ಕಾಮೆಡ್‌-ಕೆ: ಟಾಪ್‌ 10ರಲ್ಲಿ 8 ಮಂದಿ ಕರ್ನಾಟಕದವರು..!

By Kannadaprabha News  |  First Published May 25, 2024, 11:08 AM IST

ಪರೀಕ್ಷೆಗೆ ಹಾಜರಾಗಿದ್ದ 1.03 ಲಕ್ಷ ಅಭ್ಯರ್ಥಿಗಳ ಪೈಕಿ 10,575 ಅಭ್ಯರ್ಥಿಗಳು 90 ರಿಂದ 100 ಪರ್ಸೆಂಟೈಲ್ ಅಂಕ ಸಾಧನೆ ಮಾಡಿದ್ದಾರೆ. ಇದರಲ್ಲಿ 3,126 ಅಭ್ಯರ್ಥಿಗಳು ಕರ್ನಾಟಕದವರಾಗಿದ್ದಾರೆ. ಟಾಪ್ 10ರಲ್ಲಿ 8 ಅಭ್ಯರ್ಥಿಗಳು, ಟಾಪ್ 100ರಲ್ಲಿ 58 ಅಭ್ಯರ್ಥಿಗಳು ಕರ್ನಾಟಕವರಿದ್ದಾರೆ ಎಂದು ಕಾಮೆಡ್-ಕೆ ತಿಳಿಸಿದೆ.
 


ಬೆಂಗಳೂರು(ಮೇ.25):  ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ನಾತಕ ಪದವಿ ಪ್ರವೇಶಕ್ಕೆ ಮೇ 2ನೇ ವಾರದಲ್ಲಿ 'ಕಾಮೆಡ್-ಕೆ' ನಡೆಸಿದ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 1.03 ಲಕ್ಷ ಅಭ್ಯರ್ಥಿಗಳ ಪೈಕಿ 10,575 ಅಭ್ಯರ್ಥಿಗಳು 90 ರಿಂದ 100 ಪರ್ಸೆಂಟೈಲ್ ಅಂಕ ಸಾಧನೆ ಮಾಡಿದ್ದಾರೆ. ಇದರಲ್ಲಿ 3,126 ಅಭ್ಯರ್ಥಿಗಳು ಕರ್ನಾಟಕದವರಾಗಿದ್ದಾರೆ. ಟಾಪ್ 10ರಲ್ಲಿ 8 ಅಭ್ಯರ್ಥಿಗಳು, ಟಾಪ್ 100ರಲ್ಲಿ 58 ಅಭ್ಯರ್ಥಿಗಳು ಕರ್ನಾಟಕವರಿದ್ದಾರೆ ಎಂದು ಕಾಮೆಡ್-ಕೆ ತಿಳಿಸಿದೆ.

ಕಾಲೇಜುಗಳ ಆಯ್ಕೆಗೆ ಪ್ರತಿ ವರ್ಷದಂತೆ ಈ ವರ್ಷವೂ ಆನ್‌ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಲಾಗುತ್ತದೆ. ಕಾಮೆಡ್ -ಕೆ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಲಾಗಿನ್ ಐಡಿ ಮೂಲಕ ಸ್ಕ್ಯಾನ್ ಮಾಡಿರುವ ಶೈಕ್ಷಣಿಕ ದಾಖಲೆಗಳನ್ನು ಅಭ್ಯರ್ಥಿಗಳು ಅಪ್‌ಲೋಡ್ ಮಾಡಬೇಕು. ಲಭ್ಯವಿರುವ ಸೀಟುಗಳ ಸಂಖ್ಯೆ ಮತ್ತು ಶುಲ್ಕದ ವಿವರಗಳನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಕಾಮೆಡ್-ಕೆತಿಳಿಸಿದೆ. ಮೇ 12ರಂದು ಕರ್ನಾಟಕ ಸೇರಿದಂತೆ ದೇಶದ 191 ನಗರಗಳಲ್ಲಿನ 264 ಪರೀಕ್ಷಾ ಕೇಂದ್ರಗಳಲ್ಲಿ 3 ಸೆಷನ್‌ಗಳಲ್ಲಿ ಪರೀಕ್ಷೆ ನಡೆದಿತ್ತು. 

Tap to resize

Latest Videos

undefined

ಎಂಜಿನಿಯರಿಂಗ್‌ ಸೀಟು 10% ದುಬಾರಿ, ಇದು ಬಿಜೆಪಿ ಸರ್ಕಾರದಲ್ಲೇ ತೀರ್ಮಾನವಾಗಿತ್ತು: ಸಚಿವ ಡಾ.ಎಂ.ಸಿ.ಸುಧಾಕರ್‌

ಉತ್ತಮ ಅಂಕ ಸಾಧನೆ ಮಾಡುವ ನಿರೀಕ್ಷೆ ಇತ್ತು. ಆದರೆ, ಟಾಪರ್ ಆಗುತ್ತೇನೆಂದು ಊಹಿಸಿರಲಿಲ್ಲ. ಫಲಿತಾಂಶದಿಂದ ಸಂತೋಷವಾಗಿದೆ. ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದು, ಐಐಟಿಯಲ್ಲಿ ವ್ಯಾಸಂಗ ಮಾಡುವ ಗುರಿ ಇದೆ. ಕಾಲೇಜಿನಲ್ಲಿ ಪಡೆದ ತರಬೇತಿ ಮತ್ತು ಪಾಲಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಟಾಪರ್ ಬಾಲಸತ್ಯ ಸರವಣನ್ ತಿಳಿಸಿದ್ದಾರೆ. 

ಕಾಲೇಜಿನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವ್ಯಾಸಂಗ ಮಾಡಿ ಮನೆಯಲ್ಲಿಯು ಓದುತ್ತಿದ್ದೆ. ನಿಯಮಿತವಾಗಿ ಟೆಸ್ಟ್‌ಗಳು, ಹಳೇ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಅಭ್ಯಾಸದಿಂದ ಹೆಚ್ಚಿನ ಪರ್ಸೆಂಟೈಲ್ ತೆಗೆಯಲು ಸಾಧ್ಯವಾಗಿದೆ. ಜೆಇಇಗೆ ಸಿದ್ಧತೆ ನಡೆಸುತ್ತಿದ್ದೇನೆ ಎಂದು 3ನೇ ರ್ಯಾಂಕ್ ಸನಾ ತಬಸ್ಸುಂ ಹೇಳಿದ್ದಾರೆ. 

ಉತ್ತಮ ಅಂಕ ಸಾಧನೆ ಅಂಕಿ-ಅಂಶಗಳು

* 90-100 ಪರ್ಸೆಂಟೈಲ್ 10575 ಅಭ್ಯರ್ಥಿಗಳು
* 80-90 ಪರ್ಸೆಂಟೈಲ್ 2749 ಅಭ್ಯರ್ಥಿಗಳು
* 70-80 ಪರ್ಸೆಂಟೈಲ್ 10648 ಅಭ್ಯರ್ಥಿಗಳು

click me!