ಕೌಶಲಾಭಿವೃದ್ಧಿ ಇಲಾಖೆ- ವಾಧ್ವಾನಿ ಫೌಂಡೇಷನ್ ಒಡಂಬಡಿಕೆ: ವರ್ಷಕ್ಕೆ 1 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ ಸಬಲೀಕರಣ

By Gowthami K  |  First Published Feb 23, 2023, 9:22 PM IST

ರಾಜ್ಯದ ಐಟಿಐ, ಜಿಟಿಟಿಸಿ ಮತ್ತು ಕೆಜಿಟಿಟಿಐ ವಿದ್ಯಾರ್ಥಿಗಳ ಕೌಶಲಗಳನ್ನು ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ವೃದ್ಧಿಸಲು ಕೌಶಲಾಭಿವೃದ್ಧಿ ಇಲಾಖೆಯು ವಾಧ್ವಾನಿ ಫೌಂಡೇಷನ್ ಜೊತೆ  ಒಡಂಬಡಿಕೆ ಮಾಡಿಕೊಂಡಿದೆ.


ಬೆಂಗಳೂರು (ಫೆ.23): ರಾಜ್ಯದ ಐಟಿಐ, ಜಿಟಿಟಿಸಿ ಮತ್ತು ಕೆಜಿಟಿಟಿಐ ವಿದ್ಯಾರ್ಥಿಗಳ ಕೌಶಲಗಳನ್ನು ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ವೃದ್ಧಿಸಲು ಕೌಶಲಾಭಿವೃದ್ಧಿ ಇಲಾಖೆಯು ವಾಧ್ವಾನಿ ಫೌಂಡೇಷನ್ ಜೊತೆ ಗುರುವಾರ ಒಡಂಬಡಿಕೆ ಮಾಡಿಕೊಂಡಿತು. ಈ ಸಹಭಾಗಿತ್ವದ ಅಡಿಯಲ್ಲಿ, ವಾಧ್ನಾನಿ ಫೌಂಡೇಷನ್ ಬೋಧಕರಿಗೆ ತರಬೇತಿ ನೀಡಲಿದೆ. ಇದರಿಂದ ರಾಜ್ಯದಲ್ಲಿ ಮೇಲ್ದರ್ಜೆಗೆ ಏರಿಸಲಾಗಿರುವ 150 ಐಟಿಐ, 30 ಜಿಟಿಟಿಸಿ ಹಾಗೂ 5  ಕೆಜಿಟಿಟಿಐ ಗಳಲ್ಲಿರುವ ಬೋಧಕರಿಗೆ ತರಬೇತಿ ಲಭ್ಯವಾಗಲಿದೆ. ಬರುವ ಮಾರ್ಚ್ 6ರಿಂದ 11ರವರೆಗೆ ಮೊದಲ ಹಂತದ ಬೋಧಕರ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಂದಿನ ಹಂತದಲ್ಲಿ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ತರಬೇತಿಯು ಸಂವಹನ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು, ಗ್ರಾಹಕ ಕೇಂದ್ರಿತ ಧೋರಣೆ, ಡಿಜಿಟಲ್ ಸಾಕ್ಷರತೆ, ಸಾಂಘಿಕ ಕಾರ್ಯ ಹಾಗೂ ಉದ್ಯೋಗ ಸ್ಥಳದ ಅರಿವು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

Tap to resize

Latest Videos

ಇದರ ಪ್ರಾಯೋಗಿಕ ಹಂತದಲ್ಲಿ ರಾಜ್ಯದ ಐಟಿಐಗಳ 20,000 ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ. ನಂತರ, ವರ್ಷಕ್ಕೆ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇದೆ.

ಫೆ.25 ಮತ್ತು 26 ರಂದು KPSC Exam, ಧಾರವಾಡ-ಹುಬ್ಬಳ್ಳಿಯಲ್ಲಿ 51 ಪರೀಕ್ಷಾ ಕೇಂದ್ರಗಳು

ಕೌಶಲಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಪಠ್ಯಕ್ರಮದ ಜೊತೆಗೆ ಈ ತರಬೇತಿ ಕೊಡಲಾಗುವುದು. ಇದು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ ಎಂದರು.

ಯುಲಿಪ್ಪು ದಕ್ಷಿಣ ಭಾರತದಾದ್ಯಂತ 200 ಕ್ಕೂ ಅಧಿಕ ಶಾಲೆಗಳಿಗೆ ಎನ್‍ಇಪಿ-ಸಂಯೋಜಿತ ಕೌಶಲ್ಯ ಪರಿಸರ ವ್ಯವಸ್ಥೆ

ವಾಧ್ವಾನಿ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುನಿಲ್ ದಹಿಯಾ ಮಾತನಾಡಿ, ವಿಶೇಷವಾಗಿ ಐಟಿಐ ನಂತಹ ಔದ್ಯೋಗಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ದೃಷ್ಟಿಯಿಂದ ಸಂವಹನ ಕೌಶಲಗಳ ತರಬೇತಿ ಅತ್ಯಂತ ಅಗತ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟರು. ರಾಜ್ಯ ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಇದ್ದರು.

click me!