Covid 19 Spike: ಮತ್ತೆ 67 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ

By Kannadaprabha News  |  First Published Jan 10, 2022, 5:56 AM IST

*  ಸುರತ್ಕಲ್‌ನಲ್ಲಿ 60, ಕಲಬುರಗಿಯಲ್ಲಿ 7 ಕೇಸ್‌
*  ವಿದ್ಯಾರ್ಥಿಗಳಿಗೆ ಗೆಸ್ಟ್‌ಹೌಸ್‌ನಲ್ಲಿ ಇರಿಸಿ ಚಿಕಿತ್ಸೆ 
*  ಹಾಸನದಲ್ಲಿ 12 ಮಂದಿ ಪೊಲೀಸರಿಗೆ ಕೋವಿಡ್‌


ಬೆಂಗಳೂರು(ಜ.10):  ಶಾಲಾ-ಕಾಲೇಜುಗಳಲ್ಲಿ(School-Colleges) ಕೊರೋನಾ ಅಬ್ಬರ ಮುಂದುವರಿದಿದ್ದು, ಭಾನುವಾರ 67 ವಿದ್ಯಾರ್ಥಿಗಳಲ್ಲಿ(Students) ಸೋಂಕು ದೃಢಪಟ್ಟಿದೆ. ಮಂಗಳೂರು(Mangaluru) ಹೊರವಲಯದ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (NITK)ದ 60 ವಿದ್ಯಾರ್ಥಿಗಳಲ್ಲಿ ಮತ್ತು ಕಲಬುರಗಿಯ(Kalaburagi) ಕರ್ನಾಟಕ ಕೇಂದ್ರೀಯ ವಿವಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿವೆ.

ಮಂಗಳೂರಲ್ಲಿ ಕೊರೋನಾ ದೃಢಪಟ್ಟ ವಿದ್ಯಾರ್ಥಿಗಳನ್ನು ಸಂಸ್ಥೆಯ ಆವರಣದಲ್ಲೇ ಪ್ರತ್ಯೇಕವಾಗಿರುವ ಗೆಸ್ಟ್‌ಹೌಸ್‌ನಲ್ಲಿ ಇರಿಸಿ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಸಂಸ್ಥೆಯ 600ರಷ್ಟು ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದಾಗ 60 ಮಂದಿಗೆ ಸೋಂಕು ತಗುಲಿರುವುದು ಕಂಡುಬಂದಿದೆ.

Tap to resize

Latest Videos

Covid Target on Youths: ಐದೇ ದಿನದಲ್ಲಿ 8,000 ಯುವಜನರಿಗೆ ಸೋಂಕು..!

ಹಾಸನದಲ್ಲಿ 12 ಮಂದಿ ಪೊಲೀಸರಿಗೆ ಕೋವಿಡ್‌

ಹಾಸನ: ಹಾಸನದಲ್ಲಿ(Hassan) 12 ಪೊಲೀಸರಿಗೆ(Police) ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಪೊಲೀಸರಿಂದ ಅವರ ಕುಟುಂಬಸ್ಥರಿಗೂ ಸೋಂಕು ತಗುಲಿದೆ. 12 ಮಂದಿ ಕುಟುಂಬಸ್ಥರಿಗೂ ಪಾಸಿಟಿವ್‌ ವರದಿ ಬಂದಿದ್ದು ಒಟ್ಟು 24 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಇಬ್ಬರಿಗೆ, ಟ್ರಾಫಿಕ್‌ ಪೊಲೀಸ್‌ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿರುವ ಪೊಲೀಸರಿಗೆ ಕೊರೋನಾ ತಗುಲಿದೆ.
ಎಸ್ಪಿ ಶ್ರೀನಿವಾಸ್‌ ಗೌಡರ ಸೂಚನೆಯಂತೆ ಕಳೆದ ಎರಡು ದಿನಗಳ ಹಿಂದೆ ಎಲ್ಲಾ ಪೊಲೀಸರಿಗೂ ಕೋವಿಡ್‌ ಪರೀಕ್ಷೆ(Covid Test) ಮಾಡಲಾಗಿ ರಾರ‍ಯಂಡಮ್‌ ಟೆಸ್ಟ್‌(Random Test) ಮಾಡಿದ ಮೇಲೆ ಪಾಸಿಟಿವ್‌ ಇರುವುದು ಬೆಳಕಿಗೆ ಬಂದಿದೆ. ಈಗಾಗಲೇ ಪಾಸಿಟಿವ್‌ ಬಂದಿರುವ ಎಲ್ಲರನ್ನೂ ಹೋಮ್‌ ಕ್ವಾರಂಟೈನ್‌ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ.

ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 12,000 ಹೊಸ ಕೇಸ್ ಪತ್ತೆ

ಬೆಂಗಳೂರು: ಕರ್ನಾಟಕದಲ್ಲಿ(Karnataka) ಕೊರೋನಾ ಸೋಂಕು (Coronavirus) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. 
ಇಂದು (ಜ.09)  1,89,499 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಬರೋಬ್ಬರಿ 12,000 ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರಲ್ಲಿ 9,020 ಹೊಸ ಕೇಸ್‍ಗಳು ದೃಢಪಟ್ಟಿವೆ.

ಈ ಮೂಲಕ ಕೊರೋನಾ ಸೋಂಕಿರ ಸಂಖ್ಯೆ 3051958ಕ್ಕೆ ಏರಿದ್ರೆ,  38370 ಜನರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 901 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 29,63,957 ಮಂದಿ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 49,602 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಪಾಸಿಟಿವಿ ರೇಟ್ 6.33ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Deltacron: ಕೋವಿಡ್‌ನ ಮತ್ತೊಂದು ರೂಪಾಂತರಿ ಪತ್ತೆ: ಬಂತು ಹೊಸ ತಳಿ ಡೆಲ್ಟಾಕ್ರೋನ್‌..!

ಒಂದೇ ದಿನದಲ್ಲಿ ಶೇ.12ರಷ್ಟು ಏರಿಕೆ: 7.5 ತಿಂಗಳ ಗರಿಷ್ಠ: 327 ಜನರು ಸೋಂಕಿಗೆ ಬಲಿ!

ನವದೆಹಲಿ ಕೊರೋನಾ ಅಬ್ಬರ (Covid 19 Spike) ದೇಶದಲ್ಲಿ ಮತ್ತಷ್ಟುಏರಿದೆ. ಭಾನುವಾರ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 1,59,632 ಪ್ರಕರಣಗಳು ದಾಖಲಾಗಿದ್ದು, ಇದು 224 ದಿನಗಳ (ಏಳೂವರೆ ತಿಂಗಳ) ಗರಿಷ್ಠವಾಗಿದೆ. ಶನಿವಾರ ದೇಶದಲ್ಲಿ 1.41 ಲಕ್ಷ ಪ್ರಕರಣ ದಾಖಲಾಗಿದ್ದವು. ಇದಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ ಪ್ರಕರಣಗಳ ಸಂಖ್ಯೆ ಶೇ.12ರಷ್ಟುಏರಿಕೆಯಾದಂತಾಗಿದೆ. ಮೇ 29ರಂದು 1,65,553 ಕೇಸು ದಾಖಲಾಗಿದ್ದವು. ಆ ಬಳಿಕ ಈ ಪ್ರಮಾಣದ ಏಕದಿನದ ಪ್ರಕರಣಗಳು ದಾಖಲಾಗಿರಲಿಲ್ಲ.

ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 4,72,169ದಿಂದ 5,90,611ಕ್ಕೆ ಏರಿಕೆಯಾಗಿದೆ. ಇದು 197 ದಿನ (ಆರೂವರೆ ತಿಂಗಳ) ಗರಿಷ್ಠ. ಅಂದರೆ ಇಂದೇ ದಿನದಲ್ಲಿ 1.18 ಲಕ್ಷ (ಶೇ.25ರಷ್ಟು) ಸಕ್ರಿಯ ಪ್ರಕರಣಗಳು ಜಿಗಿತ ಕಂಡಿವೆ. ಅಲ್ಲದೆ, ಡಿ.28ರಂದು ಸಕ್ರಿಯ ಕೇಸು 75 ಸಾವಿರಕ್ಕೆ ಕುಸಿತ ಕಂಡಿದ್ದವು. ಅದಕ್ಕೆ ಹೋಲಿಸಿದರೆ ಕೇವಲ 13 ದಿನದಲ್ಲಿ ಸಕ್ರಿಯ ಕೇಸುಗಳ ಪ್ರಮಾಣ ಶೇ.682ರಷ್ಟುಭರ್ಜರಿ ಜಿಗಿತ ಕಂಡಂತಾಗಿದೆ. ಸೋಂಕಿಗೆ ಒಂದೇ ದಿನದಲ್ಲಿ 327 ಜನರು ಬಲಿಯಾಗಿದ್ದಾರೆ. ಪಾಸಿಟಿವಿಟಿ ದರ ಶೇ.10.21ಕ್ಕೆ ಏರಿಕೆಯಾಗಿದೆ. ಕೇವಲ 40,863 ಮಂದಿ ಗುಣಮುಖರಾಗಿದ್ದಾರೆ.
 

click me!