Mysuru: ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ: ಸಚಿವ ಡಾ. ರಾಜ್‌ಕುಮಾರ್‌ ರಂಜನ್‌ ಸಿಂಗ್‌ ಸಲಹೆ

By Govindaraj S  |  First Published May 1, 2022, 10:50 PM IST

ವಿಜ್ಞಾನ, ತಂತ್ರಜ್ಞಾನ ಅಥವಾ ಮಾನವಿಕ ಒಳಗೊಂಡಂತೆ ಯಾವುದೇ ಕ್ಷೇತ್ರದಲ್ಲಿ ನೀವು ಸಾಧನೆ ಮಾಡುವಾಗ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ ಎಂದು ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ. ರಾಜ್‌ಕುಮಾರ್‌ ರಂಜನ್‌ ಸಿಂಗ್‌ ಅವರು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.


ಮೈಸೂರು (ಮೇ.01): ವಿಜ್ಞಾನ, ತಂತ್ರಜ್ಞಾನ ಅಥವಾ ಮಾನವಿಕ ಒಳಗೊಂಡಂತೆ ಯಾವುದೇ ಕ್ಷೇತ್ರದಲ್ಲಿ ನೀವು ಸಾಧನೆ ಮಾಡುವಾಗ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ ಎಂದು ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಡಾ. ರಾಜ್‌ಕುಮಾರ್‌ ರಂಜನ್‌ ಸಿಂಗ್‌ (Rajkumar Ranjan Singh) ಅವರು ವಿದ್ಯಾರ್ಥಿನಿಯರಿಗೆ (Students) ಸಲಹೆ ನೀಡಿದರು. ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್‌ ಮಹಿಳಾ ಕಾಲೇಜಿನ (ಸ್ವಾಯತ್ತ) 13ನೇ ಪದವೀಧರರ ದಿನಾಚರಣೆಯಲ್ಲಿ ಶನಿವಾರ ವಿದ್ಯಾರ್ಥಿನಿಯರಿಗೆ ಪದಕ ಮತ್ತು ಬಹುಮಾನ ವಿತರಿಸಿ ಮಾತನಾಡಿದ ಅವರು, ನಿಮ್ಮೊಳಗಿರುವ ವಿಶೇಷ ಶಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಡಿ. 

ಇದರಿಂದ ಜೀವನದಲ್ಲಿ ಎದುರಾಗುವ ಯಾವುದೇ ಸವಾಲನ್ನು ಕೂಡಾ ಎದುರಿಸಲು ಸಾಧ್ಯ ಎಂದರು. ಈ ನೆಲದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿನವರಿಗೆ ಕಾಪಾಡಿಕೊಳ್ಳುವ ಜವಾಬ್ದಾರಿ ಯುವ ಜನರ ಮೇಲಿದೆ. ಪರಂಪರೆಯನ್ನು ಮುಂದಿನ ತಲೆಮಾರಿನವರಿಗೆ ಹಸ್ತಾಂತರಿಸುವುದೇ ನೀವು ಮಾತೃಭೂಮಿ ಮತ್ತು ಮಾನವಕುಲಕ್ಕೆ ಮಾಡುವ ಅತಿದೊಡ್ಡ ಸೇವೆ. ಈ ನೆಲದ ಮೌಲ್ಯಗಳನ್ನು ಎತ್ತಿ ಹಿಡಿಯುವುದರಲ್ಲಿ ಯಾವುದೇ ಹಿಂಜರಿಕೆ ಬೇಡ ಎಂದು ಅವರು ತಿಳಿಸಿದರು. ಭಾರತದ ಸಂಸ್ಕೃತಿ ಮಹಿಳೆಯರನ್ನು ಗೌರವಿಸುತ್ತದೆ. ಹಾಗೂ ಅವರಿಗೆ ಪೂಜನೀಯ ಸ್ಥಾನ ನೀಡಿದೆ. ಭಾರತದ ಸಂಸ್ಕೃತಿಗೆ ಕೆಡುಕನ್ನು ಉಂಟುಮಾಡುವ ಯಾವುದೇ ಕೆಲಸ ಮಾಡಬೇಡಿ. ನಿಮ್ಮ ಜೀವನ ಉಜ್ವಲವಾಗಲಿ. 

