ಇಂಗ್ಲೀಷ್‌ ಜ್ಞಾನದ ಬಗ್ಗೆ ಟೀಕೆಗೊಳಗಾಗುತ್ತಿದ್ದ ಯುವತಿ ಈಗ ಐಎಎಸ್‌ ಅಧಿಕಾರಿ..!

By BK AshwinFirst Published Jul 25, 2022, 12:37 PM IST
Highlights

ಮೊದಲನೇ ಬಾರಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಉತ್ತಮ ರ‍್ಯಾಂಕ್ ಪಡೆದ ಸುರಭಿ ಗೌತಮ್ ಉತ್ತಮ ಉದಾಹರಣೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ತನ್ನನ್ನು ತಾನು ಮುನ್ನಡೆಸಿಕೊಂಡು ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಆಗುವ ಮೂಲಕ ಸಾವಿರಾರು ಆಕಾಂಕ್ಷಿಗಳಿಗೆ ಈಕೆ ಸ್ಫೂರ್ತಿಯಾಗಿದ್ದಾಳೆ.

ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸು ಹಲವರಲ್ಲಿ ಇರುತ್ತದೆ. ಈ ಹಿನ್ನೆಲೆ ಪ್ರತಿವರ್ಷ ಲಕ್ಷಾಂತರ ಜನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ, ಕೆಲವರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ. ಅಲ್ಲದೆ, ಕೆಲವು ಆಕಾಂಕ್ಷಿಗಳು ಹಲವು ವರ್ಷಗಳ ಕಾಲ ಪರೀಕ್ಷೆಗಾಗಿ ಪ್ರಯತ್ನ  ಮಾಡೋದಲ್ಲದೆ ಪ್ರತಿ ವರ್ಷ ಪರೀಕ್ಷೆಯನ್ನೂ ಬರೆಯುತ್ತಾರೆ. ಆದರೆ, ಕೆಲವರು ಮಾತ್ರ ಮೊದಲನೇ ಪ್ರಯತ್ನದಲ್ಲೇ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸ್‌ ಮಾಡುತ್ತಾರೆ. 

ಈ ಪೈಕಿ ಮೊದಲನೇ ಬಾರಿಯೇ ಯುಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಉತ್ತಮ ರ‍್ಯಾಂಕ್ ಪಡೆದ ಸುರಭಿ ಗೌತಮ್ ಉತ್ತಮ ಉದಾಹರಣೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ತನ್ನನ್ನು ತಾನು ಮುನ್ನಡೆಸಿಕೊಂಡು ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಆಗುವ ಮೂಲಕ ಸಾವಿರಾರು ಆಕಾಂಕ್ಷಿಗಳಿಗೆ ಈಕೆ ಸ್ಫೂರ್ತಿಯಾಗಿದ್ದಾಳೆ.

ರಸ್ತೆ ಮಧ್ಯೆಯೇ ಆಟವಾಡಿದ ಆನೆ ಮರಿಗಳು: ಐಎಎಸ್‌ ಅಧಿಕಾರಿ ಶೇರ್‌ ಮಾಡಿದ ಈ ವಿಡಿಯೋ ಸಖತ್‌ ವೈರಲ್..!

ಯಾರು ಈ ಸುರಭಿ ಗೌತಮಿ..?
ಮಧ್ಯ ಪ್ರದೇಶದ ಕುಗ್ರಾಮವೊಂದರಲ್ಲಿ ಜನಿಸಿದ ಸುರಭಿ ಗೌತಮ್‌, ಚಿಕ್ಕ ಹುಡುಗಿಯಾದಾಗಿನಿಂದಲೂ ಓದುವುದರಲ್ಲಿ ನಿಸ್ಸೀಮಳೇ. 10 ಹಾಗೂ 12ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಲ್ಲೂ (Board Exams) ಶಾಲೆ ಹೊರತುಪಡಿಸಿ ಬೇರೆ ಯಾವುದೇ ಟ್ಯೂಷನ್‌ಗೆ ಹೋಗದೆ  ಯಸುರಭಿ ಶೇ. 90ಕ್ಕಿಂತ ಉತ್ತಮ ಅಂಕ ಗಳಿಸಿದ್ದಳು. ಸುರಭಿ ತಂದೆ ಸಿವಿಲ್‌ ನ್ಯಾಯಾಲಯದಲ್ಲಿ ವಕೀಲರಾಗಿದ್ದರು ಹಾಗೂ ತಾಯಿ ಶಿಕ್ಷಕಿಯಾಗಿದ್ದರು ಎಂದೂ ತಿಳಿದುಬಂದಿದೆ. 
 
