ದಕ್ಷಿಣ ಕನ್ನಡ : ಸೆ.1ರಿಂದ ದ್ವಿತೀಯ ಪಿಯು ಕ್ಲಾಸ್ ಆರಂಭ

By Suvarna News  |  First Published Aug 29, 2021, 1:24 PM IST
  • ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆ.1ರಿಂದ ದ್ವಿತೀಯ ಪಿಯುಸಿ ಆರಂಭಕ್ಕೆ ಗ್ರೀನ್ ಸಿಗ್ನಲ್
  • ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾಲೇಜು ತರಗತಿ ಆರಂಭದ ಬಗ್ಗೆ ಅಧಿಕೃತ ಆದೇಶ 

ಮಂಗಳೂರು (ಆ.29): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆ.1ರಿಂದ ದ್ವಿತೀಯ ಪಿಯುಸಿ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. 

ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾಲೇಜು ತರಗತಿ ಆರಂಭದ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. 

Tap to resize

Latest Videos

ದ್ವಿತೀಯ ಪಿಯು ಭೌತಿಕ ತರಗತಿ ಆರಂಭಿಸಲು ಮಾರ್ಗಸೂಚಿ ಪ್ರಕಟವಾಗಿದ್ದು, ಕೇರಳದಿಂದ ಬಂದು ಹಾಸ್ಟೆಲ್ನಲ್ಲಿ ಉಳಿಯುವ ವಿದ್ಯಾರ್ಥಿಗಳಿಗೆ 7 ದಿನ ಕ್ವಾರೆಂಟೈನ್ ಮಾಡಲಾಗುತ್ತದೆ.  ಕ್ವಾರೆಂಟೈನ್ ಮುಗಿದ ಬಳಿಕ ನೆಗೆಟಿವ್ ರಿಪೋರ್ಟ್ ಸಲ್ಲಿಸಿ ತರಗತಿಗೆ ಹಾಜರಾಗಬಹುದಾಗಿದೆ. 

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ತರಗತಿಗಳು ರೀ ಓಪನ್?

ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೆಗೆಟಿವ್ ರಿಪೋರ್ಟ್ ಜೊತೆ ಹಾಜರಿರಬೇಕು. ಕೇರಳದಿಂದ ಪ್ರತಿ ನಿತ್ಯ ಬರುವ ವಿದ್ಯಾರ್ಥಿಗಳಿಗೆ 7 ದಿನಕ್ಕೊಮ್ಮೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.

ವಸತಿ ನಿಲಯ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಪ್ರಥಮ ಪಿ.ಯು ತರಗತಿಗಳನ್ನು ಸೆ.15ರ ಬಳಿಕ ಆರಂಭಿಸಲು ಸೂಚನೆ ನೀಡಲಾಗಿದೆ.

click me!