ಈ ಬಾರಿಯ ಎಸ್​ಎಸ್​​ಎಲ್​ಸಿ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

By Gowthami K  |  First Published May 20, 2024, 6:15 PM IST

ಎಸ್​ಎಸ್​​ಎಲ್​ಸಿ ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರು (ಮೇ.20): ಈಗಾಗಲೇ ಕರ್ನಾಟಕ ಸರ್ಕಾರ ಮುಂದಿನ ವರ್ಷದಿಂದ ಎಸ್​ಎಸ್​​ಎಲ್​ಸಿ ಗ್ರೇಸ್ ಮಾರ್ಕ್ ನೀಡದಿರಲು ತೀರ್ಮಾನಿಸಿದ್ದು, ಎಸ್‌ಎಲ್‌ಎಲ್‌ಸಿ ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕರ್ನಾಟಕ ಸರ್ಕಾರ ಮುಂದಿನ ವರ್ಷದಿಂದ ಎಸ್​ಎಸ್​​ಎಲ್​ಸಿ ಗ್ರೇಸ್ ಮಾರ್ಕ್ (SSLC Grace Marks) ರದ್ದು ಮಾಡುವಂತೆ ಸೂಚನೆ ಹೊರಬಿದ್ದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೇರ್ಗಡೆಗೆ ಕನಿಷ್ಠ ಅಂಕವನ್ನು 35ರಿಂದ 25ಕ್ಕೆ ಶಿಕ್ಷಣ ಇಲಾಖೆ ಇಳಿಸಿತ್ತು.  ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವರದಿ ನೀಡಿತ್ತು. ಇದಕ್ಕೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಳ್ಳಲಾಗಿತ್ತು. ಗ್ರೇಸ್‌ ಮಾರ್ಕ್ ಮುಂದಿನ ವರ್ಷದಿಂದ ರದ್ದು ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿತ್ತು.

Tap to resize

Latest Videos

undefined

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ; ಪೋಷಕರ ಪಾಲಿಗೆ ನುಂಗಲಾರದ ತುತ್ತು!

ಇದೀಗ ಈ ಸಂಬಂಧ ಉಡುಪಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿ, ಎರಡು ಮತ್ತು ಮೂರನೇ ಪೂರಕ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ. 20 ಗ್ರೇಸ್ ಮಾರ್ಕ್  ಇರುತ್ತಾ ಎಂದು ಹಲವರಿಗೆ ಸಂಶಯ ಇದೆ. ಉಡುಪಿ ದಕ್ಷಿಣ ಕನ್ನಡ ಯಾವತ್ತೂ ಟಾಪರ್ಸ್ ಆಗಿ ಇರುತ್ತಿದ್ದರು. ನಂತರ ರಿಸಲ್ಟ್ ನಲ್ಲಿ ಇಳಿಮುಖವಾಯಿತು. ಈಗ ಮತ್ತೆ ಉಡುಪಿ, ಮಂಗಳೂರು ಟಾಪರ್ಸ್ ಆಗಿದೆ. ನಾವು ಪರೀಕ್ಷೆಯ ಪವಿತ್ರತೆಯನ್ನು ಉಳಿಸಿದ್ದೇವೆ. ಪರೀಕ್ಷೆಗಳ ಪವಿತ್ರತೆ ಉಳಿಸಲು 20 ಗ್ರೇಸ್ ಮಾರ್ಕ್ ನೀಡಲಾಗಿದೆ. ಅಗತ್ಯವಿದ್ದವರು ಎರಡು ಮತ್ತು ಮೂರನೇ ಪರೀಕ್ಷೆ ತೆಗೆದುಕೊಳ್ಳಬಹುದು. ಗ್ರೇಸ್ ಮಾರ್ಕ್ ಪಡೆದವರು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯುತ್ತಿದ್ದಾರೆ.

