ಹಾಸ್ಟೆಲ್‌ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆ: ಐಐಟಿಯಲ್ಲೇ ಹೀಗಾದ್ರೆ ಹೇಗೆ?

Published : Sep 25, 2023, 10:11 AM IST
ಹಾಸ್ಟೆಲ್‌ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆ: ಐಐಟಿಯಲ್ಲೇ ಹೀಗಾದ್ರೆ ಹೇಗೆ?

ಸಾರಾಂಶ

ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT)ಯ ಹಾಸ್ಟೆಲ್‌ನ ಆಹಾರದಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದ್ದು, ಈ ವಿಚಾರವೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಭುವನೇಶ್ವರ: ಒಡಿಶಾದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT)ಯ ಹಾಸ್ಟೆಲ್‌ನ ಆಹಾರದಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದ್ದು, ಈ ವಿಚಾರವೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ಬಳಕೆದಾರ ಆರ್ಯಾಂಶ್ ( Aaraynsh) ಎಂಬುವವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್‌ ಆಗಿದೆ. ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆಹಾರದಲ್ಲಿ ಕಪ್ಪೆ ಇರುವ ಫೋಟೋವನ್ನು ಪೋಸ್ಟ್ ಮಾಡಿರುವ ಆರ್ಯಾಂಶ್‌ ಎಂಬುವವರು, 'ಭುವನೇಶ್ವರದಲ್ಲಿರುವ ಕೆಐಟಿ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದ್ದು, 42ನೇ ಶ್ರೇಣಿಯನ್ನು ಹೊಂದಿದ್ದ, ಈ ಕಾಲೇಜಿನಲ್ಲಿ ಪ್ರವೇಶ ಪಡೆದು ಇಂಜಿನಿಯರಿಂಗ್ ಪದವಿ ಪಡೆಯುವುದಕ್ಕಾಗಿ ಮಕ್ಕಳ ಪೋಷಕರು 17. 5 ಲಕ್ಷವನ್ನು ವೆಚ್ಚ ಮಾಡುತ್ತಾರೆ. ಆದರೆ ಅಂತಹ ಕಾಲೇಜಿನಲ್ಲಿ ಮಕ್ಕಳಿಗೆ ನೀಡುವ ಊಟ ಹೇಗಿದೆ ನೋಡಿ..!  ಇದನ್ನು ನೋಡಿದರೆ ನಾವು ಭಾರತದ ಮಕ್ಕಳು ಶಿಕ್ಷಣಕ್ಕಾಗಿ ಏಕೆ ವಿದೇಶಕ್ಕೆ ಹೋಗುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು' ಎಂದು ಬರೆದುಕೊಂಡಿದ್ದಾರೆ. ಈ ವಿಚಾರ ದೊಡ್ಡ ಸುದ್ದಿಯಾಗುತ್ತಿದ್ದಂತೆ ಕಾಲೇಜು ಆಡಳಿತವೂ ವಿದ್ಯಾರ್ಥಿಗಳ ಒಂದು ದಿನದ ಆಹಾರದ ಶುಲ್ಕವನ್ನು ಕಡಿತಗೊಳಿಸಿದೆ ಎಂದು ಆರ್ಯಾಂಶ್ ಅವರು ಮತ್ತೊಂದು ಟ್ವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಇದು ಮಕ್ಕಳ ಜೀವಕ್ಕಿರುವ ಬೆಲೆ, ಈ ಪರಿಸ್ಥಿತಿಯನ್ನು ಮುಚ್ಚಿ ಹಾಕುವುದಕ್ಕಾಗಿ ಕಾಲೇಜು ಆಡಳಿತ ಮಂಡಳಿಯೂ ಊಟವನ್ನು ತಯಾರಿಸುವ ಸಂಸ್ಥೆಗೆ ಒಂದು ದಿನದ ಊಟದ ವೆಚ್ಚವನ್ನು ಕಡಿತಗೊಳಿಸಿದೆ ಎಂದು ಅವರು ದೂರಿದ್ದಾರೆ. 

ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ: 183 ಎಕರೆಯಲ್ಲಿರುವ ಸ್ವಾಮಿನಾರಾಯಣ ದೇಗುಲ

ಆರ್ಯಾಂಶ್ ಅವರ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, 5 ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್‌ನ್ನು ಗಮನಿಸಿದ್ದಾರೆ. ಈ ಕಾಲೇಜು 17.5 ಲಕ್ಷ ಅಲ್ಲ ಇದು ಇಂಜಿನಿಯರಿಂಗ್ ಪದವಿಗಾಗಿ 22 ಲಕ್ಷವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ. 

ಜಗತ್ತು ದ್ವಿಮುಖ ನೀತಿಗಳಿಂದ ತುಂಬಿದೆ: ಜೈಶಂಕರ್‌ ಕಿಡಿ

ಇದೇ ವೇಳೆ ಮತ್ತೊಬ್ಬರು ಹಾಸ್ಟೆಲ್ ಆಹಾರದಲ್ಲಿ ತಮಗೆ ಬ್ಲೇಡ್ ಸಿಕ್ಕಿದ್ದ ದಿನಗಳನ್ನು ನೆನೆದಿದ್ದಾರೆ. ಕಾಲೇಜು ಹಾಸ್ಟೆಲ್‌ಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರು ಹಾಗೂ ಸಂಸ್ಥೆಯನ್ನು ಅಮಾನತು ಮಾಡಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಅವರ ಲೈಸೆನ್ಸ್‌ ಕೂಡ ರದ್ದು ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಆದರೆ ಮತ್ತೊಬ್ಬರು ಸರ್ಕಾರಿ ಕಾಲೇಜು ಹಾಸ್ಟೆಲ್‌ಗಳಲ್ಲಿ ಆಹಾರ ಕೆಟ್ಟದಾಗಿರುತ್ತದೆ. ಆದರೆ ಖಾಸಗಿಯಲ್ಲಿ ಆಹಾರ ತುಂಬಾ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬರು ನನಗೆ ಬೆಂಗಳೂರಿನ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಆಹಾರದಲ್ಲಿ ಬ್ಲೇಡ್ ಸಿಕ್ಕಿತ್ತು ಎಂಬುದನ್ನು ನೆನೆದಿದ್ದಾರೆ. 

ನಿಜ್ಜರ್‌ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ!

 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