ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ವಿಧಿಸಲಾಗಿದ್ದ ವಿವಿಧ ಕಠಿಣ ಮಾನದಂಡಗಳಿಗೆ 2023-24ನೇ ಸಾಲಿನ ಮಟ್ಟಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದ್ದರೂ ಇನ್ನೂ ಕೂಡ ಸಾವಿರಾರು ಅನುದಾನರಹಿತ ಖಾಸಗಿ ಶಾಲೆಗಳು ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆದುಕೊಳ್ಳದೆ ನಿರ್ಲಕ್ಷ್ಯ ತೋರಿವೆ. ಇಂತಹ ಶಾಲೆಗಳಿಗೆ ಮಾನ್ಯತೆ ನವೀಕರಣಕ್ಕೆ ಕೊನೆಯ ಅವಕಾಶ ನೀಡಲಾಗಿದೆ.
ಬೆಂಗಳೂರು (ನ.27): ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ವಿಧಿಸಲಾಗಿದ್ದ ವಿವಿಧ ಕಠಿಣ ಮಾನದಂಡಗಳಿಗೆ 2023-24ನೇ ಸಾಲಿನ ಮಟ್ಟಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದ್ದರೂ ಇನ್ನೂ ಕೂಡ ಸಾವಿರಾರು ಅನುದಾನರಹಿತ ಖಾಸಗಿ ಶಾಲೆಗಳು ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಪಡೆದುಕೊಳ್ಳದೆ ನಿರ್ಲಕ್ಷ್ಯ ತೋರಿವೆ. ಇಂತಹ ಶಾಲೆಗಳಿಗೆ ಮಾನ್ಯತೆ ನವೀಕರಣಕ್ಕೆ ಕೊನೆಯ ಅವಕಾಶ ನೀಡಲಾಗಿದೆ.
ಅನೇಕ ಶಾಲೆಗಳು ಮಾನ್ಯತೆ ಪಡೆದುಕೊಳ್ಳಲು ಅರ್ಜಿಯನ್ನೂ ಸಲ್ಲಿಸದೆ ವಿಳಂಬ ಮಾಡುತ್ತಿರುವುದರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು 2024ರ ಮಾರ್ಚ್- ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಲು ಶಿಕ್ಷಣ ಇಲಾಖೆಗೆ ಸಮಸ್ಯೆ ಎದುರಾಗಿದೆ. ಇದರಿಂದ ಇಂತಹ ಶಾಲೆಗಳಿಗೆ ಮಾನ್ಯತೆ ನವೀಕರಣಕ್ಕೆ ನ.29ರವರೆಗೆ ಅವಕಾಶ ನೀಡಿ ಅರ್ಜಿ ಸಲ್ಲಿಕೆಗೆ ಈ ಮಾಸಾಂತ್ಯದವರೆಗೂ ಅವಕಾಶ ಕಲ್ಪಿಸಿದೆ. ಈ ಅವಧಿಯಲ್ಲೂ ಮಾನ್ಯತೆ ಪಡೆಯದ ಶಾಲೆಗಳು ಅನಧಿಕೃತ ಶಾಲೆಗಳೆಂಬ ಹಣೆಪಟ್ಟಿಗೆ ಗುರಿಯಾಗುವ ಸಾಧ್ಯತೆ ಇದೆ.
undefined
9,000 ಕೋಟಿ ರೂ ದಂಡ ಪಾವತಿಗೆ ಇಡಿ ನೋಟಿಸ್ ವರದಿ, ಸ್ಪಷ್ಟನೆ ನೀಡಿದ ಕಂಪನಿ!
