ಚಿತ್ರದುರ್ಗ: ನರ್ಸಿಂಗ್ ವಿದ್ಯಾರ್ಥಿಗಳಿಗೆ ಟಾರ್ಚರ್‌, ಡ್ಯೂಟಿ ಮಾಡಲ್ಲ ಅಂದ್ರೆ ಪರೀಕ್ಷೆಗೆ ಕೂರಿಸಲ್ಲ ಅಂತ ಬೆದರಿಕೆ..!

By Girish GoudarFirst Published Nov 26, 2023, 11:47 AM IST
Highlights

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆವರಣದಲ್ಲೇ‌ ಇರುವ ಸರ್ಕಾರಿ‌ ನರ್ಸಿಂಗ್‌ ಕಾಲೇಜಿನಲ್ಲಿ 180 ಜನ ವಿಧ್ಯಾರ್ಥಿಗಳು ಬಿಎಸ್‌ಸಿ ನರ್ಸಿಂಗ್‌ ತರಬೇತಿ‌ ಪಡೆಯುತಿದ್ದಾರೆ. ಆದ್ರೆ, ಇಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಯಾವ್ದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಸೌಲಭ್ಯ ಕಲ್ಪಿಸಿ ಅಂತ ಕಳೆದ ಎರಡು ತಿಂಗಳ ಹಿಂದೆ‌ ಚಿತ್ರದುರ್ಗದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣಪ್ರಕಾಶ್ ಪಾಟೀಲ್ ಬಂದಾಗ, ಪ್ರತಿಭಟಿಸಿದ್ದ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ರು.

ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ನ.26):  ಸರ್ಕಾರಿ ಸೀಟು ಸಿಕ್ರೆ ನರ್ಸಿಂಗ್ ಹಾಗೂ ತರಬೇತಿ ಸಲೀಸು ಅಂತಾರೆ. ಆದ್ರೆ ಇಲ್ಲೊಂದು ಸರ್ಕಾರಿ‌ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಓದೋದಕ್ಕಿಂತ ಹೆಚ್ಚಾಗಿ ಡ್ಯೂಟಿ ಮಾಡಬೇಕಂತೆ. ಒಂದು ವೇಳೆ ಡ್ಯೂಡಿ ಮಾಡಲ್ಲ ಅಂದ್ರೆ ಪರೀಕ್ಷೆಗೆ ಕೂರಿಸಲ್ಲ ಅಂತ ಬೆದರಿಸ್ತಾರಂತೆ. ಅಷ್ಟಕ್ಕೂ ಈ ಸಮಸ್ಯೆ ಇರೋದಾದ್ರು ಎಲ್ಲಿ ಅಂತೀರ..! ಈ ಸ್ಟೋರಿ ನೋಡಿ..

