ಕರ್ನಾಟಕವೂ ಸೇರಿದಂತೆ ದೇಶದ 28 ರಾಜ್ಯಗಳ 189 ನಗರಗಳ ಒಟ್ಟು 268 ಕೇಂದ್ರಗಳಲ್ಲಿ ಈ ಪರೀಕ್ಷೆಗಳು ಆನ್‌ಲೈನ್ ಮೂಲಕ ನಡೆಯಲಿವೆ. ಈ ಬಾರಿ ಒಟ್ಟು 1.18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಬೆಂಗಳೂರು(ಮೇ.11): ರಾಜ್ಯದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ 50ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸುವ ಯುಜಿಇಟಿ ಹಾಗೂ ಯೂನಿಗೇಜ್ ಸಂಯೋಜಿತ ಪರೀಕ್ಷೆಗಳು ಮೇ 12ರ ಭಾನುವಾರ ದೇಶಾದ್ಯಂತ ನಡೆಯಲಿವೆ.
ಕರ್ನಾಟಕವೂ ಸೇರಿದಂತೆ ದೇಶದ 28 ರಾಜ್ಯಗಳ 189 ನಗರಗಳ ಒಟ್ಟು 268 ಕೇಂದ್ರಗಳಲ್ಲಿ ಈ ಪರೀಕ್ಷೆಗಳು ಆನ್‌ಲೈನ್ ಮೂಲಕ ನಡೆಯಲಿವೆ. ಈ ಬಾರಿ ಒಟ್ಟು 1.18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಯನ್ನು ಎಲ್ಲೆಡೆ ಸುಸೂತ್ರವಾಗಿ ನಡೆಸಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕಾಮೆಡ್-ಕೆ ಪ್ರಕಟಣೆಯಲ್ಲಿ ತಿಳಿಸಿದೆ.
undefined
ಯಾದಗಿರಿ: ಪ್ರತಿಭಾವಂತ ಮಕ್ಕಳ ‘ಗುಳೆ’!
ಪರೀಕ್ಷೆಗಳು ಪಟ್ಟು ಮೂರು ಪಾಳಿಯಲ್ಲಿ ಬೆಳಗ್ಗೆ 8.30 ರಿಂದ 11.30ರವರೆಗೆ, ಮ.1ರಿಂದ 4 ಗಂಟೆ ಹಾಗೂ 5.30ರಿಂದ ರಾತ್ರಿ 8.39 ರವರೆಗೆ ನಡೆಯಲಿದೆ. ಇದು ಆನ್‌ಲೈನ್ ಪರೀಕ್ಷೆ ಆದರೂ ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆಗೆ ಬರುವಾಗ ಪ್ರವೇಶ ಪತ್ರದ ಜತೆಗೆ ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್ ಅಳತೆಯ ಎರಡು ಫೋಟೋ ತರಬೇಕು. ಪೆನ್ಸಿಲ್ ಮತ್ತು ನೀರಿನ ಬಾಟೆಲ್ ಅನ್ನು ಕೇಂದ್ರದ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿರುವ ಸೂಚನೆಗಳನ್ನು ಓದಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಕಾಮೆಡ್-ಕೆ ಸೂಚಿಸಿದೆ.