ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಬಂದ ಶೇ. 90ರಷ್ಟು ಮಂದಿ ನೀಟ್ ಪಾಸಾಗುವುದಿಲ್ಲ: ಪ್ರಹ್ಲಾದ ಜೋಶಿ

By Suvarna NewsFirst Published Mar 2, 2022, 9:01 PM IST
Highlights

ವಿದೇಶದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಬರುವ ಶೇ 90ರಷ್ಟು ವಿದ್ಯಾರ್ಥಿಗಳು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿ(ಫೆ.2): ವಿದೇಶದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಬರುವ ಶೇ 90ರಷ್ಟು ವಿದ್ಯಾರ್ಥಿಗಳು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ (Pralhad Joshi) ಹೇಳಿದ್ದಾರೆಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (vladimir putin) ಉಕ್ರೇನ್ (ukraine) ವಿರುದ್ಧ ಯುದ್ಧ ಘೋಷಿಸಿದ ನಂತರ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 16,000 ಭಾರತೀಯ ಪ್ರಜೆಗಳು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಜೋಶಿ ಈ ಹೇಳಿಕೆ ನೀಡಿದ್ದಾರೆ.  ಭಾರತದ 16 ಸಾವಿರ ಮಂದಿಯಲ್ಲಿ ಹಲವರು ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿಗಳಾಗಿದ್ದಾರೆ.

Latest Videos

ವಿದೇಶದಲ್ಲಿನ ಹಾಗೂ ಭಾರತದಲ್ಲಿನ ವೈದ್ಯಕೀಯ ಶಿಕ್ಷಣಕ್ಕಾಗಿ ತಗಲುವ ವೆಚ್ಚ ಎಷ್ಟೇ ಇರಲಿ ಆ ಕುರಿತು ಈಗ ವಿವರವಾದ ಚರ್ಚೆ ಬೇಡ. ಆ ಚರ್ಚೆಗೆ ಇದು ಸಮಯವೂ ಅಲ್ಲ ಎಂದಿದ್ದಾರೆ. ವೈದ್ಯಕೀಯ ಪದವಿಗೆ ಭಾರತದಲ್ಲಿ ಹೆಚ್ಚಿನ ಹಣ ಖರ್ಚಾಗುತ್ತದೆ, ಉಕ್ರೇನ್‌ನಲ್ಲಿ ಕಡಿಮೆ ಖರ್ಚಾಗುತ್ತದೆ ಹೀಗಾಗಿ ಹೋಗುತ್ತಾರೆ ಎಂಬ ಮಾತಿದೆಯಲ್ಲಾ’ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು ‘ವೆಚ್ಚದ ಹೋಲಿಕೆ ಮಾಡಲು ನಾನು ಬಯಸುವುದಿಲ್ಲ. ಯಾವುದೇ ವಿವಾದ ಅಥವಾ ಚರ್ಚೆಗೆ ಈಗ ಬಯಸುವುದಿಲ್ಲ. ಅಲ್ಲಿ ಕಲಿತು ಬಂದವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸಬಲ್ಲೆ’ ಎಂದು ಹೇಳಿದ್ದಾರೆ.

BEL RECRUITMENT 2022: ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅನೇಕ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಎಂಬಿಬಿಎಸ್ ಮಾಡಲು ಹೋಗಿದ್ದಾರೆ. ಏಕೆಂದರೇ ಉಕ್ರೇನ್ ಮಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಚೆನ್ನಾಗಿದೆ ಎಂದು ಹೇಳಲಾಗಿದೆ.  ಭಾರತದ ಖಾಸಗಿ ಕಾಲೇಜುಗಳು ಮತ್ತು ಇತರ ದೇಶಗಳಲ್ಲಿನ ವೈದ್ಯಕೀಯ ಕೋರ್ಸ್‌ಗಳಿಗೆ ತಗಲುವ ವೆಚ್ಚ ಹೋಲಿಸಿದರೆ  ಉಕ್ರೇನ್ ನಲ್ಲಿ ತೀರ ಅಗ್ಗವಾಗಿದೆ.  ಇದೇ ಕಾರಣಗಳಿಗಾಗಿ ಉಕ್ರೇನ್‌ನಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡುತ್ತಾರೆ ಎಂದು ವರದಿಯಾಗಿದೆ.

ಪ್ರಹ್ಲಾದ್ ಜೋಶಿ ಹೇಳಿಕೆಯಿಂದ ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ: ಪ್ರಹ್ಲಾದ್ ಜೋಶಿ (Pralhad Joshi) ಅವರ ಹೇಳಿಕೆಯು ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಕಡಿಮೆ ಅಂಕ ತೆಗೆದುಕೊಂಡು ಅಲ್ಲಿ ಓದೋದಕ್ಕೆ ಹೋಗಿದ್ದಾರೆ ಎಂಬ ಹೇಳಿಕೆಯ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (dk Sivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಟಿಎಂ ಲೇಔಟ್ (BTM Layout) ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕಡಿಮೆ ಅಂಕ ತೆಗದುಕೊಂಡು ಅಲ್ಲಿ ಓದೋದಕ್ಕೆ ಹೋಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಯ ವಿರುದ್ದ  ಕಿಡಿಕಾರಿದ ಅವರು, ಇದು ವಿದ್ಯಾರ್ಥಿಗಳ ಸ್ವಾಭಿಮಾನದ ವಿಷಯ, ಬೇರೆ ಬೇರೆ ದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಕಡಿಮೆ ದರದಲ್ಲಿ ಶಿಕ್ಷಣ ಸಿಗುತ್ತೆ ಎಂದು ಹೋಗುತ್ತಾರೆ ವಿದ್ಯಾರ್ಥಿಗಳು ಹೊರ ದೇಶಕ್ಕೆ ಹೋಗಿ ಓದಿದರೆ ಇದರಲ್ಲಿ ತಪ್ಪೇನಿದೆ?

DRDO Recruitment 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್ 14 ಕೊನೆ ದಿನ

ಮೃತಪಟ್ಟ ನವೀನ್ ಗೆ ಎಷ್ಟು ಅಂಕ ಬಂದಿದೆ ಗೊತ್ತಿದ್ಯಾ? ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ (PUC) ಯಲ್ಲಿ ಉತ್ತಮವಾದ ಅಂಕ ತೆಗದುಕೊಂಡಿದ್ದಾನೆ ಇದು ಗೊತ್ತಿಲ್ವಾ ಮಂತ್ರಿಗಳಿಗೆ? ಈ ವಿಚಾರವಾಗಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಕ್ಷಮಾಪಣೆ ಕೇಳಬೇಕು ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸರ್ಕಾರವನ್ನ ಬದಲಾವಣೆ ಮಾಡುವ ಶಕ್ತಿ ಇದೆ. ಕೂಡಲೇ ಪ್ರಹ್ಲಾದ್ ಜೋಶಿ ಕ್ಷಮಾಪಣೆ ಕೇಳ್ಬೇಕು ಜೊತೆಗೆ ವಿದ್ಯಾರ್ಥಿಗಳನ್ನ ಭಾರತಕ್ಕೆ ವಾಪಾಸ್ ಕರೆತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಂಡಕಾರಿದ್ದಾರೆ.

click me!