
ರಾಯಚೂರು(ಅ.20): ತಾಲೂಕಿನ ಲಿಂಗನಖಾನದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸಿದರು. ಈ ವೇಳೆ 2 ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡ ಬಾರದ ಕಾರಣಕ್ಕೆ, ಅವುಗಳನ್ನು ಕಲಿಸಿಕೊಡದ ಶಿಕ್ಷಕರಿಗೆ ಎಸಿ ತರಾಟೆಗೆ ತೆಗೆದುಕೊಂಡರು.
ಸಹಾಯಕ ಆಯುಕ್ತರು ತರಗತಿಯಲ್ಲಿ ಮಕ್ಕಳಿಗೆ ಕೆಲ ವರ್ಣಮಾಲೆ ಪ್ರಶ್ನೆಗಳನ್ನು ಕೇಳಿದರು. ಆದರೆ, ಮಕ್ಕಳು ಉತ್ತರಿಸಲು ತಡಬಡಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಇನ್ನೂ ಓದಲು, ಬರೆಯಲು ಬರುತ್ತಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾಭಾಸ ಮಾಡಿಸದೆ ಏನು ಮಾಡುತ್ತಿದ್ದೀರಿ? ಮುಖ್ಯೋಪಾಧ್ಯಾಯರು ಯಾರು? ಎಂದು ಶಿಕ್ಷಕರಿಗೆ ಕ್ಲಾಸ್ ತೆಗೆದುಕೊಂಡರು. ಎರಡು ದಿನದಲ್ಲಿ ಮಕ್ಕಳಿಗೆ ಒದಲು, ಬರೆಯಲು ಬರಬೇಕು ಇಲ್ಲದಿದ್ದರೇ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಉನ್ನತ ಶಿಕ್ಷಣ ಪ್ರವೇಶಕ್ಕೆ ಸರ್ಕಾರದಿಂದ ಫ್ರೀ ಟ್ರೈನಿಂಗ್
ಸರ್ಕಾರಿ ಶಾಲೆಗಳಲ್ಲಿ ಇದೀಗ ಸರ್ಕಾರಿ ಪಬ್ಲಿಕ್ ಶಾಲೆ ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದೆ. ಕನ್ನಡ ಶಾಲೆಗಳಿಗೂ ಇಂಗ್ಲೀಷ್ ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ, ಮಕ್ಕಳಿಗೆ ಇಂಗ್ಲೀಷ್ ಕಲಿಸುವಲ್ಲಿ ಶಿಕ್ಷಕರು ಕೆಲವೊಂದು ಕಡೆ ಅಸೆಡ್ಡೆತನ ತೋರಲಾಗುತ್ತಿದೆ. ನಾನು ಟೀಚರ್ ಆಗಿ ಬಂದರೇ, ಎರಡು ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದರು. ಮಕ್ಕಳಿಗೆ ಕಾಳಜಿಯಿಂದ ಶಿಕ್ಷಣ ಕಲಿಸಬೇಕು. ಶಾಲಾ ಪರಿಸರ ಉತ್ತಮವಾಗಿದೆ.
ಒಳ್ಳೆಯ ಬಿಲ್ಡಿಂಗ್ ಸೇರಿ ಎಲ್ಲಾ ಅಗತ್ಯ ಸೌಲಭ್ಯವಿದ್ದರೂ, ಸರಿಯಾಗಿ ಶಿಕ್ಷಣ ನೀಡಲು ಏನು ತೊಂದರೆ ನಿಮಗೆ?. ಯಾವಾಗಲೂ ಸಮಸ್ಯೆ ಹುಡುಕಬಾರದು, ಪರಿಹಾರ ಕಂಡುಕೊಳ್ಳಬೇಕು. ಮಕ್ಕಳಿಗೆ ಎಬಿಸಿಡಿ ಬಾರದಿದ್ದರೂ, ಆರಾಮವಾಗಿ ಇದ್ದೀರಿ. ಹೀಗಾದರೆ ಮಕ್ಕಳ ಭವಿಷ್ಯ ಏನಾಗಬೇಕು. ಈ ಮಕ್ಕಳಿಗೆ ಒಂದು ವಾರದಲ್ಲಿ ಓದಲು, ಬರೆಯಲು ಬರಬೇಕು. ಇಲ್ಲದಿದ್ದರೇ ಕಠಿಣ ಕ್ರಮ ಕೈಗೊಳ್ಳುವುದೆಂದು ಎಚ್ಚರಿಸಿದರು.