1st PUC ದಾಖಲಾತಿಗೆ SSLC ಫಲಿತಾಂಶವೇ ವಿದ್ಯಾರ್ಥಿಗಳಿಗೆ ತೊಡಕಾಗುತ್ತಾ!?

By Suvarna News  |  First Published May 14, 2022, 1:08 PM IST

ಮೇ 19ರಂದು ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಕಾತರದಿಂದ ಕಾಯ್ತುತ್ತಿದ್ದಾರೆ. ಮುಂದೆ ಪಿಯುಸಿಗೆ ಪ್ರವೇಶಾತಿ ಪಡೆಯಲು ತುದಿಕಾಲಿನಲ್ಲಿದ್ದಾರೆ. ಆದರೆ ಈಗ ಪಿಯುಸಿ ಪ್ರವೇಶಾತಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.


ಬೆಂಗಳೂರು (ಮೇ.14): ಮೇ 19ರಂದು ಎಸೆಸೆಲ್ಸಿ ಫಲಿತಾಂಶ (karnataka sslc resul) ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಕಾತರದಿಂದ ಕಾಯ್ತುತ್ತಿದ್ದಾರೆ. ಮುಂದೆ ಪಿಯುಸಿಗೆ ಪ್ರವೇಶಾತಿ (puc admission 2022-23) ಪಡೆಯಲು ತುದಿಕಾಲಿನಲ್ಲಿದ್ದಾರೆ. ಅದೇ ಹೊತ್ತಿಗೆ ದ್ವಿತೀಯ ಪಿಯು ಪರೀಕ್ಷೆ (karnataka 2nd puc Exam) ಮುಗಿದು ಉಪನ್ಯಾಸಕರು (professor) ಮೌಲ್ಯಮಾಪನದಲ್ಲಿ ತೊಡಗಲಿದ್ದಾರೆ. ಹೀಗಾಗಿ ಪ್ರಥಮ ಪಿಯುಸಿ (1st PUC) ವಿದ್ಯಾರ್ಥಿಗಳ ದಾಖಲಾತಿಗೆ ಉಪನ್ಯಾಸಕರ ಕೊರತೆ ಉಂಟಾಗಲಿದೆ.

ಖಾಸಗಿ ಕಾಲೇಜಿನಲ್ಲಿ ಪರ್ಯಾಯ ವ್ಯವಸ್ಥೆ ಇರಲಿದೆ. ಆದರೆ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ಸಮಸ್ಯೆ ಎದುರಾಗಲಿದೆ. ಪ್ರತೀ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿತ್ತು. ಈ ಬಾರಿ ಹಾಗಲ್ಲ ಮೊದಲು  ಎಸೆಸೆಲ್ಸಿ ಪರೀಕ್ಷೆ ನಡೆದಿದೆ.  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು  ಮೇ 18ರ ವರೆಗೆ ನಡೆಯುತ್ತಿದೆ.

Tap to resize

Latest Videos

ಜೂನ್ ಅಂತ್ಯದ ಒಳಗೆ ಫಲಿತಾಂಶ  ಪ್ರಕಟಿಸು ಸಲುವಾಗಿ, ಪರಿಕ್ಷೆ ನಡೆಯುತ್ತಿದ್ದಂತೆಯೇ ಒಂದೊಂದಾಗಿ ಪೇಪರ್ ತಿದ್ದುಪಡಿ ಕೂಡ ನಡೆಸಲಾಗುತ್ತಿದೆ. ಈ ಹಿಂದೆ 13 ದಿನಗಳೊಳಗೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಯುತ್ತಿತ್ತು. ಆದರೆ ಈ ಬಾರಿ ಜೆಇಇ ಪರೀಕ್ಷೆಗೆ ಸಮಸ್ಯೆ ಆಗಬಾರದೆಂದು ಬರೋಬ್ಬರಿ ಒಂದು ತಿಂಗಳು ಅಂದರೆ 29 ದಿನಗಳ ಕಾಲ ನಡೆಯುತ್ತಿದೆ. ಇದು ಈಗ ಹೊಸ ಸಮಸ್ಯೆಗೆ ಕಾರಣವಾಗಿದೆ.