Tap to resize

Latest Videos

Language War: ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ: ನಿರಾಣಿ

ಒಳ್ಳೆಯವರಾಗಿ, ಒಳ್ಳೆಯದನ್ನು ಮಾಡಿ, ಆ ಮೂಲಕ ದೇಶವನ್ನು ಹೆಮ್ಮಪಡಿಸಿ ಎಂದು ಅವರು ಕಿವಿಮಾತು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಂಪಾಲದ ಮಾಡ್ರನ್‌ ಕಾಲೇಜಿನ ಭೂಗೋಳಶಾಸ್ತ್ರ ಪ್ರಾಧ್ಯಾಪಕಿ ದೇಬಲದೇವಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಲ್. ನಾಗೇಂದ್ರ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ. ಸುರೇಶ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ. ಸ್ವಾಮಿ, ಶೈಕ್ಷಣಿಕ ಡೀನ್‌ ಡಾ.ಎಚ್‌.ಬಿ. ಸುರೇಶ್‌ ಇದ್ದರು.

670 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಪದವಿ ವಿಭಾಗದ 557 ಮತ್ತು ಸ್ನಾತಕೋತ್ತರ ವಿಭಾಗದ 113 ಮಂದಿ ಸೇರಿದಂತೆ ಒಟ್ಟು 670 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ವಿಭಾಗದಲ್ಲಿ ಬಿ.ಎನಲ್ಲಿ ಆರ್‌. ಕುಸುಮಿತಾ, ಎನ್‌.ಪ್ರೇಮ, ಎಸ್‌. ಸ್ಟೆಫ್ಪಿ ರುತ್‌, ಬಿ.ಎಸ್ಸಿಯಲ್ಲಿ ಎಸ್‌.ಸಹನ, ಜೆ.ಎಂ. ಅಂಕಿತಾ, ಬಿ.ಎಂ. ಹರ್ಷಿತಾ, ಬಿ.ಕಾಂನಲ್ಲಿ ಕೆ.ಆರ್‌.ಐಶ್ವರ್ಯ, ಎಚ್‌.ಎಲ್‌.ಅರುಂಧತಿ, ಎಲ್‌. ದುರ್ಗಾಶ್ರೀ, ಬಿಬಿಎನಲ್ಲಿ ಮೇಘನಾ ಎಸ್‌. ನಾಯಕ್‌, ಪಿ.ಮೌನ, ಕೆ.ಎಂ. ಪೊನ್ನಮ್ಮ, ಬಿಸಿಎನಲ್ಲಿ ಎನ್‌. ದೀಪಿಕಾ, ಐ. ಖುಷ್ಬೂ, ಕೆ.ಎನ್‌. ವಿನುತ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ರಾರ‍ಯಂಕ್‌ ಪಡೆದರು.

ಮೈಸೂರು: ಮುಸ್ಲಿಮರಿಂದ ಹಿಂದೂ ಮಹಿಳೆ ಅಂತ್ಯ ಸಂಸ್ಕಾರ: ಧರ್ಮ ದಂಗಲ್‌ ನಡುವೆ ಸೌಹಾರ್ದತೆ ಸಂದೇಶ

ಹಾಗೆಯೇ, ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ ಅರ್ಥಶಾಸ್ತ್ರದಲ್ಲಿ ಬಿ.ಎಂ. ನೀಲಮ್ಮ, ಕೆ.ಕೆ. ಸಹನ, ಎಂ.ಕಾಂನಲ್ಲಿ ಕೆ.ಎ. ಅನುಷ, ಎಸ್‌. ಸಂಗೀತ, ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಎಸ್‌. ಮಮತಾ, ಶ್ರೀಲಕ್ಷ್ಮಿ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರಾರ‍ಯಂಕ್‌ ಪಡೆದರು. (ಎಂ.ಎ ಅರ್ಥಶಾಸ್ತ್ರ), ಕೆ.ಎ.ಅನುಷಾ (ಎಂ.ಕಾಂ), ಎಸ್‌.ಮಮತಾ (ಎಂಎಸ್ಸಿ ರಸಾನವಿಜ್ಞಾನ) ಅವರಿಗೆ ಬಹುಮಾನ ವಿತರಿಸಲಾಯಿತು. ಇವರಿಗೆ ಡಾ. ರಾಜ್‌ಕುಮಾರ್‌ ರಂಜನ್‌ ಸಿಂಗ್‌ ಅವರ ಪತ್ನಿ, ಇಂಪಾಲದ ಮಾಡ್ರನ್‌ ಕಾಲೇಜಿನ ಭೂಗೋಳಶಾಸ್ತ್ರ ಪ್ರಾಧ್ಯಾಪಕಿ ದೇಬಲದೇವಿ ಅವರು ಪದವಿ ಪ್ರದಾನ ಮಾಡಿದರು.

click me!