ಬೆಂಗಳೂರು ಉತ್ತರ ವಿವಿ ಪರೀಕ್ಷೆ ರದ್ದಿಲ್ಲ: ಧಾರವಾಡ ವಿವಿ ಪರೀಕ್ಷೆ ಮುಂದೂಡಿಕೆ, SSLC ಕಥೆ?

Published : Sep 26, 2021, 10:25 PM IST
ಬೆಂಗಳೂರು ಉತ್ತರ ವಿವಿ ಪರೀಕ್ಷೆ ರದ್ದಿಲ್ಲ: ಧಾರವಾಡ ವಿವಿ ಪರೀಕ್ಷೆ ಮುಂದೂಡಿಕೆ, SSLC ಕಥೆ?

ಸಾರಾಂಶ

* ಸೆಪ್ಟೆಂಬರ್ 27ರಂದು ಭಾರತ್ ಬಂದ್  * ಆದ್ರೂ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ * ಬೆಂಗಳೂರು ಉತ್ತರ ವಿವಿ ಪರೀಕ್ಷೆಗಳು ನಡೆಯಲಿವೆ

ಬೆಂಗಳೂರು, (ಸೆ.26): ಭಾರತ್ ಬಂದ್ (Bharat Bandh) ಇದ್ದರೂ ಸಹ ನಾಳೆ (ಸೆ. 27) ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಪರೀಕ್ಷೆಗಳು ನಿಗದಿಯಾದಂತೆಯೇ ನಡೆಯಲಿವೆ. 

ಈ ಬಗ್ಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನಾರ್ಧನ್ ಸುವರ್ಣ ನ್ಯೂಸ್‌ ಜತೆ ಮಾತನಾಡಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಭಾರತ್‌ ಬಂದ್‌ಗೆ ಬೆಂಬಲ ಬಹುತೇಕ ಅನುಮಾನ

ಪದವಿ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಉತ್ತರ ವಿಶ್ವವಿದ್ಯಾಲಯದ ಒಟ್ಟು 66 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಗೈರಾದರೆ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿಲ್ಲ. ನಾಳೆಯ ಪರೀಕ್ಷೆಯಿಂದ ಯಾವುದೇ ವಿನಾಯಿತಿ ಇಲ್ಲ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಜನಾರ್ದನ್‌ ಮಾಹಿತಿ ನೀಡಿದ್ದಾರೆ.

ನಿಗದಿಯಂತೆ SSLC ಪೂರಕ ಪರೀಕ್ಷೆ
ಇನ್ನು ಭಾರತ್ ಬಂದ್ ನಡುವೆಯೇ  SSLC ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. 

ನಿಗದಿಯಂತೆ ನಾಳೆ (ಸೆ.26) SSLC ಪೂರಕ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾಹಿತಿ ಲಭ್ಯವಾಗಿದೆ.

ಧಾರವಾಡ ವಿವಿ ಪರೀಕ್ಷೆಗಳು ಮುಂದೂಡಿಕೆ
ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ (ಸೆ.27) ಭಾರತ್ ಬಂದ್ ಘೋಷಿಸಿರುವ ಬೆನ್ನಲ್ಲೇ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಲಾಗಿದೆ.  ಪರೀಕ್ಷೆಗಳನ್ನ ಮುಂದೂಡಿ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ನಾಗರಾಜ್ ಆದೇಶಿದ್ದಾರೆ.

ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ (ಸೆ.27) ಭಾರತ್ ಬಂದ್‌ಗೆ ಕರೆ ನೀಡಿವೆ. ಕರ್ನಾಟಕದಲ್ಲೂ ಇದಕ್ಕೆ ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. 

PREV
click me!

Recommended Stories

ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!
ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!