Karnataka: ಶಾಲೆಗೆ ಬಾರದ ವಿದ್ಯಾರ್ಥಿಗಳ ಕರೆತನ್ನಿ, ಸ್ಕೂಲ್‌ ಮುಖವನ್ನೇ ನೋಡದ ಸಾವಿರಾರು ಮಕ್ಳು..!

By Kannadaprabha News  |  First Published Nov 4, 2021, 7:37 AM IST

*  ಶಾಲೆಯಿಂದ ಹೊರಗುಳಿದ 34411 ಮಕ್ಕಳನ್ನು ಕರೆ ತನ್ನಿ!
*  13081 ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ
*  ಸ್ಥಳೀಯ ಸಂಸ್ಥೆಗಳ ಸಮೀಕ್ಷೆಯಲ್ಲಿ ಬಹಿರಂಗ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.04): ಕಡ್ಡಾಯ ಶಿಕ್ಷಣ ಜಾರಿಯ ಬಳಿಕವೂ ರಾಜ್ಯಾದ್ಯಂತ(Karnataka) ಪ್ರಸಕ್ತ ಸಾಲಿನಲ್ಲಿ ಸುಮಾರು 34411 ಮಕ್ಕಳು(Children) ಶಾಲೆಯಿಂದ(School) ಹೊರಗುಳಿದಿರುವ ಅಂಶ ಬೆಳಕಿಗೆ ಬಂದಿರುವ ಬೆನ್ನಲ್ಲೇ ಹೇಗಾದರೂ ಇವರನ್ನು ಶಾಲೆಯ ಮುಖ್ಯವಾಹಿನಿಗೆ ತರುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.

Latest Videos

undefined

13081 ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ. ಇವರು ಇದುವರೆಗೂ ಶಾಲೆಗೆ ದಾಖಲೆ ಆಗಿಲ್ಲ. ಇನ್ನು ಶಾಲೆಗೆ ದಾಖಲಾದ ವಿದ್ಯಾರ್ಥಿಗಳ(Students) ಪೈಕಿ 21330 ವಿದ್ಯಾರ್ಥಿಗಳು ಶಾಲೆಯಿಂದ ದೂರವೇ ಉಳಿದಿದ್ದಾರೆ. ಇವರು ಈಗಲೂ ಶಾಲೆಗೆ ಬರುತ್ತಿಲ್ಲ ಎನ್ನುವುದು ಸ್ಥಳೀಯ ಸಂಸ್ಥೆಯ ಸಮೀಕ್ಷೆಯಲ್ಲಿ(Survey) ಗೊತ್ತಾಗಿದೆ.

ಶಿಕ್ಷಣ ಇಲಾಖೆ(Department of Education) ಶಾಲೆ ಬಿಟ್ಟಮಕ್ಕಳನ್ನು ಮತ್ತು ಶಾಲೆಗೆ ದಾಖಲಾದ ಮಕ್ಕಳನ್ನು ಪತ್ತೆ ಮಾಡುವಲ್ಲಿ ಅಷ್ಟಾಗಿ ಮುತುವರ್ಜಿ ವಹಿಸದೆ ಇರುವುದರಿಂದ ಸ್ಥಳೀಯ ಸಂಸ್ಥೆಯ ಸಿಬ್ಬಂದಿಯ ಮೂಲಕ ಮಾಡಿದ ಸರ್ವೇಯಲ್ಲಿ ಶಾಲೆ ಬಿಟ್ಟಿರುವ ಹಾಗೂ ಶಾಲೆಗೆ ದಾಖಲೆಯಾಗದೆ ಇರುವ ಮಕ್ಕಳು ಪತ್ತೆಯಾಗಿದ್ದಾರೆ. ಹೀಗಾಗಿ, ಈಗ ಸಮಗ್ರ ಶಿಕ್ಷಣದ ಯೋಜನಾ ನಿರ್ದೇಶಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅ. 30 ರಂದು ಸುತ್ತೋಲೆ ಹೊರಡಿಸಿ, ಅಷ್ಟೂ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುವ ಹಾಗೂ ಶಾಲೆಗೆ ಕರೆತರುವ ದಿಸೆಯಲ್ಲಿ ಕ್ರಮ ವಹಿಸುವಂತೆ ಡಿಡಿಪಿಐ(DDPI) ಹಾಗೂ ಬಿಇಒಗಳನ್ನು(BEO) ಜವಾಬ್ದಾರರನ್ನಾಗಿ ಮಾಡಿ ಆದೇಶ(Order) ಹೊರಡಿಸಿದ್ದಾರೆ.

ಕಾಯಂ, ಗುತ್ತಿಗೆ, ಪಾರ್ಟ್‌ ಟೈಂ ಶಿಕ್ಷಕರಿಗೆ ಸರ್ಕಾರದಿಂದ ಐಡಿ: ಸಚಿವ ನಾಗೇಶ್

ಏನೇನು ಕಾರಣ?:

ಸ್ಥಳೀಯ ಸಂಸ್ಥೆಯ ಸಿಬ್ಬಂದಿ ನಡೆಸಿದ ಸಮಿಕ್ಷೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದ ಮತ್ತು ಶಾಲೆ ಬಿಟ್ಟಿರುವುದಕ್ಕೆ ವೈದ್ಯಕೀಯ, ಆರ್ಥಿಕ ತೊಂದರೆ ಹಾಗೂ ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂಬ ಅಂಶ ಬಯಲಾಗಿದೆ.

