ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ರಚನೆಗೆ 8 ಸಮಿತಿ: ಡಿಸಿಎಂ ಅಶ್ವತ್ಥ್‌

By Kannadaprabha News  |  First Published Jun 20, 2021, 9:50 AM IST

* ಈ ವರ್ಷವೇ ಎನ್‌ಇಪಿ ಜಾರಿ 
* ವಿಷಯವಾರು ತಜ್ಞರ ಸಮಿತಿ ರಚನೆ: ಡಿಸಿಎಂ ಅಶ್ವತ್ಥ್‌
* ಪಠ್ಯಕ್ರಮ ರಚಿಸಿ ಅನುಷ್ಠಾನಕ್ಕೆ ವರದಿ ಸಲ್ಲಿಸಲು ಜೂ.30ರ ಗಡುವು
 


ಬೆಂಗಳೂರು(ಜೂ.20):  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಈ ವರ್ಷದಿಂದಲೇ ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ ಪದವಿ (ಯುಜಿ) ಹಾಗೂ ಸ್ನಾತಕೋತ್ತರ ಪದವಿ (ಪಿಜಿ) ಕೋರ್ಸುಗಳಿಗೆ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಕ್ರಮ ರಚಿಸಲು ವಿಷಯವಾರು ತಜ್ಞರನ್ನೊಳಗೊಂಡ ಎಂಟು ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ.

ರಾಜ್ಯದ ವಿವಿಧ ಪ್ರಮುಖ ವಿಶ್ವವಿದ್ಯಾಲಯಗಳ ಕುಲಪತಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕುಲಪತಿಗಳು, ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಕರುಗಳನ್ನೊಳಗೊಂಡು ಸಮಿತಿಗಳನ್ನು ರಚಿಸಲಾಗಿದೆ. ಈ ಎಲ್ಲಾ ಸಮಿತಿಗಳು ಪಠ್ಯಕ್ರಮ ರಚಿಸಿ ಅದರ ಅನುಷ್ಠಾನಕ್ಕೆ ಸೂಕ್ತ ವರದಿಯನ್ನು ಜೂ.30ರೊಳಗೆ ಸಲ್ಲಿಸಬೇಕೆಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಸೂಚಿಸಿದ್ದಾರೆ.

Tap to resize

Latest Videos

ನೂತನ ಶಿಕ್ಷಣ ನೀತಿ ಅನುಷ್ಠಾನ ಯೋಜನೆಗಳ ಸಿದ್ಧತೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಈಗಾಗಲೇ ಈ ನೀತಿ ಅನುಷ್ಠಾನ ಕಾರ್ಯಸಾಧುವೇ ಎಂದು ಕಳೆದ ವರ್ಷ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್‌ ಅವರ ನೇತೃತ್ವದಲ್ಲಿ ಸಮಿತಿಯಿಂದ ವರದಿ ಪಡೆದಿದೆ. ಈ ವರದಿ ಆಧರಿಸಿ ರಾಜ್ಯದಲ್ಲಿ ಯೋಜನಾಬದ್ಧವಾಗಿ ಮತ್ತು ಸಮರ್ಪಕವಾಗಿ ಇದನ್ನು ಅನುಷ್ಠಾನಗೊಳಿಸಲು ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ನೀಡಿದ ವರದಿ ಆಧರಿಸಿ ಪಠ್ಯಕ್ರಮ ರಚನೆಗೆ ವಿಷಯವಾರು ತಜ್ಞರನ್ನೊಳಗೊಂಡ ಎಂಟು ಸಮಿತಿಗಳನ್ನು ರಚಿಸಿದೆ.

ಕೋವಿಡ್‌ನಿಂದ ಅನಾಥರಾದ 20 ಮಕ್ಕಳ ದತ್ತು ಪಡೆದ ನಟ ಸಲೀಂ ದಿವಾನ್

ಎಂಟು ಸಮಿತಿಗಳ ವಿವರ ಹೀಗಿದೆ:

1. ಸಾಮಾಜಿಕ ವಿಜ್ಞಾನ:

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ (ಅಧ್ಯಕ್ಷ), ಪ್ರೊ.ಬಿ.ಪಿ.ವೀರಭದ್ರಪ್ಪ, ಪ್ರೊ.ಬಿ.ಕೆ.ತುಳಸಿಮಾಲಾ, ಪ್ರೊ.ಎನ್‌.ಆರ್‌.ಭಾನುಮೂರ್ತಿ, ಪ್ರೊ.ಹರೀಶ್‌ ರಾಮಸ್ವಾಮಿ, ಪ್ರೊ.ಜಿ. ಸರ್ವಮಂಗಳ, ಪ್ರೊ.ವಿ.ಎ.ಅಮಿನಭಾವಿ, ಪ್ರೊ.ಎ.ರಾಮೇಗೌಡ, ಪ್ರೊ.ಸಂಗೀತಾ ಮನೆ, ಪ್ರೊ.ಎನ್‌.ನರಸಿಂಹಮೂರ್ತಿ, ಪ್ರೊ.ನಿರಂಜನ, ಪ್ರೊ.ಆರ್‌.ಎನ್‌. ಮನಗೊಳಿ (ಸದಸ್ಯರು)

2. ಭಾಷೆ ಮತ್ತು ಭಾಷಾಶಾಸ್ತ್ರ:

