ಆಧಾ‌ರ್ ಪ್ರಾಬ್ಲಂ: 1 ಲಕ್ಷ ಎಸ್ಸಿ ಸ್ಕಾಲರ್‌ಶಿಪ್‌ ಅರ್ಜಿ ಬಾಕಿ..!

By Kannadaprabha NewsFirst Published Jun 23, 2024, 12:58 PM IST
Highlights

ಯೋಜನೆಯ ಆರಂಭದ ವರ್ಷಗಳಲ್ಲಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿ ಇರಲಿಲ್ಲ. 2023ರ ಡಿಸೆಂಬರ್‌ನಲ್ಲಿ ಈ ಕುರಿತು ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ವಿದ್ಯಾರ್ಥಿಯ ಮಿತಿಯನ್ನು ಕುಟುಂಬದ ವಾರ್ಷಿಕ ಆದಾಯವನ್ನು 6 ಲಕ್ಷ ರು. ನಿಗದಿಪಡಿಸಲಾಗಿದೆ. 

ಮಂಜುನಾಥ್ ನಾಗಲೀಕರ್

ಬೆಂಗಳೂರು(ಜೂ.23):  ಅನುದಾನ ಲಭ್ಯವಿದ್ದರೂ ಬ್ಯಾಂಕ್ ಖಾತೆಗೆ ಆಧಾ‌ರ್ ಇಲಾಖೆಯಲ್ಲಿ ಡ್ರೈಜ್ ಮನಿ/ಪ್ರೋತ್ಸಾಹಧನ ಕೋರಿ ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಲ್ಲಿಸಿರುವ 1.16 ಲಕ್ಷ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ! 

Latest Videos

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯನ್ನು ಪ್ರಥಮ ಪ್ರಯತ್ನದಲ್ಲೇ ಶೇ.60 ರಿಂದ ಶೇ.75 ಮತ್ತು ಶೇ.75ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರುವವರಿಗೆ 5 7,000 2. 2 15,000 2. ಒಂದು ಬಾರಿ ಪ್ರೋತ್ಸಾಹ ಧನವನ್ನು ಡಿಬಿಟಿ ಮೂಲಕ ಮಂಜೂರು ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಆದರೆ, 2021, 2022 ಮತ್ತು 2023ನೇ ಸಾಲಿನಲ್ಲಿ ಸಾವಿರಾರು ಸಲ್ಲಿಕೆಯಾಗಿರುವ ಬ್ಯಾಂಕ್ ಖಾತೆಗಳು ಆಧಾರ್ ಸಂಖ್ಯೆಯೊಂದಿಗೆ ಸೀಡಿಂಗ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಬಿಡುಗಡೆ ಆಗಿಲ್ಲ, ಪ್ರೋತ್ಸಾಹಧನ ನೀಡಲು ಇಲಾಖೆಯಲ್ಲಿ ಈಗ 25 ಕೋಟಿ ರು. ಲಭ್ಯವಿದೆ. ಅರ್ಜಿ ಹಾಕಿರುವವರು ತ್ವರಿತಗತಿಯಲ್ಲಿ ಆಧಾರ್‌ಸೀಡಿಂಗ್ ಮಾಡಿಸುವಂತೆ ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಳ್ವಾಸ್‌ ಸಂಸ್ಥೆಯಿಂದ 10 ಕೋಟಿ ಮೊತ್ತದ ವಿದ್ಯಾರ್ಥಿ ವೇತನ ಘೋಷಣೆ, ಮಾ.31, ಏ.14ರಂದು ಪ್ರವೇಶ ಪರೀಕ್ಷೆ

5,100 ವಿದ್ಯಾರ್ಥಿಗಳಿಗೆ ಶೀಘ್ರ ಪ್ರೋತ್ಸಾಹಧನ: 

