Niranjan Vanalli: ಬೆಂಗಳೂರು ಉತ್ತರ ವಿವಿ ವೈಸ್ ಚಾನ್ಸಲರ್ ಆಗಿ ಪ್ರೊ. ನಿರಂಜನ ವಾನಳ್ಳಿ ನೇಮಕ

By Suvarna News  |  First Published Nov 30, 2021, 10:32 PM IST

* ಪ್ರೊಫೆಸರ್ ನಿರಂಜನ ವಾನಳ್ಳಿ  ಅವರಿಗೆ ಹೊಸ ಜವಾಬ್ದಾರಿ
* ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ  ನೇಮಕ
* ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ
* ಸಂವಹನ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ ಅನುಭವ


ಬೆಂಗಳೂರು (ನ. 30)  ಮೈಸೂರು(Mysuru VV) ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ (mass communication and journalism) ಮುಖ್ಯಸ್ಥರಾಗಿರುವ ಪ್ರೊಫೆಸರ್ ನಿರಂಜನ ವಾನಳ್ಳಿ(Niranjan Vanalli) ಅವರನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ  ನೇಮಕ ಮಾಡಲಾಗಿದೆ. ಸರ್ಕಾರ ಅಧಿಸೂಚನೆಯಲ್ಲಿ ವಿವರ ತಿಳಿಸಿದೆ.

ಅಧಿಕಾರ ವಹಿಸಿಕೊಂಡ ದಿನದಿಂದ 4 ವರ್ಷಗಳ ಅವಧಿ ಅಥವಾ ಅವರಿಗೆ 67 ವರ್ಷ ತುಂಬುವವರೆಗೆ ಯಾವುದು ಬೇಗ ಮುಗಿಯುತ್ತದೆಯೋ ಅಲ್ಲಿಯವರರೆಗೆ ಕುಲಪತಿ ಅಧಿಕಾರದಲ್ಲಿ ಇರಲಿದ್ದಾರೆ.

Tap to resize

Latest Videos

ಕೋಲಾರದಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಪ್ರೊ.ಟಿ.ಡಿ.ಕೆಂಪರಾಜು 26 ಜುಲೈ, 2017 ರಲ್ಲಿ ನೇಮಕಗೊಂಡಿದ್ದರು. ಅವರ 4 ವರ್ಷಗಳ ಅವಧಿ 25 ಜುಲೈ, 2021 ರಲ್ಲಿ ಪೂರ್ಣಗೊಂಡಿತ್ತು. ಬಳಿಕ ಹಿರಿಯ ಡೀನ್ ಡಾ.ಡಿ.ಕುಮುದಾ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು.

Jobs in BMTC: ಬಿಎಂಟಿಸಿಯಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಸಲ್ಲಿಸಿ

ಇದೀಗ ಕುಲಪತಿ ಶೋಧನಾ ಸಮಿತಿ ಶಿಫಾರಸ್ಸಿನ ಆಧಾರದ ಮೇರೆಗೆ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ಅವರನ್ನು ನೂತನ ಕುಲಪತಿಯಾಗಿ ನೇಮಕ ಮಾಡಿ, ಕುಲಾಧಿಪತಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಆದೇಶ ಹೊರಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಿರಂಜನ್ ಅವರಿಗೆ ಗೆಳೆಯರು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು ಹಳೆಯ ನೆನಪುಗಳನ್ನು  ಹಂಚಿಕೊಂಡಿದ್ದಾರೆ. 

ನಿರಂಜನ ವಾನಳ್ಳಿಹುಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ 'ವಾನಳ್ಳಿ'ಯಲ್ಲಿ. ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. 

ನಿರಂಜನ ವಾನಳ್ಳಿ ಅವರ 'ಒಂದು ಅಡಿ ಭೂಮಿ, ಬೊಗಸೆ ತುಂಬ ಪ್ರೀತಿ' ಎಂಬುದು 31 ನೇ ಕೃತಿ.  ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿ ನಿಯತಕಾಲಿಕ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ಎಲ್ಲರಿಗೂ ಬೇಕು ಸಂವಹನ ಕಲೆ ಪುಸ್ತಕಗಳನ್ನು ನೀಡಿದ್ದಾರೆ.  ದಕ್ಷಿಣ ಜಿಲ್ಲೆಯ ಉಜಿರೆಯ ಎಸ್.ಡಿ.ಎಂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ನಿರ್ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೂ ಪಾತ್ರವಾಗಿದ್ದಾರೆ. 

ಕವಿ, ವಿಮರ್ಶಕ, ಸಂಶೋಧಕ, ಅಧ್ಯಾಪಕ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕನ್ನಡದ ಹೆಸರಾಂತ ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಕೃಷಿ ಮಾಡಿದ್ದಾರೆ.  ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ವಾನಳ್ಳಿಯವರ ಲೇಖನಗಳು ಪ್ರಕಟವಾಗುತ್ತಲೇ ಇರುತ್ತವೆ. ಸಂಗೀತ ವಿವಿಯನ್ನು ಮುಂದೆ ನಡೆಸಿದ್ದ ವಾನಳ್ಳಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿಯೂ ಭಾಗವಹಿಸುತ್ತಾರೆ. 

click me!