ಸಿಇಟಿ ಸುಸೂತ್ರ; ಶೇ. 95 ರಷ್ಟು ವಿದ್ಯಾರ್ಥಿಗಳು ಹಾಜರ್!

By Suvarna NewsFirst Published Aug 29, 2021, 8:38 PM IST
Highlights

* 2ನೇ ದಿನ ಸಿಇಟಿ ಸುತ್ರ ಎಂದ ಉನ್ನತ ಶಿಕ್ಷಣ ಸಚಿವರು
* ಭೌತಶಾಸ್ತ್ರಕ್ಕೆ 95.91%, ರಸಾಯನಶಾಸ್ತ್ರಕ್ಕೆ 95.88% ಅಭ್ಯರ್ಥಿಗಳು ಹಾಜರಿ
* ಕೊರೋನಾ ನಿಯಮಗಳನ್ನು ಪಾಲಿಸಿಕೊಂಡು ಪರೀಕ್ಷೆ

ಬೆಂಗಳೂರು( ಆ. 29) ರಾಜ್ಯಾದ್ಯಂತ ಭಾನುವಾರ ನಡೆದ ವೃತ್ತಿಶಿಕ್ಷಣ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎರಡನೇ ದಿನವೂ  ಯಾವುದೇ ಗೊಂದಲವಿಲ್ಲೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲಾಗಿದೆ. ನೊಂದಣಿ ಮಾಡಿಸಿದ್ದ ಒಟ್ಟು 2,01,834 ಅಭ್ಯರ್ಥಿಗಳಲ್ಲಿ, 1,93,588 (95.91%) ಅಭ್ಯರ್ಥಿಗಳು ಭೌತಶಾಸ್ತ್ರ ವಿಷಯಕ್ಕೆ ಮತ್ತು 1,93,522 (95.88%) ಅಭ್ಯರ್ಥಿಗಳು ರಸಾಯನಶಾಸ್ತ್ರ ವಿಷಯಕ್ಕೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಎಸ್‌ಓಪಿ ಅನುಸಾರ ಎಲ್ಲಾ ಸುರಕ್ಷತೆಯ ಕ್ರಮವನ್ನು ಖಾತರಿಪಡಿಸಿಕೊಂಡು ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪಾಸಿಟಿವ್ ಇದ್ದ 12 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಅವರು ಹೇಳಿದ್ದಾರೆ.

ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ
 
ನಾಳೆ (ಅಗಸ್ಟ್ 30) ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುವುದು. ಒಟ್ಟು 1,682 ಅಭ್ಯರ್ಥಿಗಳು ಈ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಕೊರೋನಾ ಆತಂಕದ ನಡುವೆಯೂ ವೃತ್ತಿಪರ ಕೋರ್ಸ್ ಗಳ  ಪ್ರವೇಶ ಪರೀಕ್ಷೆ ನಡೆದಿದೆ. ರಾಜ್ಯ ಸರ್ಕಾರ  ಒಂದು ವಾರದ ಹಿಂದೆ ಶಾಲಾ ಕಾಲೇಜುಗಳನ್ನು ಆರಂಭ ಮಾಡಿದೆ.

click me!