ಗ್ರೇಸ್ ಮಾರ್ಕ್ ನೀಡಿರುವುದು ಈ ವರ್ಷಕ್ಕೆ ಮಾತ್ರ. ನಾವೀಗ ಎಲ್ಲಿದ್ದೇವೆ ಅನ್ನೋದು ಅರಿವಿಗೆ ಬಂದಿದೆ. ಇಲಾಖೆಯನ್ನು ಸಮರ್ಥವಾಗಿ ನಡೆಸಿಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ. ಎರಡನೇ ಮತ್ತು ಮೂರನೇ ಪರೀಕ್ಷೆಗೆ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ತಂದೆ-ತಾಯಿ, ಅಜ್ಜಿ-ತಾತ ಗಲಾಟೆ: ಮಗುವಿನ ವಿದ್ಯೆಗೆ ಕುತ್ತು..!

ಶಾಲೆ ಪುನಾರಾರಂಭ ವಿಚಾರವಾಗಿ ಮಾತನಾಡಿ, ಪುಸ್ತಕಗಳು ಯುನಿಫಾರ್ಮ್ ಎಲ್ಲವೂ ಇದೆ. ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸವಲತ್ತು ತಲುಪಲಿದೆ. 27 ನೇ ತಾರೀಖಿನಿಂದ ನಲಿ ಕಲಿ ಆರಂಭವಾಗುತ್ತೆ. ಈ ಬಾರಿ ಕೆ ಪಿ ಎಸ್ ಶಾಲೆಗಳು ಬರುತ್ತವೆ. ಕೆಪಿಎಸ್ ಶಾಲೆಗಳ ಬಗ್ಗೆ ನಮ್ಮ ಸರಕಾರ ಬದ್ಧತೆ ಹೊಂದಿದೆ. ಐನೂರು ಶಾಲೆಗಳನ್ನು ಇಡೀ ರಾಜ್ಯದ್ಯಂತ ತೆರೆಯುತ್ತೇವೆ. ಮುಂದಿನ ಮೂರು ವರ್ಷಗಳಲ್ಲಿ 3000 ಶಾಲೆ ತೆರೆಯುತ್ತೇವೆ. ಈ ಶೈಕ್ಷಣಿಕ ವರ್ಷದಿಂದ ಮುಂದಿನ ಮೂರು ವರ್ಷದೊಳಗೆ ಮೂರು ಸಾವಿರ ಕೆಪಿಎಸ್ ಶಾಲೆಗಳು ಆರಂಭವಾಗಲಿದೆ. ಕೆಪಿಎಸ್ ಶಾಲೆಗಳಿಗೆ ತುಂಬಾ ಬೇಡಿಕೆ ಇದೆ ಒಳ್ಳೆ ಫಲಿತಾಂಶ ಬರುತ್ತದೆ. ಸಿಎಸ್ಆರ್ ಫಂಡ್ ನಿಂದ ಅನುದಾನ ವ್ಯವಸ್ಥೆ ಮಾಡಲಾಗುವುದು. ಡಿಸಿಎಂ ಡಿಕೆ ಶಿವಕುಮಾರ್ ಫಂಡ್ ಕಲೆಕ್ಷನ್ ಜವಾಬ್ದಾರಿ ವಹಿಸಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮೂರರಿಂದ ಆರು ಶಾಲೆಗಳು ತೆರೆಯಲಿವೆ ಎಂದಿದ್ದಾರೆ.

ಕಾನೂನಿನ ಪ್ರಕಾರ ಎಲ್ ಕೆ ಜಿ ಸೇರುವ ಮಕ್ಕಳಿಗೆ ನಾಲ್ಕು ವರ್ಷ ಪೂರ್ಣವಾಗಬೇಕು.  ಈ ವಿಚಾರದಲ್ಲಿ ಸಡಲಿಕೆ ಸಾಧ್ಯವಿಲ್ಲ. ಆದೇಶವನ್ನು ನಾವು ಕಡ್ಡಾಯವಾಗಿ ಫಾಲೋ ಮಾಡುತ್ತೇವೆ. ವ್ಯತ್ಯಾಸ ಮಾಡಿದರೆ ಮಗು ಹುಟ್ಟಿದಾಗಲೇ ಶಾಲೆಗೆ ಸೇರಿಸಬೇಕಾಗುತ್ತದೆ. ಅಧ್ಯಯನದ ಮೂಲಕ ಈ ಕಾನೂನು ಮಾಡಿದ್ದಾರೆ. 

click me!