ಚಿಕ್ಕಮಗಳೂರು: ಕರೆಂಟ್ ಇಲ್ಲದೆ ಬೀದಿ ದೀಪದಡಿ ಓದುತ್ತಿರೋ ಮಕ್ಕಳು..!

By Girish Goudar  |  First Published Feb 13, 2024, 11:12 AM IST

ಮುಂದಿನ ತಿಂಗಳು ಎಸ್.ಎಸ್.ಎಲ್.ಸಿ. ಹಾಗೂ 2nd ಪಿಯುಸಿ ಪರೀಕ್ಷೆ ಇದೆ. ಪರೀಕ್ಷೆ ವೇಳೆಯಲ್ಲಿ ಪವರ್ ಪ್ರಾಬ್ಲಂ ನಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಲು ಪರದಾಟ ನಡೆಸುತ್ತಿದ್ದಾರೆ. 


ಚಿಕ್ಕಮಗಳೂರು(ಫೆ.13):  ಕರೆಂಟ್ ಇಲ್ಲದೆ ಬೀದಿ ದೀಪದಡಿ ಮಕ್ಕಳು ಓದುತ್ತಿರುವಂತೆ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ  ಪವರ್ ಕಟ್ ನಿಂದ ವಸತಿ ಶಾಲೆ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಉಸ್ತುವಾರಿ ಜಿಲ್ಲೆಯಲ್ಲಿ ವಿದ್ಯುತ್‌ ಇಲ್ಲದೆ ಮಕ್ಕಳು ಗೋಳಾಟ ನಡೆಸುತ್ತಿದ್ದಾರೆ. 

ಸರ್ಕಾರದ ಹಾಸ್ಟೆಲ್‌ನಲ್ಲಿ ಯುಪಿಎಸ್ ಇಲ್ವಾ ಎಂಬ ಪ್ರಶ್ನೆ ಇದೀಗ ಉದ್ಬವವಾಗಿದೆ. ಕರೆಂಟ್ ಇಲ್ಲದೆ ಹಾಸ್ಟೆಲ್ ಹೊರಭಾಗದ ಬೀದಿದೀಪದ ಬೆಳಕಲ್ಲಿ ಮಕ್ಕಳು ಓದುತ್ತಿದ್ದಾರೆ.  ಮುಂದಿನ ತಿಂಗಳು ಎಸ್.ಎಸ್.ಎಲ್.ಸಿ. ಹಾಗೂ 2nd ಪಿಯುಸಿ ಪರೀಕ್ಷೆ ಇದೆ. ಪರೀಕ್ಷೆ ವೇಳೆಯಲ್ಲಿ ಪವರ್ ಪ್ರಾಬ್ಲಂ ನಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಲು ಪರದಾಟ ನಡೆಸುತ್ತಿದ್ದಾರೆ. 

Latest Videos

undefined

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಗುಡ್ಡದಲ್ಲಿ ಕಾಡ್ಗಿಚ್ಚು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶ

ಎನ್.ಆರ್.ಪುರ ತಾಲೂಕು ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಟಿ.ಡಿ.ರಾಜೇಗೌಡ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜೇಗೌಡ ಕರ್ನಾಟಕ ನವೀಕರಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. 

click me!