ಬಾಗಿಲು ತೆರೆಯದ ಶಾಲೆ ಐಸ್‌ಕ್ಯಾಂಡಿ ಮಾರಾಟ​ಕ್ಕಿ​ಳಿದ ಮಕ್ಕ​ಳು..!

By Kannadaprabha News  |  First Published Feb 13, 2021, 1:10 PM IST

ಮಕ್ಕಳು ಬಾಲ ಕಾರ್ಮಿಕರಾಗುತ್ತಿರುವುದು ಶಿಕ್ಷಣ ತಜ್ಞರ ಆತಂಕಕ್ಕೆ ಕಾರ​ಣ​| ಒಂದು ಐಸ್‌ ಮಾರಾ​ಟ​ದಿಂದ 2 ರಿಂದ 3 ಉಳಿ​ತಾ​ಯ​| ದಿನಕ್ಕೆ 100ರಿಂದ 200 ಸಂಪಾ​ದನೆ| ತರ​ಗತಿ ಆರಂಭಿ​ಸಲು ಸರ್ಕಾ​ರಕ್ಕೆ ಶಿಕ್ಷಣ ತಜ್ಞರ ಆಗ್ರ​ಹ| 


ಹೂವಿನಹಡಗಲಿ(ಫೆ.13): ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಈ ವರೆಗೂ 1ರಿಂದ 5 ತರಗತಿ ವರೆಗಿನ ಶಾಲೆಗಳ ಆರಂಭಕ್ಕೆ ಗ್ರೀನ್‌ ಸಿಗ್ನಲ್‌ ನೀಡದ ಕಾರಣ ಬಾಲಕರು ಐಸ್‌ಕ್ಯಾಂಡಿ ಮಾರಾಟ ಸೇರಿ​ದಂತೆ ಸಣ್ಣ ಪುಟ್ಟ ಕೆಲ​ಸಕ್ಕೆ ತೊಡ​ಗಿ​ಕೊಂಡಿ​ರುವುದು, ಬಾಲ ಕಾರ್ಮಿಕರಾಗುತ್ತಿರುವುದು ಶಿಕ್ಷಣ ತಜ್ಞರ ಆತಂಕಕ್ಕೆ ಕಾರ​ಣ​ವಾ​ಗಿ​ದೆ.

ಶಾಲೆ​ಗಳು ಬಾಗಿಲು ಮುಚ್ಚಿ ವರ್ಷ ಕಳೆ​ಯುತ್ತಾ ಬಂದರೂ ಈ ವರೆಗೂ ಬಾಗಿಲು ತೆರೆ​ದಿಲ್ಲ. ಈ ಹಿನ್ನೆಲೆ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಪ್ರದೇ​ಶ​ದಲ್ಲಿ ಶಾಲಾ ವಿದ್ಯಾ​ರ್ಥಿ​ಗಳು ಐಸ್‌ಕ್ಯಾಂಡಿ ಮಾರಾಟ ಸೇರಿ​ದಂತೆ ಸಣ್ಣ ಪುಟ್ಟಕೆಲಸದಲ್ಲಿ ತೊಡ​ಗಿ​ ಪಾಲ​ಕ​ರಿಗೆ ನೆರ​ವಾ​ಗುವ ಜತೆಗೆ ತಮ್ಮ ಮುಂದಿನ ವಿದ್ಯಾ​ಭ್ಯಾ​ಸಕ್ಕೆ ಹಣ ಕ್ರೋಡೀ​ಕ​ರಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ಇದನ್ನು ಕಂಡು ಆತಂಕ ವ್ಯಕ್ತ​ಪ​ಡಿ​ಸಿ​ರುವ ಶಿಕ್ಷಣ ತಜ್ಞರು, ಶೀಘ್ರ 1ರಿಂದ ಎಲ್ಲ ಶಾಲಾ ತರ​ಗತಿ ಆರಂಭಿ​ಸ​ಬೇಕು. ಇಲ್ಲದಿ​ದ್ದರೆ ಅವರ ವಿದ್ಯಾ​ಭ್ಯಾ​ಸಕ್ಕೆ ಮಾರ​ಕ​ವಾ​ಗ​ಲಿದೆ ಎಂದು ಸರ್ಕಾ​ರಕ್ಕೆ ಎಚ್ಚ​ರಿ​ಸಿ​ದ್ದಾರೆ.

Tap to resize

Latest Videos

11 ತಿಂಗ​ಳಿಂದ ಶಾಲೆ ಬಂದ್‌:

