ಬೆಂಗಳೂರು: ಸೌಂದರ್ಯ ಕಾಲೇಜಿನ ಗ್ರ್ಯಾಜುವೇಷನ್‌ ಡೇ: 400 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

By Manjunath Nayak  |  First Published Sep 3, 2022, 6:32 PM IST

Soundarya Institute: ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಸಿಡೇದಹಳ್ಳಿಯಲ್ಲಿ 12ನೇ ಪದವಿ ಪ್ರಧಾನ ಸಮಾರಂಭ ನಡೆಯಿತು


ಬೆಂಗಳೂರು (ಸೆ. 03): ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ (Soundarya Institute of Management and Science) ಸಿಡೇದಹಳ್ಳಿಯಲ್ಲಿ 12ನೇ ಪದವಿ ಪ್ರದಾನ ಸಮಾರಂಭ (Graduation Day) ನಡೆಯಿತು. ಈ ವರ್ಷ 400 ವಿದ್ಯಾರ್ಥಿಗಳು  ಪದವಿಯಲ್ಲಿ ಉತ್ತಿರ್ಣರಾಗಿದ್ದು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೆಹಲಿ ವಿಧಾನಸಭಾ ಸದಸ್ಯೆ ಶ್ರೀಮತಿ ಅತಿಶಿ ಸಿಂಗ್ ಹಾಗೂ ದೆಹಲಿಯ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯದ ಉಪಕುಲಪತಿ ನಿಹಾರಿಕ ವೋಹ್ರ ಭಾಗಿಯಾಗಿದ್ದರು. 

ಸೌಂದರ್ಯ ಶಿಕ್ಷಣ ಸಂಸ್ಥಾಪಕ ಅಧ್ಯಕ್ಷರಾದ ಸೌಂದರ್ಯ ಪಿ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಸುನೀತಾ ಪಿ ಮಂಜಪ್ಪ, ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ್ ಕುಮಾರ್, ಸಂಸ್ಥೆಯ ನಿರ್ದೇಶಕಿ ಪ್ರತೀಕ್ಷಾ, ಪ್ರಾಂಶುಪಾಲರಾದ ಡಾ. ಸುರೇಶ ಸಿ ಹೆಗಡಿ ಹಾಗೂ ಪ್ಲೇಸ್ಮೆಂಟ್ ಮುಖ್ಯಸ್ಥರಾದ ರಮ್ಯಾ ಶೇಷಾದ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಹಾಗೂ ವಿವಿಧ ವಿಭಾಗಗಳಲ್ಲಿ ರಾಂಕ್ ಪಡೆದಂತಹ ವಿದ್ಯಾರ್ಥಿಗಳಿಗೆ ಸತ್ಕರಿಸಿ ಅಭಿನಂದಿಸಲಾಯಿತು.

Tap to resize

Latest Videos

ರಾಜ್ಯದ ಉತ್ತಮ ಶಿಕ್ಷಕ-ಶಿಕ್ಷಕಿಯರ ಪಟ್ಟಿ  ಬಿಡುಗಡೆ

click me!