ಶಾಲೆ ಮುಗಿಸಿದ ಬಳಿಕ ಸುರಭಿ ಮಧ್ಯ ಪ್ರದೇಶದ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದು ಅದರಲ್ಲಿ ತೇರ್ಗಡೆ ಹೊಂದಿದ್ದರು. ಈ ಮೂಲಕ ಆ ಗ್ರಾಮದಿಂದ ಉನ್ನತ ಶಿಕ್ಷಣಕ್ಕೆ ತೆರಳಿದ ಮೊದಲ ಯುವತಿ ಎನಿಸಿಕೊಂಡಳು. ಅಲ್ಲದೆ, ಉನ್ನತ ಶಿಕ್ಷಣಕ್ಕೆ ನಗರಕ್ಕೆ ಹೋದ ಮೊದಲ ಯುವತಿಯೂ ಹೌದು. ಭೋಪಾಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಹಾಗೂ ಕಮ್ಯೂನಿಕೇಷನ್ಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿದ ಸುರಭಿ ತಾನು ಓದಿದ ವಿಶ್ವವಿದ್ಯಾಲಯದಿಂದ  ಚಿನ್ನದ ಪದಕವನ್ನೂ ಪಡೆದವರು. 

ಪರೀಕ್ಷೆಗಳಲ್ಲಿ ಪಾಸಾಗುವುದು ಈಕೆಗೆ ಸಲೀಸು..!
ವಿವಿಯಲ್ಲಿ ಟಾಪರ್‌ ಹಾಗೂ ಚಿನ್ನದ ಪದಕ ಪಡೆದಿರುವುದು ಮಾತ್ರವಲ್ಲ ಈಕೆ ಯುಪಿಎಸ್‌ಸಿಯಂತಹ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಬಹುತೇಕ ಪರೀಕ್ಷೆಗಳಲ್ಲಿ ತೇರ್ಗಡೆಯನ್ನೂ ಹೊಂದಿದ್ದಾರೆ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ಒದಲು ಸುರಭಿ ಬಾಬಾ ಆಟೋಮಿಕ್‌ ರೀಸರ್ಚ್‌ ಸೆಂಟರ್‌ (BARC) ನಲ್ಲಿ ನ್ಯೂಕ್ಲಿಯರ್‌ ವಿಜ್ಞಾನಿಯಾಗಿ ಒಂದು ವರ್ಷ ಕೆಲಸ ಮಾಡಿದ್ದರು. 

ಅಲ್ಲದೆ, ಗೇಟ್‌, ಇಸ್ರೋ, ಎಸ್‌ಎಐಎಲ್‌, ಎಂಪಿಪಿಎಸ್‌ಸಿ ಪಿಸಿಎಸ್‌, ಎಸ್‌ಎಸ್‌ಸಿ ಸಿಗಿಎಲ್‌, ದೆಹಲಿ ಪೊಲೀಸ್‌ ಹಾಗೂ ಎಫ್‌ಸಿಐ ಪರೀಕ್ಷೆಗಳನ್ನು ಸಲೀಸಾಗಿ ಬರೆದು ಪಾಸಾಗಿದ್ದರು. ಅಲ್ಲದೆ, 2013ರಲ್ಲಿ ನೆಡದ ಐಇಎಸ್‌ ಪರೀಕ್ಷೆಯಲ್ಲೂ ಪ್ರಥಮ ರ‍್ಯಾಂಕ್ ಪಡೆದಿದ್ದರು. 