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್‌ (ಅಧ್ಯಕ್ಷ), ಪ್ರೊ.ಎಸ್‌.ಸಿ.ರಮೇಶ್‌, ಪ್ರೊ.ಕೆ.ಇ.ದೇವನಾಥನ್‌, ಪ್ರೊ.ಲಿಂಗರಾಜ ಗಾಂಧಿ, ಪ್ರೊ.ರಚೇಲ್‌ ಕುರಿಯನ್‌, ಪ್ರೊ.ಗಂಗಾಧರಯ್ಯ (ಸದಸ್ಯರು)

3. ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ:

ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ (ಅಧ್ಯಕ್ಷ), ಪ್ರೊ.ಜಯಕುಮಾರ್‌ ರೆಡ್ಡಿ, ಪ್ರೊ.ಎಸ್‌.ಎನ್‌.ಸುಶೀಲ, ಪ್ರೊ.ಕೆ.ರಾಮಕೃಷ್ಣಯ್ಯ, (ಸದಸ್ಯರು)

4. ವಿಜ್ಞಾನ ಮತ್ತು ಗಣಿತ ಶಾಸ್ತ್ರ:

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ (ಅಧ್ಯಕ್ಷ), ಪ್ರೊ.ಟಿ.ಡಿ.ಕೆಂಪರಾಜು, ಪ್ರೊ.ಎಸ್‌.ವಿ. ಹಲಸೆ, ಪ್ರೊ.ಸಿದ್ದು ಪಿ.ಹಲಗೂರು, ಪ್ರೊ.ಎಸ್‌.ಎಂ.ಶಿವಪ್ರಸಾದ್‌, ಪ್ರೊ.ಶ್ರೀಧರ್‌, ಪ್ರೊ.ಮಂಜುನಾಥ ಪಟ್ಟಾಭಿ, ಪ್ರೊ.ಯು.ಎಸ್‌.ಮಹಾಬಲೇಶ್ವರ್‌, ಪ್ರೊ.ಪಿ.ಎಂ.ಪಾಟೀಲ್‌, ಪ್ರೊ.ಪರಮೇಶ್ವರ್‌ ವಿ.ಪಂಡಿತ್‌ (ಸದಸ್ಯರು)

5.ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ:

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ (ಅಧ್ಯಕ್ಷ), ಪ್ರೊ.ಎಲ್‌.ಗೋಮತಿ ದೇವಿ, ಪ್ರೊ.ದಯಾನಂದ ಅಗಸರ್‌, ಪ್ರೊ.ಜಿ.ಆರ್‌.ನಾಯಕ್‌, ಪ್ರೊ.ವಿ.ಆರ್‌.ದೇವರಾಜ್‌, ಪ್ರೊ.ಬಾಲಕೃಷ್ಣ ಕಲ್ಲೂರಾಯ, ಪ್ರೊ.ಎಚ್‌.ಎಸ್‌.ಭೋಜನಾಯಕ್‌, ಪ್ರೊ.ಲಕ್ಷ್ಮೇ ಇನಾಂದಾರ್‌, ಪ್ರೊ.ವಿ.ಕೃಷ್ಣ (ಸದಸ್ಯರು)

6. ಭೂ ವಿಜ್ಞಾನ:

ಕೆಬಿಎನ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಂ.ಪಠಾಣ್‌ (ಅಧ್ಯಕ್ಷ), ಪ್ರೊ.ಅಶೋಕ್‌ ಅಂಜಗಿ, ಪ್ರೊ.ಪಿ.ಮಾದೇಶ್‌, ಪ್ರೊ.ಆಸ್ಪಾ್ಯಕ್‌ ಅಹಮದ್‌, ಪ್ರೊ.ಎಸ್‌.ವಿ.ಕೃಷ್ಣಮೂರ್ತಿ, ಪ್ರೊ.ಎನ್‌.ನಂದಿನಿ (ಸದಸ್ಯರು)

7. ವಾಣಿಜ್ಯ ಮತ್ತು ನಿರ್ವಹಣೆ:

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ (ಅಧ್ಯಕ್ಷ), ಪ್ರೊ.ಎಂ.ರಾಮಚಂದ್ರಗೌಡ, ಪ್ರೊ.ಆರ್‌.ಎಲ್‌.ಹೈದರಾಬಾದ್‌, ಪ್ರೊ.ಎಚ್‌.ಎಸ್‌. ಅನಿತಾ, ಪ್ರೊ.ಡಿ.ಆನಂದ್‌, ಪ್ರೊ. ವಿಜಯ್‌ ಬೂತಪುರ್‌, ಪ್ರೊ.ಸಿಂಥಿಯಾ ಮೆನೇಜಸ್‌, ಪ್ರೊ.ಮುಸ್ತೈರಿ ಬೇಗಂ, ಪ್ರೊ.ಸುದರ್ಶನ್‌ ರೆಡ್ಡಿ, ಡಾ.ಅಲೋಯಿಸಿಸ್‌ ಎಡ್ವರ್ಡ್‌(ಸದಸ್ಯರು)

8. ಎಂಜಿನಿಯರಿಂಗ್‌:

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ (ಅಧ್ಯಕ್ಷ), ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಪ್ರೊ.ಕೆ.ಎನ್‌.ಬಿ.ಮೂರ್ತಿ, ಪ್ರೊ.ಎಸ್‌.ವಿದ್ಯಾಶಂಕರ್‌, ಪ್ರೊ.ಪುಟ್ಟರಾಜು, ಪ್ರೊ.ಶ್ರೀನಿವಾಸ ಬಲ್ಲಿ (ಸದಸ್ಯರು). ಮೇಲಿನ ಎಲ್ಲಾ ವಿಷಯಗಳ ಸಮಿತಿಗಳಿಗೂ ಪ್ರೊ.ಗೋಪಾಲಕೃಷ್ಣ ಜೋಶಿ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
 

click me!