1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ..!

By Suvarna News  |  First Published Jul 25, 2020, 9:20 PM IST

ಕೊರೋನಾ ಭೀತಿ ಹಿನ್ನೆಯಲ್ಲಿ ಶಾಲೆಗಳು ಯಾವಾಗ ಪ್ರಾರಂಭವಾಗುತ್ತವೆ ಎನ್ನುವುದು ಗೊತ್ತಿಲ್ಲ. ಇದರ ನಡುವೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು  ಸಚಿವ ಸುರೇಶ್ ಕುಮಾರ್  ಅವರು 1 ರಿಂದ 10 ನೇ ತರಗತಿ ಮಕ್ಕಳಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.


ಚಾಮರಾಜನಗರ, (ಜುಲೈ.25): 1 ರಿಂದ 10 ನೇ ತರಗತಿ ಮಕ್ಕಳಿಗೆ ಧ್ವನಿ ಮುದ್ರಿತ ಪಾಠಗಳು ಸಿದ್ದವಾಗಿದ್ದು, ಶಿಕ್ಷಣ ಇಲಾಖೆಯ ಎರಡು ಚಾನೆಲ್ ಗಳ ಮೂಲಕ ಇದನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಚಾಮರಾಜನಗರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 1 ರಿಂದ 10 ನೇ ತರಗತಿ ಮಕ್ಕಳಿಗೆ ಧ್ವನಿ ಮುದ್ರಿತ ಪಾಠಗಳು ಸಿದ್ದವಾಗಿದೆ. ಶಿಕ್ಷಣಕೋಸ್ಕರ ಎರಡು ಚಾನೆಲ್​ಗಳು ಮೀಸಲಾಗಿದ್ದು, ಕೇಬಲ್​ ಆಪರೇಟರ್​ಗಳ ಜತೆ ಚರ್ಚೆ ಮಾಡಿ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ತಿಳಿಸಿದರು.

Tap to resize

Latest Videos

ಹೈಸ್ಕೂಲ್ ಮಕ್ಕಳಿಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಸುರೇಶ್ ಕುಮಾರ್

ರೆಗ್ಯುಲರ್ ಶಿಕ್ಷಣಕ್ಕೆ ಪೂರಕವಾಗಿ ಚಾನೆಲ್​ಗಳ ಮೂಲಕ ಪಾಠ ಮಾಡಲಾಗುವುದು. ಕೇಬಲ್ ಆಪರೇಟರ್​ಗಳೊಂದಿಗೆ ಮಾತುಕತೆ ನಡೆಸಿ ಈ ಚಾನೆಲ್​ಗಳ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಚಾನೆಲ್ ಪ್ರಸಾರ ಮಾಡುವ ಆಪರೇಟರ್​ಗಳಿಗೆ ಹಣ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಿಕ್ಷಣ ಇಲಾಖೆ ಕೊಟ್ಟಿರುವುದು ನನಗೆ ಸಮಾಧಾನ ತಂದಿದೆ. ಇಲಾಖೆಯ ಋಣ ತೀರಿಸುವ ಸಮಯ ಬಂದಿದೆ. ನನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರ ಕಡ್ಡಾಯ ವರ್ಗಾವಣೆ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಎಲ್ಲರ ಸಲಹೆ ಅಭಿಪ್ರಾಯಗಳನ್ನು ಪಡೆದು ಶಿಕ್ಷಣ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ತಂದಿದ್ದೇವೆ. ವಿಧಾನಸಭೆ ಮತ್ತು ಪರಿಷತ್​ನಲ್ಲಿ ಎಲ್ಲರು ಅನುಮೋದನೆ ಕೊಟ್ಟಿದ್ದಾರೆ ಎಂದರು. 

ಈಗಾಗಲೇ ನಿಯಮಗಳನ್ನ ಜಾರಿಗೆ ತಂದಿದ್ದೇವೆ. ಬಹಳ ವರ್ಷಗಳಿಂದ ಆಗಬೇಕಾದ ಕೆಲಸವನ್ನು ಮಾಡಿದ್ದೇನೆ. ಶಾಲೆಗಳಲ್ಲಿ ವಾಸ್ತವ್ಯ ಹೂಡಿ ಸಂವಾದ ಮಾಡುವ ಹೊಸ ಕಾರ್ಯಕ್ರಮ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು. 

click me!