ಭಾರತೀಯ ವಿದ್ಯಾಭವನ-ಬಿಬಿಎಂಪಿ ಪಬ್ಲಿಕ್ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ; ಮಾ.11ರಿಂದ ಅರ್ಜಿ ವಿತರಣೆ

Published : Mar 07, 2024, 07:19 PM IST
ಭಾರತೀಯ ವಿದ್ಯಾಭವನ-ಬಿಬಿಎಂಪಿ ಪಬ್ಲಿಕ್ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ; ಮಾ.11ರಿಂದ ಅರ್ಜಿ ವಿತರಣೆ

ಸಾರಾಂಶ

ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆಯ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ಫ್ರೀ ನರ್ಸರಿ(ಸಿ.ಬಿ.ಎಸ್.ಸಿ ಪಠ್ಯಕ್ರಮ)ಗೆ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು (ಮಾ.07): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆಯ ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ಫ್ರೀ ನರ್ಸರಿ ತರಗತಿ (ಸಿ.ಬಿ.ಎಸ್.ಸಿ ಪಠ್ಯಕ್ರಮ)ಗೆ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.

ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್, ನಂ. 215ನೇ ಮುಖ್ಯ ರಸ್ತೆ ಕ್ರಾಂತಿಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಂಗಳೂರು-21 ಈ ವಿದ್ಯಾಸಂಸ್ಥೆಯಲ್ಲಿ ಫ್ರೀ ನರ್ಸರಿ ತರಗತಿಗೆ ದಿನಾಂಕ: 11-03-2024 ರಿಂದ 25-03-2024 ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು. ಅರ್ಜಿ  ಸಲ್ಲಿಕೆಯು ಮಾ.26 ರಿಂದ ಆರಂಭವಾಗುತ್ತದೆ. ಏ.10 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಇನ್ನು ಭರ್ತಿ ಮಾಡಿದ ಅರ್ಜಿಯನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರು (ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡದಲ್ಲಿ ಸಲ್ಲಿಸಬೇಕು. ಮೇ 20ರಂದು ಸಲ್ಲಿಕೆಯಾದ ಎಲ್ಲ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯಲಿದೆ.

ಬೆಂಗಳೂರು ನಿವಾಸಿಗಳೇ ನೀರಿಗಾಗಿ ಮಾಸಿಕ 6,000 ರೂ. ಭರಿಸಲು ಸಿದ್ಧರಾಗಿ; ಇಲ್ಲವೆಂದರೆ ನೀರು ಸಿಗೊಲ್ಲ!

ಪಾಲಕರು ಮಕ್ಕಳ ದಾಖಲಾತಿ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:

  • ಮಗುವಿನ ಪಾಸ್ ಪೋರ್ಟ್ ಸೈಜ್ ಫೋಟೋ - 5 ಸಂಖ್ಯೆ
  • ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವ ಚಿತ್ರ)2B Size
  • ಮಗುವಿನ ಜನನ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್ 
  • ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್
  • ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ (ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಲೋ. ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು)
  • ಮಗುವಿನ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. (ಎತ್ತರ, ತೂಕ, ರಕ್ತದ ಗುಂಪು) 

Bengaluru: ಮಹಿಳಾ ದಿನಾಚರಣೆಯಂದು ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ!

ಸೂಚನೆ: ಅರ್ಜಿ ಪರಿಶೀಲನೆಯ ದಿನ(ದಿನಾಂಕ 20-05-2024) ಪೋಷಕರು ಮಗುವಿನ ಜೊತೆಗೆ ದಾಖಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ತರುವುದು ಕಡ್ಡಾಯ.

PREV
Read more Articles on
click me!

Recommended Stories

ಹೊಸನಗರದ ಹುಡುಗನ ಅಸಾಧಾರಣ ಸಾಧನೆ.. ಭಾರತದ ಯುವ EdTech ಉದ್ಯಮಿಯಾಗಿ ಬೆಳೆದ ಕನ್ನಡಿಗ ಸೂರಜ್ ಶೆಟ್ಟಿ!
Alliance One 2026: ಅಲಯನ್ಸ್ ವಿಶ್ವವಿದ್ಯಾಲಯದ ಯುವಜನೋತ್ಸವ ‘ಅಲಯನ್ಸ್ ಒನ್ 2026’ಕ್ಕೆ ಅದ್ಧೂರಿ ತೆರೆ