ಕಳೆದ ವರ್ಷ ಮಾಚ್‌ರ್‍ ಮೊದಲ ವಾರವೇ ಶಾಲಾ ತರ​ಗ​ತಿ​ಯನ್ನು ಸ್ಥಗಿ​ತ​ಗೊ​ಳಿ​ಸಿ​ರುವ ಸರ್ಕಾರ ಜನ​ವರಿ ಬಳಿಕ ಹಂತ-ಹಂತ​ವಾಗಿ ಆರಂಭಿ​ಸಲು ಸಿದ್ಧತೆ ಆರಂಭಿ​ಸಿದೆ. ಇಷ್ಟು ಸುದೀರ್ಘ ರಜೆ​ಯಿಂದ ವಿದ್ಯಾ​ಭ್ಯಾ​ಸ​ದಿಂದ ಮಕ್ಕಳು ವಿಮು​ಖ​ವಾ​ಗಿ​ರು​ವುದು ಒಂದೆ​ಡೆ​ಯಾ​ದರೆ, ಮನೆ​ಯಲ್ಲಿ ಅವರ ಗಲಾಟೆ ತಡೆ​ದು​ಕೊ​ಳ್ಳಲು ಆಗದೆ ಪಾಲ​ಕರು ಹೊಲ​ಗ​ಳಿಗೆ ಕೆಲ​ಸಕ್ಕೆ ಕರೆ​ದು​ಕೊಂಡು ಹೋಗು​ತ್ತಿ​ದ್ದಾರೆ. ಇನ್ನೂ ಕೆಲ​ವರು ಐಸ್‌ ಕ್ಯಾಂಡಿ ಮಾರಾಟ ಸೇರಿ​ದಂತೆ ಸಣ್ಣ ಪುಟ್ಟಕೆಲಸಗಳಿಗೆ ಕಳಿ​ಸು​ತ್ತಿ​ದ್ದಾರೆ. ಇತ್ತ ಮಕ್ಕಳು ಸಹ ಇಡೀ ದಿನ ಕೆಲ​ಸಕ್ಕೆ ಹೋದರೆ ನಮ್ಮ ಮುಂದಿನ ವಿದ್ಯಾ​ಭ್ಯಾ​ಸಕ್ಕೂ ಅನು​ಕೂ​ಲ​ವಾ​ಗ​ಲಿದೆ ಎಂದು ಬಿಸಿಲು, ಗಾಳಿ ಎನ್ನದೆ ಬರಿ​ಗಾ​ಲಿ​ನಲ್ಲಿ ಹಳ್ಳಿ, ಪಟ್ಟಣದಲ್ಲಿ ಕೆಲಸದಲ್ಲಿ ತೊಡ​ಗಿ​ದ್ದಾ​ರೆ.

6 ರಿಂದ 8 ನೇ ಕ್ಲಾಸಿಗೂ ಶೀಘ್ರ ಶಾಲೆ ಆರಂಭ.?

2.50 ಲಾಭ:

ಪಟ್ಟ​ಣ​ದಲ್ಲಿ ಜನ​ನೀ​ಬಿಡ ಪ್ರದೇ​ಶ​ದಲ್ಲಿ ತಂಡೋಪ ತಂಡ​ವಾಗಿ ಐಸ್‌ಕ್ಯಾಂಡಿ ಮಾರಾಟದಲ್ಲಿ ತೊಡ​ಗಿ​ರುವ ಮಕ್ಕಳು ಕಂಪ​ನಿ​ಗ​ಳಿಂದ 2ರಿಂದ 3ಕ್ಕೆ ತಂದು ಗ್ರಾಹ​ಕ​ರಿಗೆ 5ಗೆ ಮಾರಾಟ ಮಾಡು​ತ್ತಿ​ದ್ದಾರೆ. ಒಂದು ಐಸ್‌ ಮಾರಾ​ಟ​ದಿಂದ . 2ರಿಂದ 3 ಉಳಿ​ತಾ​ಯ​ವಾ​ಗು​ತ್ತದೆ. ಸೂರ್ಯನ ಕಿರಣ ಪ್ರಖ​ರ​ವಾ​ಗು​ತ್ತಿ​ದ್ದಂತೆ ರಸ್ತೆ​ಗಿ​ಳಿ​ಯುವ ಮಕ್ಕಳ ಸಂಜೆ ನಾಲ್ಕು ಗಂಟೆ ವರೆಗೂ ಮಾರಾಟದಲ್ಲಿ ತೊಡ​ಗು​ತ್ತಿದ್ದು ದಿನಕ್ಕೆ 100ರಿಂದ 200 ಸಂಪಾ​ದಿ​ಸು​ತ್ತಿ​ದ್ದಾ​ರೆ.

ನೋಡ್ರೀ ಸರ್‌. ಇನ್ನೂ ನಮ್ಮ ಶಾಲಿ ತೆಗ​ದಿಲ್ರೀ. ಮನ್ಯಾಗ್‌ ಕೂತ್‌ ಸಾಕಾ​ಗೈತಿ. ಆಟ್‌ ಆಡೋಕ್‌ ಹೋದರ್‌ ಮನ್ಯಾಗ್‌ ಬೈಯ್ತಾರ. ಅದಕ್‌ ನಾವ್‌ ಐಸ್‌ ಮಾರ​ತಿ​ದ್ದೀವಿ. ಇದ​ರಿಂದ ನಮಗ್‌ ಎರ​ಡ್ಮೂರ್‌ ರುಪಾಯಿ ಲಾಭ ಸಿಗುತ್‌. ಶಾಲಿ ಬಾಗಿಲ್‌ ತಗ​ದರ್‌ ನಾವು ಶಾಲಿಗೆ ಹೋಗ್ತೀವಿ ಎಂದು ಐಸ್‌ ಕ್ಯಾಂಡಿ ಮಾರುವ ಮಕ್ಕ​ಳು ಹೇಳುತ್ತಾರೆ. 
 

click me!