* 6ರಿಂದ 8ನೇ ತರಗತಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
* ಕೊವೀಡ್ ಮೂರನೇ ಅಲೆ ನಿಯಂತ್ರಣದ ಉನ್ನತ ಮಟ್ಟದ ಸಮಿತಿಯಲ್ಲಿ ನಿರ್ಧಾರ
* ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್. ಅಶೋಕ್
ಬೆಂಗಳೂರು, (ಆ.30): ರಾಜ್ಯಾದ್ಯಂತ 9ರಿಂದ 12 ತರಗತಿಗಳು ಪ್ರಾರಂಭವಾಗಿದ್ದು, ಇದೀಗ 6ರಿಂದ 8ನೇ ತರಗತಿಗಳನ್ನೂ ಸಹ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೊವೀಡ್ ಮೂರನೇ ಅಲೆಯ ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನಿಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಪ್ಟೆಂಬರ್ 6 ರಿಂದಲೇ 6ರಿಂದ 8ನೇ ತರಗತಿಗಳನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಆರಂಭಿಸಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭಕ್ಕೆ ಸಿದ್ಧತೆ: ಸಚಿವ ನಾಗೇಶ್
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, 6, 7, 8 ನೇ ತರರಗತಿಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ. ಶೇಕಡ 50 ರಷ್ಟು ಮಕ್ಕಳು ದಿನ ಬಿಟ್ಟು ದಿನ ಶೇ. 50 ರಷ್ಟು ಹಾಜರಾತಿಯೊಂದಿಗೆ ಶಾಲೆ ಆರಂಭಿಸಲು ತೀರ್ಮಾನಿಸಿದ್ದು, ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ 6-8 ನೇ ತರಗತಿ ಶಾಲೆಗಳನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಶನಿವಾರ, ಭಾನುವಾರ ಶಾಲೆ ಇರಲ್ಲ, ಸ್ಯಾನಿಟೈಸ್ ಮಾಡಲಾಗುವುದು. ಸೆಪ್ಟೆಂಬರ್ 6 ರಿಂದಲೇ ರಾಜ್ಯದಲ್ಲಿ 6 ರಿಂದ 8 ನೇ ತರಗತಿ ಆರಂಭಿಸಲಾಗುವುದುಎಂದು ವಿವರಿಸಿದರು.
ಆಗಸ್ಟ್ 23ರಿಂದ 9-12ನೇ ಕ್ಲಾಸ್ ಪ್ರಾರಂಭಿಸಲಾಗಿತ್ತು. ಇದೀಗ 6ರಿಂದ 8ನೇ ತರಗತಿಗಳನ್ನ ಪ್ರಾರಂಭಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಸಚಿವರಾದ ಆರ್ ಅಶೋಕ, ಡಾ. ಕೆ. ಸುಧಾಕರ್, ಎಸ್ ಟಿ ಸೋಮಶೇಖರ, ಬಿ ಸಿ ನಾಗೇಶ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್, ತಜ್ಞ ವೈದರಾದ ಡಾ. ಸುದರ್ಶನ್ , ಡಾ. ಸಿ ಎನ್ ಮಂಜುನಾಥ, ಡಾ. ದೇವಿಶೆಟ್ಟಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು