CBSE’s new OMR sheets: ಸಿಬಿಎಸ್‌ಇ ಪರೀಕ್ಷೆ ಅವಧಿ, ವಿಷಯವಾರು ದಿನಾಂಕ ಪಟ್ಟಿ ಬಿಡುಗಡೆ

By Suvarna News  |  First Published Nov 6, 2021, 12:58 AM IST

* CBSE ಪರೀಕ್ಷೆಯ ಅವಧಿ ಮತ್ತು ವಿಷಯವಾರು ದಿನಾಂಕ ಪಟ್ಟಿ ಪ್ರಕಟ
* ಹೊಸ ಅಧಿಸೂಚನೆಯನ್ನು ಹೊರಡಿಸಿದ ಸಿಬಿಎಸ್‌ಇ 
 * 12ನೇ ತರಗತಿಯಲ್ಲಿ 114 ಮತ್ತು 10ನೇ ತರಗತಿಯಲ್ಲಿ 75 ವಿಷಯ


ನವದೆಹಲಿ, (ನ.05): ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (CBSE) ಶುಕ್ರವಾರ ಪರೀಕ್ಷೆಯ ಅವಧಿ ಮತ್ತು ವಿಷಯವಾರು ದಿನಾಂಕ ಪಟ್ಟಿಯನ್ನು ಪ್ರಕಟಿಸಿದೆ.

ಹೊಸ ಅಧಿಸೂಚನೆಯನ್ನು ಹೊರಡಿಸಿದ ಸಿಬಿಎಸ್‌ಇ 12ನೇ ತರಗತಿಯಲ್ಲಿ 114 ಮತ್ತು 10ನೇ ತರಗತಿಯಲ್ಲಿ 75 ವಿಷಯಗಳನ್ನು ನೀಡುತ್ತಿದೆ. ಭಾರತ ಮತ್ತು ವಿದೇಶಗಳಲ್ಲಿನ ಎಲ್ಲಾ ಸಂಯೋಜಿತ ಶಾಲೆಗಳಲ್ಲಿ ದಿನಾಂಕ ಪಟ್ಟಿ ನಿಗದಿಪಡಿಸುವ ಮೂಲಕ ವಿವಿಧ ವಿಷಯಗಳ ಪರೀಕ್ಷೆಗಳನ್ನು ನಡೆಸುವುದಾಗಿ ಸಿಬಿಎಸ್‌ಇ ತಿಳಿಸಿದೆ.

Tap to resize

Latest Videos

CBSE 12th ಪರೀಕ್ಷೆಯಲ್ಲಿ 94% ಅಂಕ: ಹೊಸ ಮನೆ ಬುಕ್ ಮಾಡಿದ ಚೆಲುವೆ

12ನೇ ತರಗತಿ ಪರೀಕ್ಷೆ ರದ್ದು ಇಲ್ಲ
CBSE 12ನೇ ತರಗತಿಯಲ್ಲಿ 114 ಮತ್ತು 10ನೇ ತರಗತಿಯಲ್ಲಿ 75 ವಿಷಯಗಳನ್ನು ನೀಡುತ್ತಿದೆ. ಎಲ್ಲಾ ವಿಷಯಗಳ ಪರೀಕ್ಷೆಯನ್ನು ನಡೆಸಿದರೆ, ಪರೀಕ್ಷೆಯ ಸಂಪೂರ್ಣ ಅವಧಿಯು ಸುಮಾರು 45-50 ದಿನ ಆಗುತ್ತವೆ. ಆದ್ದರಿಂದ ಸಿಬಿಎಸ್‌ಇ ಈ ಕೆಳಗಿನ ವಿಷಯಗಳ ಪರೀಕ್ಷೆಗಳನ್ನು ಭಾರತ ಮತ್ತು ವಿದೇಶಗಳಲ್ಲಿನ ಎಲ್ಲಾ ಸಂಯೋಜಿತ ಶಾಲೆಗಳಲ್ಲಿ ದಿನಾಂಕ ಪಟ್ಟಿಯನ್ನು ನಿಗದಿಪಡಿಸುವ ಮೂಲಕ ನಡೆಸುತ್ತದೆ ಎಂದು ಸಿಬಿಎಸ್‌ಇ ಹೊಸ ಅಧಿಸೂಚನೆಯಲ್ಲಿ ತಿಳಿಸಿದೆ.

90 ನಿಮಿಷಗಳ ಪರೀಕ್ಷೆ:
ಸಿಬಿಎಸ್‌ಇ ಪರೀಕ್ಷೆಯು 90 ನಿಮಿಷಗಳ ಅವಧಿಯಲ್ಲಿ ನಡೆಯಲಿವೆ. ಕೆಲವು ಕಡೆಗಳಲ್ಲಿ ಬದಲಾವಣೆಗಳು ಆಗಲಿದ್ದು, ಅದು ಪಠ್ಯಕ್ರಮದ ಪ್ರಕಾರ ಪ್ರವೇಶ ಕಾರ್ಡ್‌ನಲ್ಲಿ ನಮೂದಿಸಿರುವಂತೆ ಇರುತ್ತದೆ ಎಂದು ಹೇಳಿದೆ. ನವೆಂಬರ್ 9ರೊಳಗೆ ಶಾಲೆಗಳೊಂದಿಗೆ 10, 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ‌ಗಳನ್ನು ನೀಡುವುದಾಗಿ ಸಿಬಿಎಸ್‌ಇ ಹೇಳಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿಗಳು, ಪರೀಕ್ಷಾ ಕೇಂದ್ರವನ್ನು ನವೆಂಬರ್ 9ರಂದು cbse.gov.in ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಸಂಪೂರ್ಣ ಮಾರ್ಗಸೂಚಿ

* ಪ್ರವೇಶ ಪತ್ರದಲ್ಲಿ ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಮುದ್ರಿಸಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.

