ಶಿಕ್ಷಣ ಇಲಾಖೆ ಮೇಲೆ ಕೋವಿಡ್ ಎಫೆಕ್ಟ್: ಸರ್ಕಾರದ ವಿರುದ್ಧ ಅಸಮಾಧಾನ

By Govindaraj S  |  First Published Jul 8, 2022, 4:15 PM IST

ಕೋವಿಡ್ ನಂತರ ಶಿಕ್ಷಣ ಇಲಾಖೆ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದು ಕಡೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿದ್ದ ಶೂ, ಸಾಕ್ಸ್ ಕೋಡೊದಕ್ಕೂ ಇಲಾಖೆ ಬಳಿ ಹಣ ಇಲ್ಲ ಅಂತಿದ್ದಾರೆ. 


ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜು.08): ಕೋವಿಡ್ ನಂತರ ಶಿಕ್ಷಣ ಇಲಾಖೆ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದು ಕಡೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿದ್ದ ಶೂ, ಸಾಕ್ಸ್ ಕೋಡೊದಕ್ಕೂ ಇಲಾಖೆ ಬಳಿ ಹಣ ಇಲ್ಲ ಅಂತಿದ್ದಾರೆ. ಇನ್ನೊಂದು ಕಡೆ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ‌ಹಾಳೆಗಳ ಮುದ್ರಣಕ್ಕೂ ಕಾಸಿಲ್ಲ. ಹೀಗಾಗಿ ವಿದ್ಯಾ ಪ್ರವೇಶ ಅಡಿಯಲ್ಲಿ ‌ಮಕ್ಕಳಿಗೆ ವಿಷಯವಾರು ಪಾಠ ಪ್ರಾರಂಭಿಸಲು ಹಾಳೆಗಳು ಇಲ್ಲದೆ ಶಿಕ್ಷಕರ ಪರದಾಟ ನಡೆಸುತ್ತಿದ್ದಾರೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಉತ್ತಮ ಶಿಕ್ಷಣ ನೀಡುವುದೇ ನಮ್ಮ ಆದ್ಯತೆ ಎಂದ ಶಿಕ್ಷಣ ಇಲಾಖೆಗೆ ಕೋವಿಡ್‌ನಿಂದ ಆರ್ಥಿಕ ಹೊಡೆತ ಬಿದ್ದಿದೆ.ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ಹಾಳೆಗಳ ಕೊರತೆ ಉಂಟಾಗಿದ್ದು, ಶಾಲೆಯಲ್ಲಿರುವ ಪ್ರತಿ ವಿದ್ಯಾರ್ಥಿಗೂ ವಿಷಯವಾರು ಹಾಳೆಗಳನ್ನ ಕೊಡಬೇಕು. ಆದರೆ‌ ಇಲಾಖೆಯಲ್ಲಿ ದುಡ್ಡು‌ ಇಲ್ಲದೆ ವಿದ್ಯಾ ಪ್ರವೇಶ ಪ್ರಾರಂಭಿಸಲು ಹೆಣಗಾಟ ಶುರುವಾಗಿದೆ ಅಂತ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

2ನೇ ದಿನವೂ ದ್ವಿತೀಯ ಪಿಯು ಉತ್ತರ ಪತ್ರಿಕೆ ಪಡೆಯಲು ವಿದ್ಯಾರ್ಥಿಗಳ ಪರದಾಟ

ಮತ್ತೊಂದು ಕಡೆ ಸರ್ಕಾರಿ ಶಾಲೆಯಲ್ಲಿ ‌ಕೆಲಸ ಮಾಡುವ ಶಿಕ್ಷಕರೇ ಹಾಳೆಗಳನ್ನ ಜೆರಾಕ್ಸ್ ಮಾಡಿಕೊಡುವಂತೆ ಇಲಾಖೆಯಿಂದ ‌ಮೌಖಿಕ ಸೂಚನೆ ಬಂದಿದೆ. ಆದ್ರೆ ಶಿಕ್ಷಕರು ತಮ್ಮ ಕೈನಿಂದ ಹಣ ಹಾಕಿ ಹಾಳೆ ಜೆರಾಕ್ಸ್ ‌ಮಾಡಿಸಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಶಿಕ್ಷಕರೇ ಹಾಳೆಗಳ ಬದಲಾಗಿ ಬೋರ್ಡ್ ‌ಮೇಲೆ ಬರೆದು ಪಾಠ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ. ಈ ವರ್ಷದ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ.‌ 

Bengaluru: ಚಕ್ರತೀರ್ಥ ಸಮಿತಿಯ ಪಠ್ಯಕ್ಕೆ ಬರಗೂರು ರಾಮಚಂದ್ರಪ್ಪ ಕಿಡಿ

ಇದರ ಮಧ್ಯೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪಾಠ ಮಾಡಲು ಹಾಳೆಗಳ ಕೊರತೆ ಶುರುವಾಗಿದೆ‌ .ಮತ್ತೊಂದು ಕಡೆ ಶಿಕ್ಷಣ ಸಚಿವರು ಮಕ್ಕಳಿಗೆ ಉತ್ತಮ ಶಿಕ್ಷಣದ ಗುಣಮಟ್ಟ ಕೊಡುವುದೇ ನಮ್ಮ ಆದ್ಯತೆ ಅಂತಾರೆ. ಆದ್ರೆ‌ ಶಾಲೆ ಪ್ರಾರಂಭವಾಗಿ ಎರಡು ತಿಂಗಳು ಕಳೆದಿಲ್ಲ. ಆಗಲೇ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ‌ಮಕ್ಕಳಿಗೆ ಪಾಠ ಮಾಡಲು ಸಾಮಾಗ್ರಿಗಳ ಕೊರತೆ ಶುರುವಾಗಿದೆ. ಉತ್ತಮ ಶಿಕ್ಷಣ ಕೊಡಬೇಕು ಅಂದ್ರೆ ಅದಕ್ಕೆ ಪೂರಕವಾದ ಪಾಠ ಮಾಡಲು ಸಾಮಾಗ್ರಿಗಳು ಕಲ್ಪಿಸಿದಾಗ ಮಾತ್ರ ಉತ್ತಮ ಶಿಕ್ಷಣ ಕೊಡಲು ಸಾಧ್ಯ ಅಂತಾರೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ.

click me!