ದುಡ್ಡಿನೆದುರು ಮನುಷ್ಯನ ಸಣ್ಣತನ ಸಾರುವ ಉಜಿರೆ SDM ವಿದ್ಯಾರ್ಥಿಗಳ ಕಿರುಚಿತ್ರ

ಎಸೆಸೆಲ್ಸಿ ಫಲಿತಾಂಶ ಬಂದ ತಕ್ಷಣ ಯಾವ ಕಾಲೇಜಿಗೆ, ಯಾವ ವಿಭಾಗಕ್ಕೆ  ಮಕ್ಕಳನ್ನು ಸೇರಿಸಬೇಕೆಂಬ ಧಾವಂತ ಪೋಷಕರಲ್ಲಿರುತ್ತದೆ. ಯಾಕೆಂದರೆ  ತಡವಾದರೆ ಸೀಟು ಪಡೆಯಲು ಕಷ್ಟವಾಗುತ್ತದೆ. ವಿದ್ಯಾರ್ಥಿಗಳ ಆಸಕ್ತಿ, ಕಲಿಕಾ ಮೌಲ್ಯಮಾಪನ ಮಾಡಿ ಯಾವ ವಿಷಯ ಆಯ್ಕೆ ಮಾಡಿಕೊಂಡರೆ ಉತ್ತಮ ಎಂದು ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು ವಿದ್ಯಾರ್ಥಿ ಹಾಗೂ ಪೋಷಕರಿಗೆ ಮನವರಿಕೆ ಮಾಡಿ ಕೊಡುತ್ತಾರೆ. ಆದರೆ ಇದಕ್ಕೆ ದ್ವಿತೀಯ ಪಿಯು ಮೌಲ್ಯಮಾಪನ ಅಡ್ಡಿಯಾಗಿದೆ.

ಎಸೆಸೆಲ್ಸಿ ಫಲಿತಾಂಶ  ಪ್ರಕಟವಾದ ಬಳಿಕ ಪೂರಕ ಪರೀಕ್ಷೆ ಕೂಡ ನಡೆಸಬೇಕಾಗಿದ್ದು, ಅದಕ್ಕಾಗಿ ಸಿದ್ಧತೆ ಮಾಡ ಬೇಕಾಗುತ್ತದೆ. ಫಲಿತಾಂಶ ಪ್ರಕಟಿಸುವುದು ವಿಳಂಬವಾದರೆ,  ಮಕ್ಕಳ ದಾಖಲಾತಿಗೂ ಸಮಸ್ಯೆ ಎದುರಾಗಲಿದೆ. ಪ್ರಥಮ ಪಿಯುಸಿ ದಾಖಲಾತಿಗೆ ಯಾವುದೇ ಸಮಸ್ಯೆ  ಎದುರಾಗದಂತೆ ಆಯಾ ಕಾಲೇಜಿನಲ್ಲಿ ಒಂದಿಬ್ಬರು ಉಪನ್ಯಾಸಕರನ್ನು ನಿಯೋಜಿಸಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.

SSLC ಫಲಿತಾಂಶಕ್ಕೆ ದಿನ ನಿಗದಿ, PUC ಯದ್ದೂ ಶೀಘ್ರವೇ ಪ್ರಕಟ 

ಮೇ 19 ರಂದು SSLC ಫಲಿತಾಂಶ ಪ್ರಕಟ: ಈ ಬಾರಿಯ SSLC ಫಲಿತಾಂಶ ಮೇ 19ಕ್ಕೆ ಪ್ರಕಟವಾಗಲಿದೆ. ಇದೇ ವೇಳೆ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೂ ಸಿಕ್ಕಿದೆ. ಹೌದು ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟುಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಶಿಕ್ಷ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ. 

2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್‌ ಅಂಕದಿಂದಾಗಿ ಶೇ.9ರಷ್ಟುವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ಗರಿಷ್ಠ 26 ಅಂಕಗಳನ್ನು ನೀಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆರಂಭದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಹೀಗಾಗಿ ಮಕ್ಕಳಲ್ಲಿ ಕಲಿಕೆಯ ಕೊರತೆ ಸಹಜ ಎಂದು ಗ್ರೇಸ್‌ ಅಂಕ ನೀಡಲಾಗುತ್ತಿದೆ. ಬಹುಶಃ ಈ ಬಾರಿಯೂ ಗ್ರೇಸ್‌ ಅಂಕ ಪಡೆದು ಪಾಸಾಗುವ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

click me!