ಖಾಸಗಿ ಶಾಲೆಗಳ ನಿರ್ಲಕ್ಷ್ಯ ಧೋರಣೆಯನ್ನು ಶಾಲಾ ಶಿಕ್ಷಣ ಆಯುಕ್ತರಾದ ಬಿ.ಬಿ.ಕಾವೇರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ವಿವಿಧ ಜಿಲ್ಲಾ ಉಪನಿರ್ದೇಶಕರು (ಡಿಡಿಪಿಐ) ಗಮನಕ್ಕೆ ತಂದಿದ್ದಾರೆ. ಅಂತಹ ಶಾಲೆಗಳನ್ನು ನಿಯಮಾನುಸಾರ ಅನಧಿಕೃತ ಶಾಲೆಗಳೆಂದು ಪರಿಗಣಿಸಬೇಕಿರುವುದರಿಂದ ಆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೂ ತೊಂದರೆಯಾಗಲಿದೆ. ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಪ್ರವೇಶ ಪಡೆದ ಮಕ್ಕಳ ಶುಲ್ಕ ಮರುಪಾವತಿಗೂ ಅವಕಾಶವಾಗುವುದಿಲ್ಲ ಎಂಬ ಅಂಶವನ್ನು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 20 ಸಾವಿರ ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಈ ಪೈಕಿ ಸುಮಾರು 10 ಸಾವಿರ ಶಾಲೆಗಳಿಗೆ ಕಳೆದ ಎರಡು ವರ್ಷಗಳಲ್ಲಿ ಮುಂದಿನ ಐದು ವರ್ಷಗಳಿಗೆ ಅನ್ವಯಿಸುವಂತೆ ಮಾನ್ಯತೆ ಪಡೆದಿವೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಅಂಕಿ ಅಂಶಗಳನ್ನು ನೀಡಿಲ್ಲ.
ಉಳಿದ 9 ಸಾವಿರ ಶಾಲೆಗಳ ಪೈಕಿ 8,157 ಶಾಲೆಗಳು ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿವೆ. ಇದರಲ್ಲಿ 641 ಶಾಲೆಗಳ ಅರ್ಜಿಗಳು ಸರಿಯಾದ ದಾಖಲೆಗಳನ್ನು ನೀಡದ ಕಾರಣಕ್ಕೆ ತಿರಸ್ಕೃತವಾಗಿವೆ. ((((ಇನ್ನುಳಿದ 800ಕ್ಕೂ ಹೆಚ್ಚು ಶಾಲೆಗಳು ಅರ್ಜಿಯನ್ನೇ ಹಾಕಿಲ್ಲ. ಇದೀಗ ಅರ್ಜಿ ತಿರಸ್ಕೃತವಾದ ಮತ್ತು ಅರ್ಜಿಯನ್ನೇ ಹಾಕದ ಒಟ್ಟು 1500 ಶಾಲೆಗಳಿಗೆ ನ.29ರೊಳಗೆ ಅರ್ಜಿ ಸಲ್ಲಿಸಿ ಮಾನ್ಯತೆ ಪಡೆದುಕೊಳ್ಳಲು ಇಲಾಖೆ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು ವಿವಿ ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆ; ವಿದ್ಯಾರ್ಥಿಗಳು ಪ್ರತಿಭಟನೆ
ಖಾಸಗಿ ಶಾಲೆಗಳ ಮನವಿಗೆ ಸ್ಪಂದಿಸಿ ಮಾನ್ಯತೆ ನವೀಕರಣಕ್ಕೆ ಇಲಾಖೆಯು ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಿರುವುದು ಸ್ವಾಗತಾರ್ಹ. ಆದರೆ, ಸರ್ಕಾರ ವಿನಾಯಿತಿ ನೀಡಿರುವ ವಿಚಾರಗಳಿಗೂ ಡಿಡಿಪಿಐಗಳು ದಾಖಲೆ ಸಲ್ಲಿಸದಿದ್ದರೆ ಅರ್ಜಿ ತಿರಸ್ಕರಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಹಲವು ಶಾಲೆಗಳ ಅರ್ಜಿ ಸಲ್ಲಿಕೆ ವಿಳಂಬಕ್ಕೆ ಕಾರಣವಾಗಿದೆ. ((((ಈ ಸಂಬಂಧ ಡಿಡಿಪಿಐಗಳಿಗೆ ಆಯುಕ್ತರು ಸ್ಪಷ್ಟ ಸೂಚನೆ ನೀಡಬೇಕೆಂದು ಕೋರುತ್ತೇವೆ.))))
- ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್