NEET 2022; ಡಿಎಂಕೆ ವಿರೋಧದ ನಡುವೆಯೂ Tamil Nadu ಟಾಪ್ 3!

By Suvarna News  |  First Published May 29, 2022, 11:05 AM IST

 ಡಿಎಂಕೆ ಸರ್ಕಾರದ ತೀವ್ರ ವಿರೋಧದ ನಡುವೆಯೂ ತಮಿಳುನಾಡು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜು ಪ್ರವೇಶಕ್ಕಾಗಿ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಮಂದಿ ನೀಟ್‌ಗೆ ಅರ್ಜಿ   ಸಲ್ಲಿಸಿದ್ದಾರೆ.


ಚೆನ್ನೈ (ಮೇ.29): ತಮಿಳುನಾಡಿನ (Tamilunadu) ಡಿಎಂಕೆ (DMK) ಸರ್ಕಾರ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (National Eligibility Entrance Test - ನೀಟ್) ತೀವ್ರ ವಿರೋಧ ಮುಂದುವರೆಸಿದ್ದು, ವಿಧಾನಸಭೆಯಲ್ಲಿ ನೀಟ್ ವಿರುದ್ಧ ನಿರ್ಣಯ ಸಹ ಅಂಗೀಕರಿಸಿದ್ದಾರೆ. ಆದರೆ ತಮಿಳುನಾಡು ವಿದ್ಯಾರ್ಥಿಗಳು (Students) ವೈದ್ಯಕೀಯ (Medical) ಕಾಲೇಜು ಪ್ರವೇಶಕ್ಕಾಗಿ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ.

ಈ ಬಾರಿ ತಮಿಳುನಾಡಿನಿಂದ ನೀಟ್‌ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ 1,42,286 ಏರಿಕೆಯಾಗಿದೆ. ಇದು 2021 ಕ್ಕಿಂತ ಶೇಕಡಾ 20 ರಷ್ಟು ಹೆಚ್ಚು. ಈ ಅಂಕಿ ಅಂಶದೊಂದಿಗೆ, ತಮಿಳುನಾಡು ದೇಶದ ನೀಟ್ ಅರ್ಜಿದಾರರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.

Tap to resize

Latest Videos

Vijayanagara: ಹೊಸಪೇಟೆ ಸರ್ಕಾರಿ ಕಾಲೇಜಿನಲ್ಲಿ 3 ಕೋಟಿ ರೂಪಾಯಿ ಗುಳುಂ!

ನೀಟ್‌ನಿಂದ ವಿನಾಯಿತಿ ಕೊಡಿಸುವುದಾಗಿ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಮತ್ತು ಈ ನಿಟ್ಟಿನಲ್ಲಿ ಸ್ಟಾಲಿನ್ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.

ಈ ಬಗ್ಗೆ ಮಾತನಾಡಿದ ಚೆನ್ನೈ ಪ್ರವೇಶ ಕೋಚಿಂಗ್ ಸಂಸ್ಥೆಯ ಮಾಲೀಕ ಸುಧೀರ್ ರಾಜ್ , “ವಿನಾಯಿತಿ ಸಿಗದ ಕಾರಣ ತಮಿಳುನಾಡಿನ ವಿದ್ಯಾರ್ಥಿಗಳಿಗೆ ನೀಟ್‌ಗೆ ಹಾಜರಾಗುವುದನ್ನು ಬಿಟ್ಟು ಬೇರೆ ಆಯ್ಕೆ ಉಳಿದಿಲ್ಲ, ತಮಿಳುನಾಡು ಸರ್ಕಾರವು ಸರ್ಕಾರದ ವಿದ್ಯಾರ್ಥಿಗಳಿಗೆ ಬೆಂಬಲ ನೀಡಬೇಕು. ಶಾಲೆಗಳು ಮತ್ತು ಗ್ರಾಮೀಣ ಹಿನ್ನೆಲೆಯಿಂದ NEET ಗೆ   ಅಗತ್ಯವಾಗಿ ಬೇಕಾದ ತರಬೇತಿ ನೀಡಬೇಕು ಎಂದಿದ್ದಾರೆ. 

Hijab ban; ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ 

 

click me!