ತಕ್ಷಣ ಕ್ರಮವಹಿಸಿ:

ಕೂಡಲೇ ಆಯಾ ಡಿಡಿಪಿಐಗಳು ತಮ್ಮ ಜಿಲ್ಲೆಯ ಮಾಹಿತಿ ಪಡೆದು, ಅದನ್ನು ಬಿಇಒಗಳಿಗೆ ಕಳುಹಿಸಿಕೊಡಬೇಕು. ಬಿಇಒಗಳು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ(Headmaster) ಯಾದಿ ಕಳುಹಿಸಿಕೊಡಬೇಕು. ಮುಖ್ಯೋಪಾಧ್ಯಾಯರು ತಮ್ಮ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟಮಕ್ಕಳನ್ನು ಪತ್ತೆ ಮಾಡಿ, ಶಾಲೆಗೆ ಕರೆತಂದು, ವರದಿ ನೀಡಬೇಕು. ಯಾವುದೇ ಒಂದು ಮಗು ಸಹ ತಪ್ಪಿ ಹೋಗುವಂತೆ ಇಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಪಾಲಕರ ಮನವೊಲಿಸಿ:

ಹೀಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಪಾಲಕರನ್ನು(Parents) ಭೇಟಿ ಮಾಡಿ, ಅವರಿಗೆ ಕೌನ್ಸೆಲಿಂಗ್‌ ಮಾಡಬೇಕು. ಆ ಮೂಲಕ ಅವರ ಮನವೊಲಿಸಿ ಮಗು ಶಾಲೆಗೆ ದಾಖಲಾಗುವಂತೆ(Admission) ನೋಡಿಕೊಳ್ಳಬೇಕು. ಇಷ್ಟಾಗಿಯೂ ಪಾಲಕರು ಮಗುವನ್ನು ಶಾಲೆಗೆ ಕಳುಹಿಸದೆ ಇದ್ದರೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ನೋಟಿಸ್‌(Notice) ಜಾರಿ ಮಾಡಬೇಕು. ಮಕ್ಕಳ ಕಲ್ಯಾಣ ಸಮಿತಿಯ ಮುಂದೆಯೂ ಹಾಜರಾಗದಿದ್ದಲ್ಲಿ ತಕ್ಷಣ ಬಾಲ ನ್ಯಾಯಮಂಡಳಿಯ ಮೂಲಕ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಮಾಡಬೇಕು.

ಯಾದಗಿರಿ: ವಸತಿ ಶಾಲೆಯಲ್ಲಿ ಊಟ ಸಿಗದೆ ಮಕ್ಕಳು ಅಸ್ವಸ್ಥ

ಪರ್ಯಾಯ ಕ್ರಮ:

ಇದನ್ನು ಮೀರಿಯೂ ಶಾಲೆಯಿಂದ ಮಕ್ಕಳು ಹೊರಗುಳಿದರೆ ಅದಕ್ಕೆ ನಿಖರ ಕಾರಣ ಪತ್ತೆ ಮಾಡಬೇಕು. ವಲಸೆ ಹೋಗುವಾಗ ಪಾಲಕರು ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುವುದರಿಂದ ಆಗುವ ಸಮಸ್ಯೆಯನ್ನು ಪತ್ತೆ ಮಾಡಿ, ಪರಿಹಾರ ಕಂಡುಕೊಳ್ಳಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಾಗಿದ್ದರೆ ಅವರಿಗೆ ಅಗತ್ಯ ನೆರವು ನೀಡಬೇಕು. ಹೀಗೆ, ಶಾಲೆಯಿಂದ ದೂರ ಉಳಿದ ಹಾಗೂ ಶಾಲೆಗೆ ದಾಖಲಾಗಿ ಶಾಲೆ ಬಿಟ್ಟಿರುವ ಅಷ್ಟೂಮಕ್ಕಳನ್ನು ಶಾಲೆಗೆ ಸೇರಿಸುವ ಕ್ರಮ ಕೈಗೊಂಡು, ಪ್ರತಿ ಮಗು ಶಾಲೆಗೆ ಸೇರುವಂತೆ ಮಾಡುವಂತೆ ಕಟ್ಟುನಿಟ್ಟಾಗಿ ಆದೇಶ ಮಾಡಲಾಗಿದೆ.

ದಾಖಲೆಯೇ ಆಗದ ಮಕ್ಕಳು

6 ರಿಂದ 14 ವರ್ಷ 7931 
14 ರಿಂದ 16 ವರ್ಷ 5150

ಶಾಲೆ ಬಿಟ್ಟ ಮಕ್ಕಳು

6 ರಿಂದ 14 ವರ್ಷ 11405 
14 ರಿಂದ 16 ವರ್ಷ 9925 ಒಟ್ಟು 34411

ಶಾಲೆಯಿಂದ ಹೊರಗುಳಿದ ಮತ್ತು ದಾಖಲೆ ಆಗದಿರುವ ಮಕ್ಕಳ ಮಾಹಿತಿ ಬಂದಿದ್ದು, ಆ ಮಕ್ಕಳನ್ನು ಶಾಲೆಗೆ ಸೇರಿಸುವ ದಿಸೆಯಲ್ಲಿ ಈಗಾಗಲೇ ಕ್ರಮವಹಿಸಲಾಗುತ್ತಿದೆ ಎಂದು ಕೊಪ್ಪಳ(Koppal) ಡಿಡಿಪಿಐ ದೊಡ್ಡಬಸಪ್ಪ ನೀರಲೂಟಿ ತಿಳಿಸಿದ್ದಾರೆ.  
 

click me!