲ್ಲಿ ಸ್ವತಂತ್ರ ಕೃಷಿ ವಿವಿ ಸ್ಥಾಪಿಸು ವುದು ಅಥವಾ ರಾಜ್ಯದ ಕೃಷಿ ವಿವಿಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿದ್ದೇವೆ. ಕೃಷಿಯಲ್ಲಿ ನೀರು ನಿರ್ವಹಣೆ, ತಾಂತ್ರಿಕತೆ ಅಳವಡಿಕೆ, ಆಹಾರ ಸಂಸ್ಕರಣೆಯಂತ ವಿಷಯಗಳಲ್ಲಿ ಹೊಸ ಆವಿಷ್ಕಾರಗಳಿಗೆ ನಮ್ಮ ವಿವಿ ಆದ್ಯತೆ ನೀಡಲಿದೆ. ಇದಕ್ಕಾಗಿ ಬೆಂಗಳೂರಲ್ಲಿ 30 ಸಾವಿರ ಚದರ ಅಡಿ ಸ್ಥಳ ನೀಡುವಂತೆ ಮನವಿ ಮಾಡಿದೆ. 

Tap to resize

Latest Videos

undefined

ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಧಾರವಾಡ ಕೃಷಿ ವಿವಿ ಕುಲಪತಿ ಮತ್ತು ರೆಜಿಸ್ಟರ್ ಮಧ್ಯ ಮನಸ್ತಾಪ!

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಸಹಕಾರದೊಂದಿಗೆ ನೀವು ಕಾರ್ಯನಿರ್ವಹಿಸಬಹುದು. ವಿವಿಗಳ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳನ್ನು ನಡೆಸಬಹುದು. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. 

ಶಾಲಿನಿ ರಜನೀಶ್ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಹಯೋಗದಲ್ಲಿ ಕೃಷಿ ಸಂಬಂಧ ಪ್ರಯೋಗಾಲಯ ಗಳನ್ನು ಸ್ಥಾಪಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅಲ್ಲದೆ, ಬೆಂಗಳೂರು ಹೊರತಾಗಿ ಧಾರವಾಡ ಸೇರಿ ರಾಜ್ಯದ ಇತರ ಭಾಗಗಳಲ್ಲೂ ವಿವಿ ಸ್ಥಾಪನೆ ಬಗ್ಗೆ ಚಿಂತಿಸಬೇಕು ಎಂದು ತಿಳಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ್, ವೆಸ್ಟ್ ಸಿಡ್ನಿ ವಿವಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

click me!