ಹೀಗೆ ಡ್ಯೂಟಿ‌ ಮಾಡ್ತಿರೊ ಬಿಎಸ್ಸಿ ನರ್ಸಿಂಗ್ ವಿಧ್ಯಾರ್ಥಿಗಳು. ಪ್ರಾಂಶುಪಾಲರು ಹಾಗೂ ಜಿಲ್ಲಾ‌ ಸರ್ಜನ್ ವಿರುದ್ಧ‌ ವಿದ್ಯಾರ್ಥಿಗಳ‌ ಹಿಡಿಶಾಪ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ, ಹೌದು, ಆಸ್ಪತ್ರೆಯ ಆವರಣದಲ್ಲೇ‌ ಸರ್ಕಾರಿ‌ ನರ್ಸಿಂಗ್‌ ಕಾಲೇಜಿದೆ. ಇಲ್ಲಿ 180 ಜನ ವಿಧ್ಯಾರ್ಥಿಗಳು ಬಿಎಸ್‌ಸಿ ನರ್ಸಿಂಗ್‌ ತರಬೇತಿ‌ ಪಡೆಯುತಿದ್ದಾರೆ. ಆದ್ರೆ, ಇಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಯಾವ್ದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಸೌಲಭ್ಯ ಕಲ್ಪಿಸಿ ಅಂತ ಕಳೆದ ಎರಡು ತಿಂಗಳ ಹಿಂದೆ‌ ಚಿತ್ರದುರ್ಗದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣಪ್ರಕಾಶ್ ಪಾಟೀಲ್ ಬಂದಾಗ, ಪ್ರತಿಭಟಿಸಿದ್ದ  ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ರು. ಇದನ್ನು ಸಹಿಸಲಾಗದ ಜಿಲ್ಲಾ ಸರ್ಜನ್‌‌ ರವೀಂದ್ರ ಹಾಗು ನರ್ಸಿಂಗ್‌ ಕಾಲೇಜು ಪ್ರಿನ್ಸಿಪಾಲ್ ಅನುಸೂಯ ಅವರು ವಿದ್ಯಾರ್ಥಿಗಳ ವಿರುದ್ಧ ಹಗೆತನ ಸಾಧಿಸ್ತಿದ್ದೂ, ನಿರಂತರವಾಗಿ ನೈಟ್ ಡ್ಯೂಟಿ ಹಾಕ್ತಿದ್ದಾರಂತೆ. ಅಲ್ಲದೇ ಒಂದು ವಾರ್ಡ್ ಗೆ ಮೂವರು ನರ್ಸ್‌ಗಳು ಕರ್ತವ್ಯ ನಿರ್ವಹಿಸಿದ್ರು, ಸಹ ಕಷ್ಟ ಎನಿಸುವ ಜಿಲ್ಲಾಸ್ಪತ್ರೆಯ ಮೂರು ವರ್ಡ್ ಗೆ ಕೇವಲ‌ ಓರ್ವ ಸ್ಟಾಫ್ ನರ್ಸ್ ಗೆ ಡ್ಯೂಟಿಗೆ ನೇಮಿಸುವ ಪರಿಣಮ ಎಲ್ಲಾ ರೋಗಿಗಳ ಶುಶ್ರೂಷೆಯನ್ನು ವಿದ್ಯಾರ್ಥಿಗಳೇ‌ ಮಾಡಬೇಕಂತೆ. ಒಂದು ವೇಳೆ ನೈಟ್ ಡ್ಯೂಟಿ‌ ಮಾಡಲ್ಲ ಅಂದ್ರೆ ಪರೀಕ್ಷೆಗೆ ಕೂರಿಸಲ್ಲ ಹಾಗೂ ಇಂಟರ್ ನಲ್ ಅಂಕ ಕೊಡಲ್ಲ ಅಂತ ಬ್ಲಾಕ್ ಮೇಲ್ ಮಾಡ್ತಾರೆಂಬ ಗಂಭೀರ ಆರೋಪ ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ‌. 

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲುವುದು ಖಚಿತ: ಕೇಂದ್ರ ಸಚಿವ ಭಗವಂತ್ ಖೂಬಾ

ಇ‌ನ್ನು ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಅವರನ್ನು ಕೇಳಿದ್ರೆ, ಆ ವಿದ್ಯಾರ್ಥಿಗಳು ಸರ್ಕಾರಿ ನಿಯಮದಂತೆ ಪ್ರಾಕ್ಟಿಕಲ್ ಗೆ ಹಾಜಾರಾಗಿಲ್ಲ. ಹೀಗಾಗಿ ಅವರ ಮನವಿ ಮೇರೆಗೆ ಜಿಲ್ಲಾಸ್ಪತ್ರೆಯಲ್ಲಿ ಡ್ಯೂಟಿ ಮಾಡುವಂತೆ ತಿಳಿಸಿದ್ದೇವೆ. ನಾವು ಅವರಿಗೆ ಯಾವ್ದೇ ಟಾರ್ಚರ್ ಕೊಟ್ಟಿಲ್ಲ ಅಂತ ಸಮಜಾಯಿಷಿ ಕೊಡ್ತಾರೆ.

ಹಾಗೆಯೇ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ,ರವೀಂದ್ರ ಮಾತನಾಡಿ, ಸ್ಟಾಫ್ ಸಮಸ್ಯೆ ಇದೆ ಹೀಗಾಗಿ ‌ವಿದ್ಯಾರ್ಥಿಗಳನ್ನು ಬಳಸ್ಕೋತಿವಿ ಅಂತಾರೆ.

ಒಟ್ಟಾರೆ ಸರ್ಕಾರಿ ಕಾಲೇಜು ಅಂತ ಇಷ್ಟಪಟ್ಟು ಚಿತ್ರದುರ್ಗಕ್ಕೆ ಬಂದ ನರ್ಸಿಂಗ್ ವಿದ್ಯಾರ್ಥಿಗಳು ಯಾತನೆ ಅನುಭವಿಸುವಂತಾಗಿದೆ. ಓದೋದಕ್ಕಿಂತ ಹೆಚ್ಚಾಗಿ ಜಿಲ್ಲಾಸ್ಪತ್ರೆಯಲ್ಲಿ ನೈಟ್ ಡ್ಯೂಟಿ ಮಾಡೋದೇ ಹೆಚ್ಚಾಗಿದೆ. ಹೀಗಾಗಿ ಈ ವಿದ್ಯಾರ್ಥಿಗಳ ಸಂಕಷ್ಟ‌ ಪರಿಹಾರಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

click me!