ದ್ವಿತೀಯ ಪಿಯು ಕನ್ನಡ ಪರೀಕ್ಷೆಗೆ 1723 ಅಭ್ಯರ್ಥಿಗಳು ಗೈರು

By Kannadaprabha News  |  First Published Aug 22, 2021, 7:48 AM IST
  • ರಾಜ್ಯಾದ್ಯಂತ ಶನಿವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪರೀಕ್ಷೆ
  • ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದವರ ಪೈಕಿ 15,884 ಮಂದಿ ಹಾಜರಾಗಿದ್ದು, 1723 ಅಭ್ಯರ್ಥಿಗಳು ಗೈರು 

ಬೆಂಗಳೂರು (ಆ.22): ರಾಜ್ಯಾದ್ಯಂತ ಶನಿವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದ ಪರೀಕ್ಷೆ ಸುಸೂತ್ರವಾಗಿ ಜರುಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದವರ ಪೈಕಿ 15,884 ಮಂದಿ ಹಾಜರಾಗಿದ್ದು, 1723 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ಎಲ್ಲ 187 ಪರೀಕ್ಷಾ ಕೇಂದ್ರಗಳಲ್ಲೂ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಯಿತು. ಯಾವುದೇ ರೀತಿಯ ಗೊಂದಲ, ಸಮಸ್ಯೆಗಳಿಲ್ಲದೆ ಪರೀಕ್ಷೆ ನಡೆದಿದೆ ಎಂದು ಇಲಾಖೆ ತಿಳಿಸಿದೆ. ಕನ್ನಡ ಭಾಷಾ ವಿಷಯದ ಪ್ರಶ್ನೆಗಳು ಅತ್ಯಂತ ಸರಳವಾಗಿದ್ದವು. 

Tap to resize

Latest Videos

18 ಲಕ್ಷ ರೈತರ ಮಕ್ಕಳಿಗೆ ಪಿಯುಸಿಯಿಂದ ಪಿಜಿಯವರೆಗೆ ವಿಶೇಷ ಶಿಷ್ಯವೇತನ

ಬಹುತೇಕ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇವೆ. ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ವಾಣಿ ವಿಲಾಸ ಪಿಯು ಕಾಲೇಜಿನ ಕೇಂದ್ರದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಸೋಮವಾರ ಭೂಗೋಳಶಾಸ್ತ್ರ, ಮನೋವಿಜ್ಞಾನ ಮತ್ತು ಭೌತಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಗುರುವಾರ ಮೊದಲ ದಿನ ಗಣಿತ, ಐಚ್ಛಿಕ ಕನ್ನಡ ಮತ್ತು ಮೂಲ ಗಣಿತ ವಿಷಯಗಳಿಗೆ ಪರೀಕ್ಷೆ ನಡೆದಿತ್ತು. ಶನಿವಾರ ಕನ್ನಡ ಭಾಷಾ ವಿಷಯದ ಪರೀಕ್ಷೆ ನಡೆದಿದ್ದು, ಇದರೊಂದಿಗೆ ಎರಡು ಪರೀಕ್ಷೆಗಳು ಮುಕ್ತಾಯವಾಗಿದೆ.  

click me!