ಪ್ರಹ್ಲಾದ್ ಜೋಶಿ ಅವರ ಹೇಳಿಕೆಯು ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಮಾ.2): ಪ್ರಹ್ಲಾದ್ ಜೋಶಿ (Pralhad Joshi) ಅವರ ಹೇಳಿಕೆಯು ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಕಡಿಮೆ ಅಂಕ ತೆಗೆದುಕೊಂಡು ಅಲ್ಲಿ ಓದೋದಕ್ಕೆ ಹೋಗಿದ್ದಾರೆ ಎಂಬ ಹೇಳಿಕೆಯ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (dk Sivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಟಿಎಂ ಲೇಔಟ್ (BTM Layout) ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕಡಿಮೆ ಅಂಕ ತೆಗದುಕೊಂಡು ಅಲ್ಲಿ ಓದೋದಕ್ಕೆ ಹೋಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಯ ವಿರುದ್ದ ಕಿಡಿಕಾರಿದ ಅವರು, ಇದು ವಿದ್ಯಾರ್ಥಿಗಳ ಸ್ವಾಭಿಮಾನದ ವಿಷಯ, ಬೇರೆ ಬೇರೆ ದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಕಡಿಮೆ ದರದಲ್ಲಿ ಶಿಕ್ಷಣ ಸಿಗುತ್ತೆ ಎಂದು ಹೋಗುತ್ತಾರೆ ವಿದ್ಯಾರ್ಥಿಗಳು ಹೊರ ದೇಶಕ್ಕೆ ಹೋಗಿ ಓದಿದರೆ ಇದರಲ್ಲಿ ತಪ್ಪೇನಿದೆ?
ಮೃತಪಟ್ಟ ನವೀನ್ ಗೆ ಎಷ್ಟು ಅಂಕ ಬಂದಿದೆ ಗೊತ್ತಿದ್ಯಾ? ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ (PUC) ಯಲ್ಲಿ ಉತ್ತಮವಾದ ಅಂಕ ತೆಗದುಕೊಂಡಿದ್ದಾನೆ ಇದು ಗೊತ್ತಿಲ್ವಾ ಮಂತ್ರಿಗಳಿಗೆ? ಈ ವಿಚಾರವಾಗಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಕ್ಷಮಾಪಣೆ ಕೇಳಬೇಕು ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
IFFCO IIMCAA AWARDS 2022: ಪ್ರಶಸ್ತಿ ವಿಜೇತ ಪತ್ರಕರ್ತರ ಪಟ್ಟಿ KOO ಕನೆಕ್ಷನ್‌ನಲ್ಲಿ ಪ್ರಕಟ
ವಿದ್ಯಾರ್ಥಿಗಳಿಗೆ ಸರ್ಕಾರವನ್ನ ಬದಲಾವಣೆ ಮಾಡುವ ಶಕ್ತಿ ಇದೆ. ಕೂಡಲೇ ಪ್ರಹ್ಲಾದ್ ಜೋಶಿ ಕ್ಷಮಾಪಣೆ ಕೇಳ್ಬೇಕು ಜೊತೆಗೆ ವಿದ್ಯಾರ್ಥಿಗಳನ್ನ ಭಾರತಕ್ಕೆ ವಾಪಾಸ್ ಕರೆತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಂಡಕಾರಿದ್ದಾರೆ.
ನಾಳೆ ನಡೆಯಲಿರುವ ಪಾದಯಾತ್ರೆ ಇತಿಹಾಸ ಪುಟ ಸೇರಲಿದೆ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಕೂಡ ಇತಿಹಾಸ ಪುಟ ಸೇರಿಕೊಳ್ಳಲಿದ್ದಾರೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಗೆ ರಾಜ್ಯದ ಜನರಿಂದ ಉತ್ತಮ ಬೆಂಬಲದ ಜೊತೆಗೆ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಮೇಕೆದಾಟು ಪಾದಯಾತ್ರೆ ಅಂತಿಮ ದಿನ ಪಾದಯಾತ್ರೆಯಾಗಿದ್ದು ಇತಿಹಾಸ ಪುಟ ಸೇರಲಿದೆ ಜೊತೆಗೆ ಪಾದಯಾತ್ರೆಯಲ್ಲಿ ನಮ್ಮ ಜೊತೆ ಹೆಜ್ಜೆ ಹಾಕಿದವರು ಕೂಡ ಇತಿಹಾಸ ಪುಟ ಸೇರಲಿದ್ದಾರೆ. ಮೇಕೆದಾಟು ಪಾದಯಾತ್ರೆಯ ಹೋರಾಟ ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ಅವರು ಹೇಳಿದ್ದಾರೆ.
