ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ ಭಾಷೆಗಳಿಂದ ಪ್ರಭಾವಿತರಾಗಬಾರದು. ಆದ್ದರಿಂದ ಎನ್‌ಇಪಿ ರದ್ದುಗೊಳಿಸಿ ರಾಜ್ಯ ಸರ್ಕಾರ ಹೊಸ ಪಾಲಿಸಿ ತರಲಿದೆ.
ಬೆಂಗಳೂರು (ಆ.21): ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (National Education Policy -NEP) ರದ್ದುಗೊಳಿಸುವ ಬಗ್ಗೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ ಭಾಷೆಗಳಿಂದ ಪ್ರಭಾವಿತರಾಗಬಾರದು. ಆದ್ದರಿಂದ ಎನ್‌ಇಪಿ ರದ್ದುಗೊಳಿಸಿ ರಾಜ್ಯ ಸರ್ಕಾರ ಹೊಸ ಪಾಲಿಸಿ ತರಲಿದೆ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡ್ತೀವಿ ಎಂದು ತಿಳಿಸಿದರು.
ವಿವಿಗಳ ಕುಲಪತಿಗಳ ಸಭೆ ಬಳಿಕ NEP ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡಿದರು. ನಂತರ, ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗಬಾರದು ಎಂದು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಿದರು. ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗದಂತೆ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪುನರ್ ವಿಮರ್ಶೆ ಮಾಡುತ್ತಿದ್ದೇವೆ. ನಮ್ಮ ದೇಶದಲ್ಲಿ ಏಕ ಶಿಕ್ಷಣ ಪದ್ದತಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ತಿಳಿಸಿದರು.
undefined
ಕಾಂಗ್ರೆಸ್‌ನ ಯಾವ ನಾಯಿ ಕೂಡ ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿಲ್ಲ: ಸಿಟಿ ರವಿ
ಕುಲಪತಿಗಳು ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅರ್ಥೈಸಿಕೊಳ್ಳಬೇಕು: ಇನ್ನು ದೇಶದಲ್ಲಿರುವ ಬೇರೆ ಬೇರೆ ಭಾಷೆ, ಸಂಸ್ಕೃತಿ ಮತ್ತಿತರರ ಕಾರಣದಿಂದ ನಮ್ಮ ದೇಶದಲ್ಲಿ ಏಕರೂಪ ಶಿಕ್ಷಣ ಪದ್ದತಿ ಜಾರಿ ಸಾದ್ಯವಿಲ್ಲ. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಸಾಮಾಜಿಕ, ಅರ್ಥಿಕ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಶಿಕ್ಷಣ ನೀತಿ ರದ್ದತಿಯ ಬಗ್ಗೆ ಸಭೆಯಲ್ಲಿ ಸಮರ್ಥನೆ ಮಾಡಿಕೊಂಡರು. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಾಹಿತಿ ಬರಗೂರು ರಾಮಚಂದ್ರ ಸಹ ಭಾಗಿಯಾಗಿದ್ದರು.
ಕರ್ನಾಟಕದ ಶಿಕ್ಷಣ ಮಟ್ಟ ಬಹಳ ಉತ್ತಮವಾಗಿದೆ: ಈ ಸಭೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ರಾಜ್ಯದ ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ಮಾಡಿದ್ದಾರೆ. ಈ ವೇಳೆ ಹೊಸ ಶಿಕ್ಷಣ ನೀತಿಯ ಸಾಧಕ ಬಾಧಕ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದ ಶಿಕ್ಷಣ ಮಟ್ಟ ಬಹಳ ಉತ್ತಮವಾಗಿದೆ ಎಂದು ವಿವಿ ಕುಲಪತಿಗಳು ಹೇಳಿದ್ದಾರೆ. ಕೇಂದ್ರದಿಂದ ಬರುವ ಹಣ ಕಡಿಮೆ ಬರ್ತಿದೆ. ಗುಣಮಟ್ಟದ ಶಿಕ್ಷಣ ಪ್ರಸಾರ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಎನ್‌ಇಪಿ ಮುಂದುವರೆಸಲ್ಲ: ಕರ್ನಾಟಕದಲ್ಲಿ 2021ರಲ್ಲಿಯೇ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (NEP) ತರಲು ಪ್ರಯತ್ನ ಮಾಡಿದ್ದರು. ಆದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರು ಎಲ್ಲಿಯೂ NEP ಇಲ್ಲ. ಆದರೆ ಕರ್ನಾಟಕದಲ್ಲಿ ತರಾತುರಿಯಲ್ಲಿ ತರಲು ಯತ್ನಸಿದ್ದಾರೆ. ಎನ್‌ಇಪಿಗೆ ಬೇಕಾಗುವ ಬೇಸಿಕ್ ನೀಡ್ ಸಹ ಇರಲಿಲ್ಲ. ಇದರಲ್ಲಿ ನಮಗೆ ಸಮಾಧಾನ ಇಲ್ಲ. ಹಳೆ ಶಿಕ್ಷಣ ನೀತಿಯನ್ನು ತರಲು ಹೋಗಿದ್ದಾರೆ. ಎನ್‌ಇಪಿ ನಮ್ಮ ರಾಜ್ಯದಲ್ಲಿ ಮುಂದುವರಿಸಲ್ಲ. ಜೊತೆಗೆ ಯಾವುದೇ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿಯೂ ಎನ್‌ಇಪಿ ಇಲ್ಲ. ಮೊದಲಿಗೆ ಕರ್ನಾಟಕದಲ್ಲೇ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಕೆಆರ್‌ಎಸ್ ಜಲಾಶಯದ ನೀರು 105 ಅಡಿಗೆ ಕಸಿತ: ಮಂಡ್ಯ ರೈತರು, ಬಿಜೆಪಿಯಿಂದ ಕಾವೇರಿ ಹೋರಾಟ ಆರಂಭ
ಹೊಸ ಪೀಳಿಗೆಗೆ ಅನುಗುಣವಾಗಿ ಶಿಕ್ಷಣ: ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕರ್ನಾಟಕ ಶಿಕ್ಷಣ ನೀತಿ ಬಗ್ಗೆ ಚರ್ಚೆ ಅದರ ರಿಪೋರ್ಟ್ ಕೂಡ ಇದೆ. ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ. NEPಯ ಅನೇಕ ವಿಚಾರಗಳಲ್ಲಿ ನಮಗೆ ಸಮಾಧಾನ ಇಲ್ಲ. ಇವರು ಹಳೆ ಪದ್ದತಿಗೆ ಹೋಗಿದ್ದಾರೆ. ಅದಕ್ಕೆ ಒಂದು ನೂತನ ಶಿಕ್ಷಣಕ್ಕೆ ಒತ್ತು ಕೊಡಬೇಕು. ಸಂಶೋಧನೆ, ತಂತ್ರಜ್ಞಾನ ಶಿಕ್ಷಣದಲ್ಲಿ ನಮ್ಮ ರಾಜ್ಯ ಮುಂದಿದೆ. ಮುಂದಕ್ಕೆ NEP ಅಳವಡಿಸುವುದಿಲ್ಲ. ಇದಕ್ಕಾಗಿ ಒಂದು ಕಮಿಟಿ ಮಾಡ್ತಿವಿ. ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ ಶಿಕ್ಷಣ ಸಚಿವರ ನೇತೃತ್ವದಲ್ಲಿ ಇದೆ. ಹೊಸ ಪೀಳಿಗೆಗೆ ಅನುಗುಣವಾಗಿ ಶಿಕ್ಷಣ ನೀತಿ ತರುತ್ತೇವೆ ಎಂದು ಹೇಳಿದರು.