ಫೆ.12ರಂದು ದೇಶವ್ಯಾಪಿ ಪ್ರತಿಭಟನೆ, ಭಾರತ ಬಂದ್! ಕರ್ನಾಟಕದಲ್ಲಿ ನಾಳೆ ಶಾಲಾ ಕಾಲೇಜುಗಳ ಕಥೆ ಏನು?

Published : Feb 11, 2026, 05:13 PM ISTUpdated : Feb 11, 2026, 05:19 PM IST
bandh

ಸಾರಾಂಶ

ಫೆಬ್ರವರಿ 12, 2026 ರಂದು ಕಾರ್ಮಿಕ ಮತ್ತು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್‌ನಿಂದಾಗಿ ಕರ್ನಾಟಕದಲ್ಲಿ ಶಾಲೆಗಳಿಗೆ ಅಧಿಕೃತ ರಜೆ ಘೋಷಿಸಿಲ್ಲವಾದರೂ, ಸ್ಥಳೀಯ ಪರಿಸ್ಥಿತಿ ಅವಲಂಬಿಸಿ ರಜೆ ನೀಡುವ ಸಾಧ್ಯತೆಯಿದೆ.

ನವದೆಹಲಿ: ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ಪ್ರಸ್ತಾವಿತ ಭಾರತ–ಅಮೆರಿಕ (India–US) ವ್ಯಾಪಾರ ಒಪ್ಪಂದವನ್ನು ವಿರೋಧಿಸಿ, ಫೆಬ್ರವರಿ 12, 2026 ರಂದು ದೇಶಾದ್ಯಂತ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಕೇಂದ್ರ ಕಾರ್ಮಿಕ ಸಂಘಗಳು ಹಾಗೂ ರೈತ ಸಂಘಟನೆಗಳು ಘೋಷಿಸಿವೆ. ಈ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ರಸ್ತೆ ಸಂಚಾರ, ಬ್ಯಾಂಕಿಂಗ್, ಸಾರಿಗೆ, ಶಿಕ್ಷಣ ಸೇರಿದಂತೆ ಅನೇಕ ವಲಯಗಳ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ. ಶಾಲೆಗಳು ಮತ್ತು ಕಾಲೇಜುಗಳು ಇದೆ ಅಥವಾ ಇಲ್ಲವೇ ಎಂಬುದು ಸಂಪೂರ್ಣ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

ಈವರೆಗೆ ಅಧಿಕೃತ ಘೋಷಣೆ ಇಲ್ಲ

ಭಾರತ ಬಂದ್ ಹಿನ್ನೆಲೆ ಶಾಲೆಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ರಜೆ ಘೋಷಿಸಿಲ್ಲ. ಕರ್ನಾಟಕದಲ್ಲಿ ಕೂಡ ಶಾಲೆ ರಜೆ ಬಗ್ಗೆ ಈವರೆಗೆ ಅಧಿಕೃತವಾಗಿ ಘೋಷಿಸಿಲ್ಲ. ಹೀಗಾಗಿ ನಾಳೆ ಶಾಲೆಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆದರೆ, ಸ್ಥಳೀಯ ಪರಿಸ್ಥಿತಿ, ಪ್ರತಿಭಟನೆಗಳ ತೀವ್ರತೆ ಮತ್ತು ಸಾರಿಗೆ ವ್ಯವಸ್ಥೆಯ ಸ್ಥಿತಿಯನ್ನು ಅವಲಂಬಿಸಿ ಕೆಲವು ಜಿಲ್ಲೆ ಅಥವಾ ನಗರಗಳಲ್ಲಿ ಶಾಲೆಗಳು ಮುಚ್ಚುವ ಸಾಧ್ಯತೆ ಬರಲೂ ಬಹುದು. ಪರಿಸ್ಥಿತಿಯನ್ನು ನೋಡಿಕೊಂಡು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಪೋಷಕರು ನಾಳೆ ಮಕ್ಕಳ ಓಡಾಟಕ್ಕೆ ವಾಹನದ ವ್ಯವಸ್ಥೆ ಇದೆಯಾ ಎಂದು ಚೆಕ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ಇಲ್ಲವಾದರೆ ತಮ್ಮದೇ ಸ್ವಂತ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಸೂಕ್ತ.