ಟೀನಾ ದಾಬಿ ಜೊತೆ ಡೈವೋರ್ಸ್‌ ಬಳಿಕ 2ನೇ ಮದುವೆಗೆ ಸಜ್ಜಾದ ಅಥರ್ ಅಮೀರ್ ಖಾನ್, ಇವರೇ ವಧು!

ತಪ್ಪು ತಪ್ಪು ಇಂಗ್ಲೀಷ್‌ ಮಾತನಾಡುತ್ತಾರೆಂದು ಅಪಮಾನಕ್ಕೀಡಾಗಿದ್ದ ಸುರಭಿ
ಸುರಭಿ ಗೌತಮ್‌ ಹೀಗೆ ಹಲವು ಪರೀಕ್ಷೆಗಳನ್ನು ಪಾಸು ಮಾಡಿದ್ದರೂ, ಕಾಲೇಜಿನಲ್ಲಿ ಓದುವಾಗ ಆಕೆಗೆ ಇಂಗ್ಲೀಷ್‌ (English) ಸರಿಯಾಗಿ ಮಾತನಾಡಲು ಬರುವುದಿಲ್ಲವೆಂದು ಹಲವು ಬಾರಿ ಟೀಕೆಗೊಳಗಾಗಿದ್ದಳು. ಇಂಗ್ಲೀಷ್‌ ಅನ್ನು ತಪ್ಪು ತಪ್ಪಾಗಿ ಮಾತನಾಡುತ್ತಾರೆಂದು ಸಹಪಾಠಿಗಳೇ ಆಕೆಯನ್ನು ಹೀಯಾಳಿಸುತ್ತಿದ್ದರು. ಆದರೆ, ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸುರಭಿ, ತನ್ನ ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ಜೀವನದಲ್ಲಿ ಯಶಸ್ಸು ಗಳಿಸುವ ಮೂಲಕ ಆಡಿಕೊಳ್ಳುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡೋಣವೆಂದು ನಿರ್ಧರಿಸಿದ್ದಳು.
ಅಲ್ಲದೆ, ಪ್ರತಿ ದಿನ 10 ಹೊಸ ಇಂಗ್ಲೀಷ್‌ ಪದಗಳನ್ನು (English Words) ಕಲಿಯುತ್ತಾ ಹೋದ ಆಕೆ, ಆಂಗ್ಲ ಭಾಷೆಯ ಮೇಲೂ ಹಿಡಿತ ಸಾಧಿಸುತ್ತಾ ಹೋದಳು.

2016ರಲ್ಲಿ ದೇಶದ ಅತ್ಯಂತ ಕ್ಲಿಷ್ಟಕರ ಪರೀಕ್ಷೆಗಳಲ್ಲೊಂದಾದ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯನ್ನು ತೇಗ್ಡೆ ಹೊಂದಿದ ಸುರಭಿ 50ನೇ ರ‍್ಯಾಂಕ್ ಗಳಿಸಿದಳು. ಸದ್ಯ ಅಹಮದಾಬಾದ್‌ ಜಿಲ್ಲೆಯ ವಿರಾಮ್‌ಗಾಮ್‌ನಲ್ಲಿ ಸಹಾಯಕ ಕಲೆಕ್ಟರ್‌ (Assistant Collector) ಆಗಿ ಐಎಎಸ್‌ ಅಧಿಕಾರಿ ಸುರಭಿ ಗೌತಮ್‌ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾಳೆ. ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗುರಿಯತ್ತ ಗಮನಹರಿಸಬೇಕು. ಇದರಿಂದ ಜೀವನದಲ್ಲಿ ನಿಮ್ಮ ಗುರಿಗಳನ್ನು ಸಾಧಿಸುವಿರಿ ಎಂಬುದು ಈ ಸ್ಟೋರಿಯ ಪ್ರಮುಖಾಂಶ. ಆಕೆಯ ಈ ಸಾಧನೆ ನಿಜಕ್ಕೂ ಸ್ಪೂರ್ತಿದಾಯಕವಲ್ಲವೇ..? 

click me!