ಉತ್ತರಕನ್ನಡ: 97 ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

Published : Jun 06, 2023, 11:21 PM IST
ಉತ್ತರಕನ್ನಡ: 97 ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಸಾರಾಂಶ

ಈ ಬಾರಿ ಬೇಸಿಗೆ ಅವಧಿ ಹೆಚ್ಚಿಗೆ ಇದ್ದು ಮಳೆಯ ಕೊರತೆಯೂ ಸಹ ಎದುರಾದ ಹಿನ್ನಲೆ ಬಹುತೇಕ ಪ್ರಾಥಮಿಕ, ಪ್ರೌಢಶಾಲೆಗಳ ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಪರಿಣಾಮ ಇದೀಗ ಆರಂಭವಾಗಿರುವ ಶಾಲೆಗಳಲ್ಲಿ ಕುಡಿಯುವ ನೀರು ಇಲ್ಲದೇ ಪರದಾಡುವಂತಾಗಿದೆ. 

ಉತ್ತರಕನ್ನಡ(ಜೂ.06):  ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಜೂನ್ ತಿಂಗಳು ಆರಂಭವಾದರೂ ಮಳೆ ಬೀಳದಿರುವುದು ಕುಡಿಯುವ ನೀರಿಗಾಗಿ ಜನರು ಪರದಾಡುವಂತೆ ಮಾಡಿದೆ. ನೀರಿನ ಬವಣೆ ಇದೀಗ ಪ್ರಾರಂಭವಾಗಿರುವ ಶಾಲೆಗಳಿಗೂ ಎದುರಾಗಿದ್ದು ಬಿಸಿಯೂಟ ತಯಾರಿಕೆ ಹಾಗೂ ಕುಡಿಯಲೂ ಸಹ ನೀರಿಲ್ಲದೇ ಶಾಲೆಗಳು ಸಂಕಷ್ಟ ಎದುರಿಸುವಂತಾಗಿದೆ. 

ಈ ಬಾರಿ ಬೇಸಿಗೆ ಅವಧಿ ಹೆಚ್ಚಿಗೆ ಇದ್ದು ಮಳೆಯ ಕೊರತೆಯೂ ಸಹ ಎದುರಾದ ಹಿನ್ನಲೆ ಬಹುತೇಕ ಪ್ರಾಥಮಿಕ, ಪ್ರೌಢಶಾಲೆಗಳ ಬಾವಿ, ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಪರಿಣಾಮ ಇದೀಗ ಆರಂಭವಾಗಿರುವ ಶಾಲೆಗಳಲ್ಲಿ ಕುಡಿಯುವ ನೀರು ಇಲ್ಲದೇ ಪರದಾಡುವಂತಾಗಿದೆ. 

ಪ್ರತ್ಯೇಕ ಬೈಕ್‌ ಅಪಘಾತ ಪ್ರಕರಣದಲ್ಲಿ ನಾಲ್ವರ ಸಾವು: ದೇಹದ ಮೇಲೆಯೇ ಹರಿದ ಲಾರಿ

ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 97 ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸದ್ಯ ಆಯಾ ಶಾಲೆಗಳಿಗೆ ಗ್ರಾಮ ಪಂಚಾಯತ್‌ಗಳಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. 

ಈಗಾಗಲೇ ಕುಡಿಯುವ ನೀರಿನ ಪೂರೈಕೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಖಂಡೂ ಶಾಲೆಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.   

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