ಪ್ರಾಣ ಮುಖ್ಯ 

ಸ್ಥಳೀಯವಾಗಿ ಪ್ರತಿಭಟನೆಯಿಂದ ಪರಿಸ್ಥಿತಿಗಳು ಉದ್ವಿಗ್ನವಾಗುತ್ತದೆ ಎಂಬ ಮುನ್ಸೂಚನೆ ಇದ್ದರೆ ಮಕ್ಕಳನ್ನು ಮನೆಯಲ್ಲೇ ಇರುವಂತೆ ನೋಡಿಕೊಳ್ಳುವುದು ಉತ್ತಮ. ಅನೇಕ ಶಾಲೆಗಳು ಮುಂಚಿತವಾಗಿ ವಾಟ್ಸಾಪ್ ಗ್ರೂಪ್ ಅಥವಾ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಭಯದ ಅಗತ್ಯವೂ ಇಲ್ಲ. ಮಾತ್ರವಲ್ಲ ಶಾಲೆಗೆ ಒಂದು ದಿನ ಹೋಗಿಲ್ಲವೆಂದರೆ ಅವರ ಓದಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದಕ್ಕಿಂತ ಪ್ರಾಣ ಮುಖ್ಯ ಎಂಬುದನ್ನು ತಿಳಿದಿರುವುದು ಬಹುಮುಖ್ಯವಾಗಿದೆ.

ಮುಂಜಾಗೃತಾ ಕ್ರಮ ತೆಗೆದುಕೊಳ್ಳಿ

ನಗರಪ್ರದೆಶದಲ್ಲಿ ಜನಜಂಗುಳಿ ಕೂಡ ಜಾಸ್ತಿ ಇರುತ್ತದೆ. ಪ್ರತಿಭಟನೆಗಳು ಆದಾಗ ಕಂಟ್ರೋಲ್ ಮಾಡುವುದು ಕಷ್ಟವಾಗಬಹುದು. ಈ ವೇಳೆ ಗಲಾಟೆಗಳು , ಪರಿಸ್ಥಿತಿಗಳು ಉದ್ವಿಘ್ನವಾಗುವ ಸಮಯದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಲಾಠಿ ಚಾರ್ಜ್ ಮಾಡುವ ಸನ್ನಿವೇಶಗಳು ಬರಬಹುದು ಹೀಗಾಗಿ ಇಂತಹ ಸಂದರ್ಭದಲ್ಲಿ ಶಾಲಾ ಮಕ್ಕಳು ಸಿಕ್ಕಿಹಾಕಿಕೊಂಡರೆ ಅವರಿಗೆ ಕಷ್ಟವಾಗಬಹುದು. ಇದರಿಂದ ಪೋಷಕರು ಮುಂಜಾಗೃತಾ ಕ್ರಮ ತೆಗೆದುಕೊಳ್ಳುವುದು ಬಹು ಮುಖ್ಯವಾಗಿದೆ.

PREV
Read more Articles on
click me!

Recommended Stories

12ನೇ ತರಗತಿ ಮಕ್ಕಳ ಉತ್ತರ ಪತ್ರಿಕೆ ಡಿಜಿಟಲಿ ಮೌಲ್ಯಮಾಪನ ಮಾಡಲಿದೆ ಸಿಬಿಎಸ್ಇ
ಮನೆಯಲ್ಲೇ ಯಾರು ಕೇಳಲ್ಲ, ನೀವು ಯಾರು ಕೇಳೋಕೆ? ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕಿ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