ICSE 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ, ಶೇ.99.97 ವಿದ್ಯಾರ್ಥಿಗಳು ಪಾಸ್!

By Suvarna News  |  First Published Jul 17, 2022, 9:08 PM IST

ICSE 10ನೇ ತರಗತಿ ಪರೀಕ್ಷೆ ಬರೆದ ಬಹುತೇಕ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ ಕೆಲ ವಿದ್ಯಾರ್ಥಿಗಳು ಗರಿಷ್ಠ ಅಂಕಪ ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ICSE ಫಲಿತಾಂಶ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ಜು.17): ಆನ್ ಲೈನ್, ಆಫ್ ಲೈನ್ ಕ್ಲಾಸ್ ಸೇರಿದಂತೆ ಹಲವು ಅಡೆ ತಡೆಗಳ ನಡುವೆ ICSE 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ಶೇಕಡಾ 99.97 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇಂದು ಫಲಿತಾಂಶ ಘೋಷಿಸಲಾಗಿದ್ದು, ಅಧೀಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಇನ್ನು ಬಾಲಕರ ಫಲಿತಾಂಶಕ್ಕೆ ಹೋಲಿಸಿದರೆ, ಬಾಲಕಿರು ಮೇಲುಗೈ ಸಾಧಿಸಿದ್ದಾರೆ. ಬಾಲಕರ ಫಲಿತಾಂಶ ಶೇಕಡಾ 99.97 ಆಗಿದ್ದರೆ, ಬಾಲಕಿಯರ ಫಲಿತಾಂಶ ಶೇಕಡಾ 99.98.    ಮೊದಲ ಅಥವಾ 2ನೇ ಸೆಮ್‌ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳನ್ನು ಗೈರು ಎಂದು ಪರಿಗಣಿಸಲಾಗಿದ್ದು, ಅವರ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿಲ್ಲ.  ಮಹಾರಾಷ್ಟ್ರ ರಾಜ್ಯದ 37 ವಿದ್ಯಾರ್ಥಿಗಳು ಟಾಪರ್ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಈ 37 ವಿದ್ಯಾರ್ಥಿಗಳು ಶೇಕಡಾ 99.04ಕ್ಕಿಂತ ಹೆಚ್ಚಿನ ಅಂಕ ಪಡೆದಿದ್ದಾರೆ. 

ನಾಲ್ವರು ವಿದ್ಯಾರ್ಥಿಗಳು ಟಾಪ್ ಸ್ಕೋರ್ ಗಳಿಸಿದ್ದಾರೆ. ಇದರಲ್ಲಿ ಮೂವರು ಬಾಲಕಿಯರಾಗಿದ್ದು, ಓರ್ವ ಬಾಲಕ ಸೇರಿದ್ದಾನೆ. ಪುಣೆಯ ಸೇಂಟ್ ಮೇರಿ ಶಾಲೆಯ  ಹರಗುನ್ ಕೌರ್ ಮಥಾರು, ಕಾನ್ಪುರದ ಶೀಲಿಂಗ್ ಹೌಸ್ ಶಾಲೆಯ ಅನಿಕಾ ಗುಪ್ತಾ ಜೀಸಸ್ ಮೇರಿ ಶಾಲೆಯ ಪುಷ್ಕರ್ ತ್ರಿಪಾಠಿ ಹಾಗೂ ಕಾನ್ಪುರದ ಸಿಟಿ ಮಾಂಟೆಸ್ಸರಿ ಶಾಲೆಯ ಕನಿಷ್ಕಾ ಮಿತ್ತಲ್ ಟಾಪ್ ಸ್ಕೋರ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ದೇಶ ವಿದೇಶದ ಒಟ್ಟು 2,31,063 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆದ 2,535 ಶಾಲೆಗಳ ವಿದ್ಯಾರ್ಥಿಗಳ ಪೈಕಿ 2,31,004  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

Tap to resize

Latest Videos

Exam Result 10ನೇ ತರಗತಿ ಪರೀಕ್ಷೆ ಬರೆದ 43 ವರ್ಷದ ಅಪ್ಪ ಪಾಸ್, ಮಗ ಫೇಲ್!

ಪರೀಕ್ಷಾ ಫಲಿತಾಂಶವನ್ನು cisce.org ಅಥವಾ results.cisce.org ಅಧೀಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.  ಸಿಐಎಸ್‌ಸಿಐ ವೆಬ್‌ಸೈಟಿನ ‘ಕರಿಯರ್‌’ ಪೋರ್ಟಲ್‌ನಲ್ಲಿ ಅಥವಾ ಮೊಬೈಲ್‌ ಸಂದೇಶದ ಮೂಲಕ ವಿದ್ಯಾರ್ಥಿಗಳು ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಐಸಿಎಸ್‌ಸಿ ಮಂಡಳಿ ಕಾರ್ಯದರ್ಶಿ ಗೆರ್ರಿ ಅರಾಥೂನ್‌ ಹೇಳಿದ್ದಾರೆ.

ಪಿಯು ಪ್ರವೇಶ ಅವಧಿ ಜು.30ರವರೆಗೆ ವಿಸ್ತರಣೆ
ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ಜುಲೈ 30ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಸಿ ಬೋರ್ಡ್‌ಗಳಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆಯು ತಡವಾಗುತ್ತಿರುವುದು ಹಾಗೂ ಹಲವು ಪಾಲಕರು, ವಿದ್ಯಾರ್ಥಿಗಳು ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇಲಾಖೆಯು ದಂಡ ಶುಲ್ಕ ರಹಿತವಾಗಿ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿದೆ.

click me!