CBSE Result 2022: ಬೆಂಗ್ಳೂರು ದೇಶಕ್ಕೇ ನಂ. 2..!

By Kannadaprabha News  |  First Published Jul 23, 2022, 4:00 AM IST

ಬೆಂಗಳೂರು ವಲಯದ(ರೀಜನ್‌) ಶಾಲೆಗಳು ಎರಡೂ ಫಲಿತಾಂಶದಲ್ಲಿ ರಾಷ್ಟ್ರಕ್ಕೆ 2ನೇ ಟಾಪರ್‌ ಆಗಿ ಹೊರಹೊಮ್ಮಿದೆ.


ಬೆಂಗಳೂರು(ಜು.23):  ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಶನ್‌ನ (ಸಿಬಿಎಸ್‌ಇ) 10 ಮತ್ತು 12ನೇ ತರಗತಿ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಬೆಂಗಳೂರು ವಲಯದ(ರೀಜನ್‌) ಶಾಲೆಗಳು ಎರಡೂ ಫಲಿತಾಂಶದಲ್ಲಿ ರಾಷ್ಟ್ರಕ್ಕೆ 2ನೇ ಟಾಪರ್‌ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ವಿವಿಧ ಶಾಲೆಗಳ ಮಕ್ಕಳು ಅತ್ಯುತ್ತಮ ಫಲಿತಾಂಶದ ಮೂಲಕ ಸಾಧನೆ ಮೆರೆದಿದ್ದಾರೆ. ವಿವಿಧ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಈ ವರ್ಷ 10ನೇ ತರಗತಿಯಲ್ಲಿ ಒಟ್ಟಾರೆ ಶೇ.92.71ರಷ್ಟುಮತ್ತು 12ನೇ ತರಗತಿಯಲ್ಲಿ ಶೇ.94.40ರಷ್ಟು ಫಲಿತಾಂಶ ಬಂದಿದೆ.

ಪ್ರಾದೇಶಿಕವಾರು ಬೆಂಗಳೂರು ಪ್ರದೇಶದ ಶಾಲೆಗಳಿಂದ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ.99.22 ರಷ್ಟು ಮತ್ತು 12ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ.98.16 ರಷ್ಟುಮಂದಿ ಉತ್ತೀರ್ಣರಾಗುವುದರೊಂದಿಗೆ ಉತ್ತಮ ಸಾಧನೆ ತೋರಿದ್ದಾರೆ. 10ನೇ ತರಗತಿಯಲ್ಲಿ ಶೇ.99.68ರಷ್ಟುಹಾಗೂ 12ನೇ ತರಗತಿಯಲ್ಲಿ ಶೇ.98.83ರಷ್ಟುಫಲಿತಾಂಶ ಪಡೆಯುವ ಮೂಲಕ ತಿರುವನಂತಪುರ ಪ್ರದೇಶದ ಶಾಲೆಗಳು ಅಗ್ರಸ್ಥಾನ ಪಡೆದಿವೆ.

Tap to resize

Latest Videos

CBSE Result 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ

12ನೇ ತರಗತಿ ಫಲಿತಾಂಶದಲ್ಲಿ ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಶೇ.94.54 ರಷ್ಟುಮಂದಿ ಪಾಸಾಗಿದ್ದರೆ, ಬಾಲಕರು ಶೇ.91.25 ರಷ್ಟುಮಂದಿ ಪಾಸಾಗಿದ್ದಾರೆ. ಇದೇ ರೀತಿ 10ನೇ ತರಗತಿಯಲ್ಲಿ ಬಾಲಕಿಯರು ಶೇ.95.21ರಷ್ಟು ಮತ್ತು ಬಾಲಕರು ಶೇ.93.80 ಸಂಖ್ಯೆಯಲ್ಲಿ ಪಾಸ್‌ ಆಗಿದ್ದಾರೆ.