* 2022ರ ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಲಾದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ಅದನ್ನು ಸಂಗ್ರಹಿಸಬೇಕಾಗುತ್ತದೆ ಎಂದು ಮಂಡಳಿ ಪುನರುಚ್ಚರಿಸಿದೆ.

* ಅಧಿಸೂಚನೆಯ ಪ್ರಕಾರ, ಪ್ರವೇಶ ಪತ್ರ‌ಗಳನ್ನು ನವೆಂಬರ್ 9ರೊಳಗೆ ಶಾಲೆಗಳೊಂದಿಗೆ ಹಂಚಿಕೊಳ್ಳಲಾಗುವುದು.

* COVID-19 ಸಂಬಂಧಿತ SOP ಗಳನ್ನು ಮಂಡಳಿಯು ಕೇಂದ್ರದ ಅಧೀಕ್ಷಕರೊಂದಿಗೆ ಹಂಚಿಕೊಳ್ಳುತ್ತದೆ.

* ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲಾಗುವುದು.

* ಪರೀಕ್ಷಾ ಹಾಲ್‌ನಲ್ಲಿ ಅನುಮತಿಸಬೇಕಾದ ವಸ್ತುಗಳ ಪಟ್ಟಿಯನ್ನು ಹಂಚಿಕೊಳ್ಳುವುದಾಗಿ ಮಂಡಳಿ ತಿಳಿಸಿದೆ.

* ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗುವುದು ಮತ್ತು ಸೂಚನೆಗಳನ್ನು ಅನುಸರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗುವುದು

* ಒಎಂಆರ್ ಶೀಟ್‌ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಶಾಲೆಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ:
ಕಳೆದ ಅಕ್ಟೋಬರ್ 18ರಂದು, ಸಿಬಿಎಸ್‌ಇ ಕೇಂದ್ರೀಯ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, 10ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳು ನವೆಂಬರ್ 30 ರಿಂದ ಪ್ರಾರಂಭವಾಗಲಿದ್ದು, 12ನೇ ತರಗತಿಯ ಪರೀಕ್ಷೆಗಳು ಡಿಸೆಂಬರ್ 1 ರಿಂದ ನಿಗದಿಯಾಗಿದೆ ಎಂದು ಹೇಳಿದೆ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್, ಪ್ರಮುಖ ವಿಷಯಗಳಿಗೆ ಮತ್ತು ಸಣ್ಣ ವಿಷಯಗಳ ವೇಳಾಪಟ್ಟಿಯನ್ನು ಶಾಲೆಗಳಿಗೆ ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಹೇಳಿದರು. 10 ಮತ್ತು 12 ನೇ ತರಗತಿಗಳ ಸಣ್ಣ ವಿಷಯಗಳ ಪರೀಕ್ಷೆಗಳು ಕ್ರಮವಾಗಿ ನವೆಂಬರ್ 17 ಮತ್ತು ನವೆಂಬರ್ 16 ರಿಂದ ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.

2021-22ನೇ ಸಾಲಿನಲ್ಲಿ 10ನೇ ಮತ್ತು 12ನೇ ತರಗತಿಯ CBSE ಬೋರ್ಡ್ ಪರೀಕ್ಷೆಗಳಿಗೆ ವಿಶೇಷ ಮೌಲ್ಯಮಾಪನ ಯೋಜನೆಯ ಭಾಗವಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. COVID-19 ಸಾಂಕ್ರಾಮಿಕದ ದೃಷ್ಟಿಯಿಂದ ಶೈಕ್ಷಣಿಕ ಅವಧಿಯನ್ನು ವಿಭಜಿಸುವುದು, ಎರಡು ಅವಧಿಯ ಅಂತಿಮ ಪರೀಕ್ಷೆಗಳನ್ನು ನಡೆಸುವುದು. ಪಠ್ಯಕ್ರಮ ತರ್ಕಬದ್ಧಗೊಳಿಸುವ ಬಗ್ಗೆ ಕಳೆದ ಜುಲೈನಲ್ಲಿ ಘೋಷಿಸಲಾಗಿತ್ತು.

10ನೇ ತರಗತಿ ಪರೀಕ್ಷೆ ವೇಳಾಪಟ್ಟಿ:
ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳಿಗಾಗಿ ನವೆಂಬರ್ 30ರಿಂದ ಪರೀಕ್ಷೆಗಳು ಆರಂಭವಾಗಲಿವೆ.

* ನವೆಂಬರ್ 30 - ಸಮಾಜ ವಿಜ್ಞಾನ

* ಡಿಸೆಂಬರ್ 2 - ವಿಜ್ಞಾನ,

* ಡಿಸೆಂಬರ್ 3 - ಗೃಹ ವಿಜ್ಞಾನ,

* ಡಿಸೆಂಬರ್ 4 - ಗಣಿತ ಮಾನದಂಡ ಮತ್ತು ಗಣಿತ ಮೂಲ,

* ಡಿಸೆಂಬರ್ 8 - ಕಂಪ್ಯೂಟರ್ ಅಪ್ಲಿಕೇಶನ್,

* ಡಿಸೆಂಬರ್ 8 - ಹಿಂದಿ ಕೋರ್ಸ್‌ಗಳು A ಮತ್ತು B

* 9 ಮತ್ತು ಡಿಸೆಂಬರ್ 11 ರಂದು ಇಂಗ್ಲಿಷ್

click me!