CBSE Class 10 Results 2026: ಶೇ. 93.70ರಷ್ಟು ಮಂದಿ ಪಾಸ್‌, ಬೆಂಗಳೂರಿಗೆ ಮೂರನೇ ಸ್ಥಾನ; ಅಂಕಪಟ್ಟಿ ಹೀಗೆ ಡೌನ್‌ಲೋಡ್‌ ಮಾಡಿ

Published : Apr 15, 2026, 06:10 PM ISTUpdated : Apr 15, 2026, 06:14 PM IST
CBSE

ಸಾರಾಂಶ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ. 93.70 ರಷ್ಟಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳು, ಡಿಜಿಲಾಕರ್ ಮತ್ತು ಉಮಂಗ್ ಆ್ಯಪ್‌ಗಳ ಮೂಲಕ ಪರಿಶೀಲಿಸಬಹುದು.

ನವದೆಹಲಿ (ಏ.15): ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (CBSE) 10ನೇ ತರಗತಿಯ ಫಲಿತಾಂಶ ಇಂದು (ಏಪ್ರಿಲ್ 15) ಪ್ರಕಟವಾಗಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಈ ಫಲಿತಾಂಶ ಹೊರಬಿದ್ದಿದ್ದು, ಡಿಜಿಲಾಕರ್ (DigiLocker) ಮತ್ತು ಉಮಂಗ್ (UMANG) ಆ್ಯಪ್ ಮೂಲಕ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.

ಈ ವರ್ಷದ ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ. 93.70 ರಷ್ಟಿದೆ. (ಕಳೆದ ವರ್ಷ ಶೇ. 93.66 ಇತ್ತು). ಶೇ.0.04ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಎಂದಿನಂತೆ ತ್ರಿವೇಂದ್ರಂ ವಲಯವು ಶೇ. 99.79 ರಷ್ಟು ಫಲಿತಾಂಶದೊಂದಿಗೆ ದೇಶದಲ್ಲೇ ಮೊದಲ ಸ್ಥಾನ ಪಡೆದಿದ್ದು, ಇಷ್ಟೇ ಪಾಸ್‌ ಪರ್ಸಂಟೇಜ್‌ ಹೊಂದಿರುವ ವಿಜಯವಾಡದೊಂದಿಗೆ ಜಂಟಿ ಅಗ್ರಸ್ಥಾನ ಗಳಿಸಿದೆ. ಶೇ. 99.58ರೊಂದಿಗೆ ಚೆನ್ನೈ 2ನೇ ಸ್ಥಾನದಲ್ಲಿದೆ. ಶೇ. 98.91 ಪಾಸ್‌ ಪರ್ಸಂಟೇಜ್‌ನೊಂದಿಗೆ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಈ ಬಾರಿ 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 23.16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Direct link to check CBSE Class 10 results on DigiLocker

Direct link to check CBSE Class 10 results 2026 on the official website

ಫಲಿತಾಂಶ ವೀಕ್ಷಿಸುವುದು ಹೇಗೆ?

ಸದ್ಯಕ್ಕೆ ಅಧಿಕೃತ ವೆಬ್‌ಸೈಟ್‌ಗಳು ಅತೀ ಹೆಚ್ಚು ಟ್ರಾಫಿಕ್‌ನಿಂದಾಗಿ ನಿಧಾನವಾಗಬಹುದು. ಅಂತಹ ಸಮಯದಲ್ಲಿ ಈ ಹಂತಗಳನ್ನು ಅನುಸರಿಸಿ:

  • ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ results.cbse.nic.in ಅಥವಾ cbse.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “CBSE Class 10 Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರೋಲ್ ನಂಬರ್ (Roll Number), ಶಾಲಾ ಸಂಖ್ಯೆ (School Number), ಅಡ್ಮಿಟ್ ಕಾರ್ಡ್ ಐಡಿ (Admit Card ID) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • ಸೆಕ್ಯೂರಿಟಿ ಪಿನ್ ನಮೂದಿಸಿ ಸಬ್ಮಿಟ್ (Submit) ಕೊಡಿ.
  • ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಫಲಿತಾಂಶ ವೀಕ್ಷಿಸಲು ಪರ್ಯಾಯ ಮಾರ್ಗಗಳು

