ಚಿತ್ರದುರ್ಗ ಕ್ಷೇತ್ರದಲ್ಲಿ 170 ಹೊಸ ಶಾಲಾ ಕಟ್ಟಡ ನಿರ್ಮಾಣ

By Kannadaprabha NewsFirst Published Oct 22, 2022, 11:23 AM IST
Highlights

ಚಿತ್ರದುರ್ಗ ಕ್ಷೇತ್ರದಲ್ಲಿ 170 ಹೊಸ ಶಾಲಾ ಕಟ್ಟಡ ನಿರ್ಮಾಣ. ಪ್ರತಿ ಕೊಠಡಿಗೆ 15 ಲಕ್ಷ ರು ವೆಚ್ಚ, ವಿವಿಧ ಕಾಮಗಾರಿಗೆ ಚಾÇನೆ ನೀಡಿ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ

 ಚಿತ್ರದುರ್ಗ (ಅ.22) : ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 170 ಹೊಸ ಶಾಲಾ ಕಟ್ಟಡಗಳು ನಿರ್ಮಾಣವಾಗಿದ್ದು ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಜಿ.ಹೆಚ್‌. ತಿಪ್ಪಾರೆಡ್ಡಿ ಹೇಳಿದರು.

Chitradurga: ಕ್ರೀಡಾಪಟುಗಳಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ನೆರವು: ಶಾಸಕ ತಿಪ್ಪಾರೆಡ್ಡಿ

Latest Videos

ತಾಲೂಕಿನ ವಿವಿಧ ಶಾಲೆಗಳ ನಿರ್ಮಾಣಕ್ಕೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಚಿತ್ರದುರ್ಗ ಕ್ಷೇತ್ರದಲ್ಲಿ 20 ಕೋಟಿ ರು. ಡಿಎಂಎಫ್‌ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದ ಸಹ 30 ಕೊಠಡಿಗಳಿಗೆ ಹಣ ಬಂದಿದೆ. ಖಾಸಗಿ ಶಾಲೆಗಳ ಲಕ್ಷಾಂತರ ರುಪಾಯಿ ಡೊನೇಷನ್‌ ಕಟ್ಟಲಾಗದೇ ನೂರಾರು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲದಂತೆ ಕೊಠಡಿಗಳು, ಶೌಚಾಲಯ ಸೇರಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವ ಮುಖಾಂತರ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಲಾಗುತ್ತಿದೆ. ಒಂದು ಕೊಠಡಿಗೆ 14 ರಿಂದ 16 ಲಕ್ಷ ಹಣ ನೀಡಿದ್ದು, ಒಟ್ಟು 170 ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಕಲ್ಲೇನಹಳ್ಳಿ ಮತ್ತು ಗೋನೂರು ಗ್ರಾಮಗಳು ಪ್ರಧಾನ ಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆ ಆಗಿದ್ದು, ಗ್ರಾಮದ ಶಾಲೆಗಳು, ರಸ್ತೆಗಳು ಸೇರಿ ಮೂಲಭೂತ ಸೌಲಭ್ಯವನ್ನು ಮಾಡಲಾಗುತ್ತದೆ. ಒಂದು ಗ್ರಾಮಕ್ಕೆ 20.35 ಲಕ್ಷ ನೀಡಲಾಗುತ್ತಿದ್ದು, ಇದನ್ನು ಪೂರ್ಣವಾಗಿ ಪರಿಶಿಷ್ಟಪಂಗಡ ಜನಾಂಗದವರು ವಾಸವಿರುವ ಗ್ರಾಮಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗಿದೆ. ಗೋನೂರು, ಸಾಸಲಹಟ್ಟಿ, ಬಚ್ಚಬೋರನಹಟ್ಟಿಗ್ರಾಮದ ಸುತ್ತಮುತ್ತಲೂ 6 ರಿಂದ 7 ಚೆಕ್‌ ಡ್ಯಾಂ ನಿರ್ಮಿಸಲಾಗಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.

ಇಂಗಳದಾಳ್ ಗ್ರಾ.ಪಂ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ಗೋಲ್ ಮಾಲ್; ಸೂಕ್ತ ತನಿಖೆಗೆ ಶಾಸಕ ತಿಪ್ಪಾರೆಡ್ಡಿ ಆಗ್ರಹ

ಮಲ್ಲಾಪುರ ಗೊಲ್ಲರಹಟ್ಟಿಮತ್ತು ಮುತ್ತಯ್ಯನಹಟ್ಟಿಗ್ರಾಮಕ್ಕೆ ಸ್ಮಶಾನ ಭೂಮಿ ಮಂಜೂರಾತಿ ಆದೇಶ ಪತ್ರವನ್ನು ಇದೇ ಸಂದರ್ಭದಲ್ಲಿ ತಿಪ್ಪಾರೆಡ್ಡಿ ವಿತರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾ, ರಘು ಜಯಲಕ್ಷ್ಮಿ, ಕಾಟಯ್ಯ, ಕಮಲಮ್ಮ, ಸಾಕಮ್ಮ, ಜಯಮ್ಮ, ಬಿಇಓ ತಿಪ್ಪೇಸ್ವಾಮಿ,ಕಂದಾಯ ನಿರೀಕ್ಷಕ ಶರಣಪ್ಪ, ಇಂಜಿನಿಯರ್‌ ಪಾತಪ್ಪ, ಪಿಡ್ಲ್ಯೂಡಿ ಇಂಜಿನಿಯರ್‌ ಗೋಪಾಲ್‌ ಇದ್ದರು.

click me!