ಪಿಯುಸಿಯಲ್ಲಿ ಶೇ.99 ಅಂಕ ಪಡೆದ ಅನನ್ಯರಿಗೆ ಸಿಎ ಕಲಿಯುವಾಸೆ!

By Suvarna News  |  First Published Apr 12, 2024, 4:58 PM IST

ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ನಾಗೇಶ್ ಬಿ ಮತ್ತು ಕವಿತಾ ನಾಗೇಶ್ ಅವರ ಪುತ್ರಿ ಕು. ಅನನ್ಯ ನಾಗೇಶ್ ಅವರು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.99 (600/593) ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುತ್ತಾರೆ. 
 


ಬೆಂಗಳೂರು (ಏ.12): ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ನಾಗೇಶ್ ಬಿ ಮತ್ತು ಕವಿತಾ ನಾಗೇಶ್ ಅವರ ಪುತ್ರಿ ಕು. ಅನನ್ಯ ನಾಗೇಶ್ ಅವರು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.99 (600/593) ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುತ್ತಾರೆ. ಇವರು ಯಲಹಂಕದ ನಾಗಾರ್ಜುನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು ಕರ್ನಾಟಕ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 5ನೇ ಶ್ರೇಯಾಂಕ ಪಡೆದಿರುತ್ತಾರೆ. ಕನ್ನಡದಲ್ಲಿ 100ಕ್ಕೆ 100 ಅಂಕ, ಇಂಗ್ಲಿಷ್ ಭಾಷೆಯಲ್ಲಿ 96 ಅಂಕ, ಬಿಸಿನೆಸ್ ಸ್ಟಡೀಸ್- 99, ಅಕೌಂಟೆನ್ಸಿಯಲ್ಲಿ 99, ಸ್ಟಾಟಿಸ್ಟಿಕ್ಸ್- 99, ಬೇಸಿಕ್ ಮ್ಯಾಥ್ಸ್- 100ಕ್ಕೆ 100 ಅಂಕ ಗಳಿಸಿದ್ದಾರೆ. ಮುಂದೆ ಸಿ.ಎ. ಅಧ್ಯಯನ ಮಾಡುವುದಾಗಿ ಅವರು ಹೇಳುತ್ತಾರೆ.

ಅಡುಗೆ ಕೆಲಸದವಳ ಪುತ್ರ 9ನೇ ರ್‍ಯಾಂಕ್: ಮನಸ್ಸೊಂದಿದ್ದರೆ ಮಾರ್ಗ ಉಂಟು. ಈ ಮಾತಿಗೆ ಉದಾಹರಣೆಯಂತೆ ಅಪ್ಪನಿಲ್ಲದ, ಅವರಿವರ ಮನೆಯಲ್ಲಿ ಅಡುಗೆ ಮಾಡಿ ಜೀವನ ಸಾಗಿಸುತ್ತಿರುವ ಮಹಿಳೆ ಮಗ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ 9ನೇ ರ್‍ಯಾಂಕ್ ಗಳಿಸಿದ್ದಾನೆ. ಬುದ್ನಿ ಪಿಡಿ ನಿವಾಸಿ ನಂದನ್ ಮಲ್ಲಾಪುರ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 590 ಅಂಕ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಈತನಿಗೆ ಅಪ್ಪ ಇಲ್ಲ, ತಾಯಿ ನಾಗವೇಣಿ ಮಲ್ಲಾಪುರ. ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಇವನ ಪ್ರತಿಭೆ ಹಾಗೂ ಬಡತನ ಕಂಡು ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯು ಎಲ್‌ಕೆಜಿಯಿಂದ 10 ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಿತ್ತು. 

Tap to resize

Latest Videos

undefined

ಲೋಕಸಭಾ ಚುನಾವಣೆಯಲ್ಲಿ ಜನರ ಒಂದೊಂದು ಮತದಿಂದ ದೇಶದ ರಕ್ಷಣೆ: ಡಾ.ಕೆ.ಸುಧಾಕರ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈತ ರಾಜ್ಯಕ್ಕೆ 4ನೇ ರ್‍ಯಾಂಕ್ಡೆ ಪಡೆದು ಸಂಸ್ಥೆಯ ನಂಬಿಕೆ ಉಳಿಸಿಕೊಂಡಿದ್ದ. ನಂದನ್‌ನ್ನು ಜಮಖಂಡಿಯ ತುಂಗಳ ಸೈನ್ಸ್ ಪಿಯು ಕಾಲೇಜು ಸಹ ದತ್ತು ಪಡೆದು ಉಚಿತ ಶಿಕ್ಷಣ, ವಸತಿ, ಊಟ ನೀಡಿದ್ದನ್ನು ಸಾರ್ಥಕ ಮಾಡಿದ್ದಾನೆ. ಇದೀಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ನೇ ರ್‍ಯಾಂಕ್ ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆಗೆ, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಕಾಲೇಜು ಮತ್ತು ಹೆತ್ತವರ ಕೀರ್ತಿ ತಂದಿದ್ದಾನೆ. ಗಣಿತ, ಜೀವಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ತಲಾ 100 ಅಂಕ, ಭೌತಶಾಸ್ತ್ರ ಮತ್ತು ಹಿಂದಿಯಲ್ಲಿ ತಲಾ 98, ಇಂಗ್ಲಿಷ್‌ನಲ್ಲಿ 94 ಅಂಕ ಗಳಿಸಿದ್ದಾನೆ.

click me!