1.16 ಲಕ್ಷ ಅರ್ಜಿಗಳಿಗೆ ಪ್ರೋತಾಹಧನ ನೀಡಲು ಅಂತಹ ಅರ್ಜಿಗಳನ್ನು ಪ್ರೋತ್ಸಾಹಧನಕ್ಕೆ 126.34 ಕೋಟಿ ರು. ಅನುದಾನ ಬೇಕು. ಇತ್ತೀಚೆಗೆ 5,100 ಅರ್ಜಿಗಳು ಆಧಾರ್ ಡಿಂಗ್ ಆಗಿವೆ. ಅವುಗಳಿಗೆ ಶೀಘ್ರದಲ್ಲೇ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಸುಮಾರು 6 ಕೋಟಿ ರು. ಬೇಕಾಗುತ್ತದೆ. ಬಳಿಕ ಇಲಾಖೆಯಲ್ಲಿ 19 ಕೋಟಿ ರು. ಉಳಿಯುತ್ತದೆ ಎಂದು ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ (ಶಿಕ್ಷಣ) ಎಸ್.ಪುರುಷೋತ್ತಮ ತಿಳಿಸಿದರು.

ಬಡ ಬ್ರಾಹ್ಮಣರಿಗೆ ಸ್ವ ಉದ್ಯೋಗ, ಶಿಕ್ಷಣಕ್ಕೆ ನೆರವು ನೀಡಲಿವೆ ಈ ಯೋಜನೆಗಳು; ಅರ್ಜಿ ಸಲ್ಲಿಕೆ ಹೇಗೆ?

6 ಲಕ್ಷ ಆದಾಯ ಮಿತಿ, ಶೇ.75ರಷ್ಟು ಅಂಕ ನಿಗದಿ

ಯೋಜನೆಯ ಆರಂಭದ ವರ್ಷಗಳಲ್ಲಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿ ಇರಲಿಲ್ಲ. 2023ರ ಡಿಸೆಂಬರ್‌ನಲ್ಲಿ ಈ ಕುರಿತು ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ವಿದ್ಯಾರ್ಥಿಯ ಮಿತಿಯನ್ನು ಕುಟುಂಬದ ವಾರ್ಷಿಕ ಆದಾಯವನ್ನು 6 ಲಕ್ಷ ರು. ನಿಗದಿಪಡಿಸಲಾಗಿದೆ. ಪ್ರೊತ್ಸಾಹಧನ ಮೊತ್ತವನ್ನು ಎಸ್‌ಎಸ್ಎಲ್‌ಸಿಗೆ 15,000 ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಗರಿಷ್ಠ 35,000 ರು.ಗೆ ಹೆಚ್ಚಿಸಲಾಗಿದೆ.

ಆಧಾ‌ರ್ ಸೀಡಿಂಗ್ ಹೇಗೆ?

ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳು ಸಕ್ರಿಯವಾಗಿರುವ ಬಗ್ಗೆ ವಿದ್ಯಾರ್ಥಿಗಳು ಆಧಾರ್‌ಸೇವಾ ಕೇಂದ್ರ ಮತ್ತು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಬೇಕು. ಇಲ್ಲದಿದ್ದರೆ ಅಂಚೆ ಕಚೇರಿಯಲ್ಲಿ ಹೊಸ ಖಾತೆ ತೆರೆಯಬಹುದು. ಆಧಾ‌ರ್ ನಲ್ಲಿರುವಂತೆಯೆ ಬ್ಯಾಂಕ್ ಖಾತೆಯಲ್ಲೂ ವೈಯಕ್ತಿಕ ಮಾಹಿತಿ ವಿವರ ಇರಬೇಕು. ಸೀಡ್ ಆಗಿರುವ ಮಾಹಿತಿಯನ್ನು ಡಿಬಿಟಿ ಕರ್ನಾಟಕ ಮೊಬೈಲ್ ಆ್ಯಪ್ ಅಥವಾ ಆಧಾರ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

click me!