ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ : ರಾಜ್ಯದಲ್ಲಿ ಈ ವರ್ಷ ಇಲ್ಲ ಬೇಸಿಗೆ ರಜೆ

By Suvarna NewsFirst Published Dec 15, 2020, 1:46 PM IST
Highlights

ರಾಜ್ಯದಲ್ಲಿ  ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಶಿಕ್ಷಣ ಇಲಾಖೆ ಕೈಗೊಂಡಿರುವ ಆ ನಿರ್ಧಾರವೇನು..?

ಬೆಂಗಳೂರು (ಡಿ.18):  ಕೊರೊನಾ ಎಫೆಕ್ಟ್ ಈ ವರುಷ ಬೇಸಿಗೆ ರಜೆ ಡೌಟ್! ಕೊರೊನಾ‌ ಕೇಸ್ ಇಳಿಮುಖ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಕಡಿತ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಏಪ್ರಿಲ್, ಮೇ ತಿಂಗಳಿನಲ್ಲಿ ನೀಡುತ್ತಿದ್ದ ಬೇಸಿಗೆ ರಜೆ ಕಡಿತ ಮಾಡುವ ಸಾಧ್ಯತೆ ಇದೆ. ಕಳೆದ 10 ತಿಂಗಳಿನಿಂದ ಶಾಲಾ ಕಾಲೇಜುಗಳು ತೆರೆದಿಲ್ಲ. ಅಲ್ಲದೇ ಕೆಲ ತಿಂಗಳಿಂದ ವಿದ್ಯಾಗಮ ಕೂಡ ಸ್ಥಗಿತಗೊಂಡಿದೆ.  ಪರಿಷ್ಕೃತ ವಿದ್ಯಾಗಮ ಇನ್ನಷ್ಟೇ ಆರಂಭವಾಗಬೇಕಿದೆ. 

ಆನ್ ಲೈನ್ ಕ್ಲಾಸ್ ಗಳು ನಡೆದರು ಪೋರ್ಷನ್ ಮುಗಿದಿಲ್ಲ. ಈ ಹಿನ್ನೆಲೆ ಬೇಸಿಗೆ ರಜೆ ನೀಡದೇ ಇರಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ತರಗತಿ ನಡೆಸಲು ಬೇಸಿಗೆ ರಜೆ ಕಡಿತ ಅನಿವಾರ್ಯವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 

ರಾಜ್ಯದಲ್ಲಿ 10, 12ನೇ ಕ್ಲಾ ಸ್ ಶೀಘ್ರ ಆರಂಭ? ...

ಮಕ್ಕಳ ವಯೋಮಾನಕ್ಕೆ ತಕ್ಕಂತೆ ಬೋಧನೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ 15 ದಿನವಾದರೂ ರಜೆ ನೀಡಲಿ ಎಂದು ಶಿಕ್ಷಕರ ಸಂಘ ಮನವಿ ಮಾಡಿದೆ. 

ಈಗಾಗಲೇ ಜನವರಿಯಿಂದ SSLC ಪಿಯುಸಿ ಕಾಲೇಜುಗಳನ್ನು ಆರಂಭ ಮಾಡಲು ಈಗಾಗಲೇ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಬೇಸಿಗೆ ರಜೆ ಕಟ್ ಆಗಲಿದೆ.

click me!