ವೆಬ್‌ಸೈಟ್ ಲಭ್ಯವಿಲ್ಲದಿದ್ದರೆ ವಿದ್ಯಾರ್ಥಿಗಳು ಈ ಕೆಳಗಿನ ವಿಧಾನಗಳನ್ನು ಬಳಸಬಹುದು

  • ಡಿಜಿಲಾಕರ್ (DigiLocker): ಡಿಜಿಲಾಕರ್ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಲಾಗಿನ್ ಆಗಿ ನಿಮ್ಮ ಅಂಕಪಟ್ಟಿ ಪಡೆಯಬಹುದು.
  • ಉಮಂಗ್ ಆ್ಯಪ್ (UMANG App): ಈ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಲಭ್ಯವಿದೆ.
  • SMS ಮತ್ತು IVRS: ಇಂಟರ್ನೆಟ್ ಲಭ್ಯವಿಲ್ಲದಿದ್ದರೆ ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆಯಲು ಮಂಡಳಿಯು ವ್ಯವಸ್ಥೆ ಮಾಡಿದೆ.

ಅಂಕಪಟ್ಟಿಯಲ್ಲಿ ಏನಿರುತ್ತದೆ?

ನಿಮ್ಮ ಆನ್‌ಲೈನ್ ಅಂಕಪಟ್ಟಿಯು ತಾತ್ಕಾಲಿಕವಾಗಿದ್ದು, ಇದರಲ್ಲಿ ವಿಷಯವಾರು ಗ್ರೇಡ್‌ಗಳು, ಒಟ್ಟು ಸಿಜಿಪಿಎ (CGPA) ಮತ್ತು ನೀವು ಉತ್ತೀರ್ಣರಾಗಿದ್ದೀರಾ ಇಲ್ಲವೇ ಎಂಬ ಮಾಹಿತಿ ಇರುತ್ತದೆ. ಅಧಿಕೃತವಾದ ಮೂಲ ಅಂಕಪಟ್ಟಿಗಳನ್ನು ಆಯಾ ಶಾಲೆಗಳ ಮೂಲಕ ನಂತರ ವಿತರಿಸಲಾಗುತ್ತದೆ. ಸಿಬಿಎಸ್‌ಇ ಮಂಡಳಿಯು ಲಿಂಗವಾರು (Gender-wise), ರಾಜ್ಯವಾರು ಮತ್ತು ವಿಶೇಷ ಚೇತನ ವಿದ್ಯಾರ್ಥಿಗಳ (CWSN) ಸಾಧನೆಯ ಅಂಕಿಅಂಶಗಳನ್ನೂ ಬಿಡುಗಡೆ ಮಾಡಿದೆ. ಈ ಫಲಿತಾಂಶದ ಘೋಷಣೆಯು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನದ ಪ್ರಮುಖ ಮೈಲಿಗಲ್ಲಾಗಿದೆ.

PREV
Read more Articles on
click me!

Recommended Stories

ಕಾಗ್ನಿಜೆಂಟ್‌ ಟೆಕ್ನೋವರ್ಸ್: ಎಐ ಭವಿಷ್ಯ ರೂಪಿಸುವ ಸ್ಪರ್ಧೆ, 400ಕ್ಕೂ ಹೆಚ್ಚು ಕಾಲೇಜುಗಳ 20000 ವಿದ್ಯಾರ್ಥಿಗಳು ಭಾಗಿ
ಫೋನ್ ಇಲ್ಲ, ಎಟಿಎಂ ಬಳಸುತ್ತಿಲ್ಲ: 100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