12ನೇ ತರಗತಿಯಲ್ಲಿ ಟಾಪ​ರ್ಸ್‌

12ನೇ ತರಗತಿ ಫಲಿತಾಂಶದ ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ತೊಬರಹಳ್ಳಿಯ ನಾರಾಯಣ ಇ-ಟೆಕ್ನೋ ಶಾಲೆಯ ವ್ಯಾಸರಾಮ ಸುಬ್ರಮಣಿಯನ್‌, ಕೋರಮಂಗಲ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ನಿಖಿತ ಕಿರಣ್‌ ಮತ್ತು ವಾಣಿಜ್ಯ ವಿಭಾಗದಲ್ಲಿ ಇಂದಿರಾನಗರದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ(ಎನ್‌ಪಿಎಸ್‌) ನಿಖಿಲ್‌ ಕಮ್ರಾ, ಎಚ್‌ಎಸ್‌ಆರ್‌ ಲೇಔಟ್‌ನ ಸಿಎಂಆರ್‌ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ತನ್ಯಾ ಸುಧೀರ್‌ 500ಕ್ಕೆ 498 ಅಂಕ (ಶೇ.99.6) ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್‌ಗಳಾಗಿದ್ದಾರೆ. ಅಲ್ಲದೆ, ನಾರಾಯಣ ಇ ಟೆಕ್ನೋದ ನಿಷಿತಾ 497 ಅಂಕ, ಮೋಕ್ಷಿತ 495 ಅಂಕ, ಅದಿತಿ 494, ಕೈಪ ವೆಂಕಟ ತುಹಿಲ್‌ 494 ಅಂಕಗಳೊಂದಿಗೆ ಉತ್ತಮ ಫಲಿತಾಂಶ ಪಡೆದಿದ್ದಾರೆ.

CBSE Fake Notice ಟರ್ಮ್ 2 ಪರೀಕ್ಷೆ ನಿಯಮಗಳ ಕುರಿತ ನಕಲಿ ಪೋಸ್ಟ್ ವೈರಲ್!

10ನೇ ತರಗತಿ ಟಾಪರ್ಸ್‌

10 ನೇ ತರಗತಿಯಲ್ಲಿ ಯಲಹಂಕದ ಚೈತನ್ಯ ಟೆಕ್ನೋ ಶಾಲೆಯ ಭಾಗ್ಯಶ್ರೀ ನಾಯ್ಡು, ವೈಷ್ಣವಿ ಪಾಟೀಲ್‌, ಇಂದಿರಾನಗರದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ರಂಜನಿ ಅಯ್ಯರ್‌, ಜೆ.ಪಿ.ನಗರದ ಚೈತನ್ಯ ಟೆಕ್ನೋ ಶಾಲೆಯ ಶ್ರೇಯಾ ಅರುಣ್‌ ಕುಮಾರ್‌ ಕುಮಟಳ್ಳಿ ಅವರು 498 ಅಂಕಗಳನ್ನು (ಶೇ.99.6) ಪಡೆದು ರಾಜ್ಯಕ್ಕೆ ಟಾಪರ್‌ಗಳಾಗಿದ್ದಾರೆ. ದೆಹಲಿ ಪಬ್ಲಿಕ್‌ ಸ್ಕೂಲ್‌ ಈಸ್ಟ್‌(ಡಿಪಿಎಸ್‌) ವೆನ್ಯಾ ವೇಲ್ಮುರುಗನ್‌ 496 (ಶೇ.99.2) ರಷ್ಟು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ನಾನು ಪರೀಕ್ಷೆ ಬಗ್ಗೆ ಯಾವುದೇ ಆತಂಕ, ಗಾಬರಿ ಮಾಡಿಕೊಳ್ಳದೆ ಪ್ರತಿ ದಿನ ಸಮಾಧಾನವಾಗಿ ಅಂದಿನ ಪಾಠಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ಇದನ್ನೇ ನನ್ನ ಜೂನಿಯರ್‌ಗಳಿಗೂ ಹೇಳಬಯಸುತ್ತೇನೆ. ಆತಂಕ, ಗಾಬರಿಗೊಂಡರೆ ಪರೀಕ್ಷೆಗೆ ಸರಿಯಾಗಿ ಸಿದ್ಧಗೊಳ್ಳಲಾಗುವುದಿಲ್ಲ. ಎಲ್ಲ ಗೊತ್ತಿದ್ದರೂ ಪರೀಕ್ಷೆಯನ್ನು ಸರಿಯಾಗಿ ಬರೆಯಲಾಗಲ್ಲ. ಉತ್ತಮ ಫಲಿತಾಂಶ ಪಡೆಯಲು ನಮ್ಮ ಶಾಲೆಯ ಶಿಕ್ಷಕರು ನೀಡಿದ ಸರಳ ತಂತ್ರಗಳನ್ನು ಅನುಸರಿಸಿದೆ. ಪೋಷಕರು ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶದಿಂದ ಈ ಸಾಧನೆ ಸಾಧ್ಯವಾಯಿತು ಅಂತ 12ನೇ ತರಗತಿ ಟಾಪರ್‌ ವ್ಯಾಸರಾಮ ಸುಬ್ರಮಣಿಯನ್‌ ತಿಳಿಸಿದ್ದಾರೆ. 
 

click me!