ನಾಲ್ವರು ವಿದ್ಯಾರ್ಥಿಗಳಿಗೆ ಥಳಿತ; ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹ

By Kannadaprabha News  |  First Published Dec 3, 2022, 10:11 AM IST

ಪಟ್ಟಣದ ಮಾರ್ಥೋಮಾ ಶಾಲೆಯ ಶಿಕ್ಷಕರು ನಾಲ್ವರು ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಅಮಾನವೀಯವಾಗಿ ವರ್ತಿಸುವುದರ ಜತೆಗೆ ಉಡಾಫೆ ಉತ್ತರ ನೀಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಒಕ್ಕೊರಲ ಆಗ್ರಹ ವ್ಯಕ್ತವಾಗಿದೆ.


ಹೊನ್ನಾವರ (ಡಿ.3) : ಪಟ್ಟಣದ ಮಾರ್ಥೋಮಾ ಶಾಲೆಯ ಶಿಕ್ಷಕರು ನಾಲ್ವರು ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಅಮಾನವೀಯವಾಗಿ ವರ್ತಿಸುವುದರ ಜತೆಗೆ ಉಡಾಫೆ ಉತ್ತರ ನೀಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಒಕ್ಕೊರಲ ಆಗ್ರಹ ವ್ಯಕ್ತವಾಗಿದೆ.

ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ನಾಲ್ವರು ಶಿಕ್ಷಕರು ಬುಧವಾರ ಬಾಸುಂಡೆ ಬರುವಂತೆ ಅಮಾನುಷವಾಗಿ ಥಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪಾಲಕರು ಪಟ್ಟಣದ ಪ್ರಮುಖರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಕುರಿತು ಶುಕ್ರವಾರ ಶಾಲೆಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪಾಲಕರು ಹಾಗೂ ಸಾರ್ವಜನಿಕರ ಸಭೆಯು ನಡೆದಿದೆ. ಕ್ಷುಲ್ಲಕ ವಿಷಯಕ್ಕೆ ಶಿಕ್ಷಕರ ಈ ವರ್ತನೆ ಖಂಡಿಸಿದ ಪಾಲಕರು, ಶಿಸ್ತು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಏನಾದರೂ ಅನಾಹುತ ಮಾಡಿಕೊಂಡರೆ ಹೊಣೆ ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

Chikkamagaluru: ಕ್ಯಾಬ್ ಚಾಲಕನಿಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಕಂಬಕ್ಕೆ ಕಟ್ಟಿ ಥಳಿತ

ಸಭೆ ಮುಂದೂಡಿಕೆ:

ಸಂಸ್ಥೆಯ ಮುಖ್ಯಸ್ಥರು ರಜೆಯ ಮೇಲೆ ತೆರಳಿರುವುದರಿಂದ ಡಿ.9ರ ನಂತರ ಪಾಲಕರು ಹಾಗೂ ಸಾರ್ವಜನಿಕರು ಮತ್ತು ಅಧಿಕಾರಿಗಳು ಸಭೆ ನಡೆಸಿ ತೀರ್ಮಾನಿಸುವ ಕುರಿತು ನಿರ್ಧರಿಸಲಾಯಿತು. ಸಭೆಯಲ್ಲಿ ಸಂಸ್ಥೆಯ ಮ್ಯಾನೇಜರ್‌ ರಿಂಟೂ ಚಾಕೊ, ಹಲ್ಲೆ ಮಾಡಿರುವ ನಾಲ್ವರು ಶಿಕ್ಷಕರನ್ನು ಕಾರಣ ಕೇಳಿ ಅಮಾನತು ಮಾಡಿರುವುದಾಗಿ ಆದೇಶ ಪ್ರತಿ ನೀಡಿದರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಮಿಸಿದ ಬಳಿಕ ಸಭೆ ನಡೆಸುವ ತೀರ್ಮಾನಕ್ಕೆ ಪಾಲಕರು ಒಪ್ಪಿಗೆ ಸೂಚಿಸಿದ್ದಾರೆ.

ತುಮಕೂರು: ಕುಡಿದ ಮತ್ತಿನಲ್ಲಿ ಮಕ್ಕಳ ಮೇಲೆ ಶಾಲಾ ಮಾಲೀಕನ ಮಗನಿಂದ ಥಳಿತ, ಮೂವರ ಮೂಳೆ ಮುರಿತ

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್‌. ನಾಯ್ಕ, ಪಿಎಸೈ ಮಹಾಂತೇಶ ನಾಯಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ವಕೀಲರಾದ ಉದಯ ನಾಯ್ಕ, ರವಿ ನಾಯ್ಕ, ದಯಾನಂದ ನಾಯ್ಕ, ಶ್ರೀಕಾಂತ ಭಂಡಾರಿ, ರಾಜೇಶ ಸಾಲೆಹಿತ್ತಲ…, ವಿಜಯ್‌ ಕಾಮತ್‌, ಉಮೇಶ ಸಾರಂಗ ಮತ್ತಿತರಿದ್ದರು.

click me!