TCS Youth Employment Program: ಕಾಶ್ಮೀರ ವಿವಿ ಜತೆ ಟಿಸಿಎಸ್, ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ
ಕಾಂಗ್ರೆಸ್ ಬ್ಯಾನರ್ ಮುಟ್ಟಿದರೆ ಬಿಜೆಪಿ ಬ್ಯಾನರ್ ಕೀಳ್ತೇವೆ: ‘ಮೇಕೆದಾಟು ಪಾದಯಾತ್ರೆಯ(Mekedatu Padayatra) ಬ್ಯಾನರ್‌ಗಳನ್ನು ತೆಗೆಸಿದರೆ ಯಡಿಯೂರಪ್ಪ ಆದಿಯಾಗಿ ಬಿಜೆಪಿಯ ಎಲ್ಲ ನಾಯಕರ ಬ್ಯಾನರ್‌ಗಳನ್ನೂ ಕಿತ್ತೊಗೆಯುತ್ತೇವೆ. ನಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ಪಟ್ಟಿನಮ್ಮ ಬಳಿ ಇದೆ. ಸಮಯ ಬಂದಾಗ ಅವರಿಗೆ ಉತ್ತರ ಸಿಗುತ್ತದೆ. ಈ ಕೇಸು, ಜೈಲಿಗೆಲ್ಲಾ ನಾವು ಹೆದರಲ್ಲ. ನಮ್ಮ ಕಾರ್ಯಕರ್ತರಿಗೆ ನೀಡುತ್ತಿರುವ ತೊಂದರೆಗಳ ವಿಚಾರವಾಗಿಯೇ ಹೋರಾಟ ಶುರು ಮಾಡಬೇಕಾಗುತ್ತದೆ..ಎಚ್ಚರ..! ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರು ಆಡಳಿತ ಪಕ್ಷ ಬಿಜೆಪಿ(BJP), ರಾಜ್ಯ ಸರ್ಕಾರ, ಪೊಲೀಸ್(Police) ಹಾಗೂ ಬಿಬಿಎಂಪಿ(BBMP) ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ.
ಮಂಗಳವಾರ ಮೂರನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು(Bengaluru) ಜನರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಬದುಕಿನ ರಕ್ಷಣೆಗಾಗಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳು, ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ನಮ್ಮ ಬ್ಯಾನರ್ ಕಿತ್ತು ಹಾಕಿದ್ದಾರೆ. ನಮ್ಮ ಕೆಲ ನಾಯಕರು ಅದನ್ನು ತಡೆದಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಹುಟ್ಟುಹಬ್ಬ, ಅಶ್ವತ್ಥ್ ನಾರಾಯಣ, ಸೋಮಣ್ಣನವರ ಹುಟ್ಟುಹಬ್ಬ, ಬೊಮ್ಮನಹಳ್ಳಿಯಲ್ಲಿ ಮುಖ್ಯಮಂತ್ರಿ ಅವರ ಕಾರ್ಯಕ್ರಮ ಆಯೋಜಿಸಿ ಬ್ಯಾನರ್(Banner) ಹಾಕಿದ್ದಾರೆ. ಅವುಗಳನ್ನು ಏಕೆ ತೆರವು ಮಾಡಿಲ್ಲ? ನಮ್ಮ ಬ್ಯಾನರ್‌ಗಳನ್ನು ತೆಗೆಸುವ ಕೆಲಸ ಮಾಡಿದರೆ, ನಾವೂ ನಮ್ಮ ಕಾರ್ಯಕರ್ತರಿಗೆ ಹೇಳಿ ಯಡಿಯೂರಪ್ಪ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರ ಬ್ಯಾನರ್‌ಗಳನ್ನೂ ಕಿತ್ತು ಹಾಕಬೇಕಾಗುತ್ತದೆ ಎಂದು ಹರಿಹಾಯ್ದರು.