ನ್ಯಾಷನಲ್ ಲಾ ಆಪ್ಟಿಟ್ಯೂಡ್ ಪರೀಕ್ಷೆ ಸಂಬಂಧ ಸುಪ್ರೀಂಕೋರ್ಟ್ ಇಂದು (ಸೋಮವಾರ) ಮಹತ್ವದ ತೀರ್ಪು ನೀಡಿದೆ.
ನವದೆಹಲಿ, (ಸೆ.21): ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ (ಎನ್ ಎಲ್ ಎಸ್ ಐಯು) ಸೆಪ್ಟೆಂಬರ್ 12ರಂದು ನಡೆಸಿದ್ದ ನ್ಯಾಷನಲ್ ಲಾ ಆಪ್ಟಿಟ್ಯೂಡ್ ಪರೀಕ್ಷೆ-2020 ಇದರ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ.
5 ವರ್ಷಗಳ ಸಂಯೋಜಿತ ಬಿಎ, ಎಲ್.ಎಲ್.ಬಿ ಪದವಿ ಪ್ರವೇಶದ ಎನ್ ಎಲ್ ಎಟಿ-2020 ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ಸೆಪ್ಟೆಂಬರ್ 28ರಂದು ಬೆಂಗಳೂರಿನ ಎನ್ ಎಲ್ ಎಸ್ ಐಯು ಸೇರಿದಂತೆ ದೇಶಾದ್ಯಂತ ಇರುವ 22 ರಾಷ್ಟ್ರೀಯ ಕಾನೂನು ವಿವಿಗಳಲ್ಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ ಟಿ-2020) ಪ್ರಕಾರವೇ ಪ್ರವೇಶ ಪರೀಕ್ಷೆ ನಡೆಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
Sex Education: ಬೇಕಾ? ಯಾರಿಗೆ? ಯಾವಾಗ?
ಎನ್ ಎಲ್ ಎಟಿ ನಿರ್ಧಾರ ಪ್ರಶ್ನಿಸಿ ಎನ್ ಎಲ್ ಎಸ್ ಐಯು ಮಾಜಿ ಉಪಕುಲಪತಿ ಪ್ರೊ.ಆರ್.ವೆಂಕಟರಾವ್ ಮತ್ತು ಪ್ರವೇಶ ಪರೀಕ್ಷೆ ಆಕಾಂಕ್ಷಿಗಳ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಅಶೋಕ್ ಭೂಷಣ್ ನೇತೃತ್ವದ ಪೀಠ ಇಂದು (ಸೋಮವಾರ) ಈ ಆದೇಶವನ್ನು ನೀಡಿದೆ.
ಅಷ್ಟೇ ಅಲ್ಲದೇ ಎಲ್ಲಾ ಎನ್ ಎಲ್ ಯುಗಳು ಅಕ್ಟೋಬರ್ ಮಧ್ಯಂತರದಿಂದಲೇ ಶೈಕ್ಷಣಿಕ ಚಟುವಟಿಕೆ ಪುನರಾರಂಭಿಸುವಂತೆ ಸೂಚಿಸಿದೆ.