ನವದೆಹಲಿ(ಜೂ.01): ಕೊರೋನಾ ವೈರಸ್ 2ನೇ ಅಲೆ ಭಾರತದ ಎಲ್ಲಾ ಕ್ಷೇತ್ರಕ್ಕೆ ತೀವ್ರ ಹೊಡೆತ ನೀಡುತ್ತಿದೆ. ವೈರಸ್ ನಿಯಂತ್ರಣಕ್ಕೆ ಬಹುತೇಕ ರಾಜ್ಯಗಳು ಲಾಕ್‌ಡೌನ್ ಘೋಷಿಸಿದೆ. ಇದರ ನಡುವೆ CBSE 12ನೇ ಕ್ಲಾಸ್ ಪರೀಕ್ಷೆ ತೀವ್ರ ಚರ್ಚೆಯಾಗಿತ್ತು. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ CBSE 12ನೇ ಕ್ಲಾಸ್ ಪರೀಕ್ಷೆ ರದ್ದು ಮಾಡಲು ನಿರ್ಧರಿಸಲಾಗಿದೆ.
10ನೇ ತರಗತಿ ಪರೀಕ್ಷೆ ರದ್ದು, 12ನೇ ಕ್ಲಾಸ್ ಎಕ್ಸಾಂ ಮುಂದೂಡಿದ ಯುಪಿ.
undefined
ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪರೀಕ್ಷೆ ಆಯೋಜಿಸಿ ಯುವ ವಿದ್ಯಾರ್ಥಿಗಳ ಆರೋಗ್ಯಕ್ಕೆ ಸವಾಲೆಸೆಯುವ ಕಾರ್ಯ ಮಾಡುವುದಿಲ್ಲ ಎಂದರು
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ. ಕೊರೋನಾ ವೈರಸ್ ಶೈಕ್ಷಣಿಕ ವರ್ಷದ ಮೇಲೆ ತೀವ್ರ ಪರಿಣಾಮ ಬೀರಿದೆ. ಬೋರ್ಡ್ ಪರೀಕ್ಷೆಯಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಹೆಚ್ಚಿಸಿದೆ. ಹೀಗಾಗಿ ಎಲ್ಲರ ಆರೋಗ್ಯ ಹಾಗೂ ಕೊರೋನಾ ಹರಡುವಿಕೆ ಗಮನದಲ್ಲಿಟ್ಟುಕೊಂಡು CBSE 12ನೇ ಕ್ಲಾಸ್ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಪರೀಕ್ಷೆ ದಿನಾಂಕ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ ಕೊಟ್ಟ ಸಚಿವ
ಭಾರತ ಕೊರೋನಾ 2ನೇ ಅಲೆ ಅತ್ಯಂತ ಕೆಟ್ಟಪರಿಸ್ಥಿತಿಯನ್ನೇ ತಂದೊಡ್ಡಿದೆ. ಸತತ ಹೋರಾಟದಿಂದ ಭಾರತ ಕೊರೋನಾ ಪ್ರಕರಣ ಸಂಖ್ಯೆಯನ್ನು ಕಡಿಮೆ ಮಾಡಿದೆ. ಕೆಲ ರಾಜ್ಯಗಳು ಕಠಿಣ ಹಾಗೂ ಲಾಕ್‌ಡೌನ್ ನಿರ್ಧಾರದಿಂದ ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಪೋಷಕರು ಚಿಂತಾಕ್ರಾಂತರಾಗಿದ್ದಾರೆ. ಶಿಕ್ಷಕರು ಆತಂಕಕ್ಕೊಳಾಗಿದ್ದಾರೆ. ಇಂತಹ ಒತ್ತಡ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಹಾಜರಾಗುವಂತೆ ಒತ್ತಾಯಿಸಬಾರದು ಎಂದು ಮೋದಿ ಹೇಳಿದ್ದಾರೆ.
ಪರೀಕ್ಷೆ ಕುರಿತು ಪ್ರತಿ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪ್ರತಿ ರಾಜ್ಯಗಳು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಆರೋಗ್ಯದ ಕುರಿತು ತೀವ್ರ ಕಾಳಜಿ ವ್ಯಕ್ತಪಡಿಸಿತ್ತು. ಸಲಹೆ, ಸೂಚನೆ ನೀಡಿದ ಪ್ರತಿ ರಾಜ್ಯಗಳಿಗೆ ಮೋದಿ ಧನ್ಯವಾದ ಅರ್ಪಿಸಿದರು. ಕಳೆದ ವರ್ಷದಂತೆ, ಕೆಲವು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ಬಯಸಿದರೆ, ಅಂತಹ ಆಯ್ಕೆಯನ್ನು ಅವರಿಗೆ ಸಿಬಿಎಸ್‌ಇ ನೀಡುತ್ತದೆ. ಆದರೆ ಪರಿಸ್ಥಿತಿ ಕೊಂಚ ಸುಧಾರಿಸಿದ ವೇಳೆಯಲ್ಲಿ ಈ ಆಯ್ಕೆ ನೀಡಲಾಗುತ್ತದೆ ಎಂದರು.
ಪರೀಕ್ಷೆ ಇಲ್ಲದೆ ಪಾಸ್ : ಗೊಂದಲ ನಿವಾರಿಸಲು ಮನವಿ.
ಕೊರೋನಾ ಆತಂಕ ಇನ್ನೂ ತಗ್ಗಿಲ್ಲ. ಮುಂಜಾಗ್ರತಾ ಕ್ರಮವಾಗಿ CBSE 12ನೇ ಕ್ಲಾಸ್ ಪರೀಕ್ಷೆ ರದ್ದು ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸಮಯಕ್ಕೆ ತಕ್ಕಂತೆ ಉತ್ತಮವಾಗಿ ವ್ಯಾಖ್ಯಾನಿಸಲಾದ ವಸ್ತುನಿಷ್ಠ ಮಾನದಂಡಗಳ ಪ್ರಕಾರ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ.