ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ದಿನಾಂಕ ಬದಲು: ಇಲ್ಲಿದೆ ಹೊಸ ವೇಳಾಪಟ್ಟಿ

By Suvarna News  |  First Published Aug 19, 2020, 8:20 PM IST

ಸೆಪ್ಟೆಂಬರ್ 7 ರಿಂದ 18ರ ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಬೇಕಿತ್ತು, ತಾಂತ್ರಿಕ ಕಾರಣಗಳಿಂದ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದೆ.


ಬೆಂಗಳೂರು, (ಆ.19):  ಸೆಪ್ಟಂಬರ್ 7 ರಿಂದ 18ರವರೆಗೆ ನಿಗದಿಯಾಗಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗಿದೆ.

ಸೆಪ್ಟಂಬರ್ 7 ರಿಂದ 18ರವರೆಗೆ ಪರೀಕ್ಷೆಗಳು ನಡೆಯಬೇಕಿತ್ತು. ಆದ್ರೆ, ತಾಂತ್ರಿಕ ಕಾರಣದಿಂದ ಪೂರಕ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಇಂದು (ಬುಧವಾರ) ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

Latest Videos

undefined

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಹೊಸ ವೇಳಾಪಟ್ಟಿಯನ್ವಯ ಪೂರಕ ಪರೀಕ್ಷೆಗಳು ಸೆಪ್ಟಂಬರ್ 07ರಂದು ಪ್ರಾರಂಭವಾಗಿ ಸೆಪ್ಟಂಬರ್ 19ರವರೆಗೆ ನಡೆಯಲಿದ್ದು, ರಾಜ್ಯಾದ್ಯಂತ ಬೆಳಿಗ್ಗೆ 10:15ರಿಂದ 1:30ರ ವರೆಗೆ ಹಾಗೂ ಮಧ್ಯಾಹ್ನ 2:15ರಿಂದ  ಸಂಜೆ 5:30ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಪರಿಷ್ಕೃತ ವೇಳಾಪಟ್ಟಿ ಇಂತಿದೆ

ಸೆಪ್ಟೆಂಬರ್​ 8 - ಬೆಳಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ,

ಸೆಪ್ಟೆಂಬರ್​ 9 - ಬೆಳಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಳಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್

ಸೆಪ್ಟೆಂಬರ್ 10 - ಬೆಳಗ್ಗೆ ಇಂಗ್ಲೀಷ್

ಸೆಪ್ಟೆಂಬರ್​ 11 - ಬೆಳಿಗ್ಗೆ ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭೂಗರ್ಭ ಶಾಸ್ತ್ರ,

ಸೆಪ್ಟೆಂಬರ್​ 12 - ಬೆಳಗ್ಗೆ ಅರ್ಥ ಶಾಸ್ತ್ರ, ಭೌತಶಾಸ್ತ್ರ

ಸೆಪ್ಟೆಂಬರ್​ 14 - ಬೆಳಗ್ಗೆ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ

ಸೆಪ್ಟೆಂಬರ್​ 15 - ಬೆಳಗ್ಗೆ ಕನ್ನಡ

ಸೆಪ್ಟೆಂಬರ್​ 16 - ಬೆಳಗ್ಗೆ ರಾಜ್ಯ ಶಾಸ್ತ್ರ, ಬೇಸಿಕ್​ ಗಣಿತಶಾಸ್ತ್ರ

ಸೆಪ್ಟೆಂಬರ್​ 18 - ಬೆಳಗ್ಗೆ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ

ಸೆಪ್ಟೆಂಬರ್​ 19 - ಬೆಳಗ್ಗೆ ಭೂಗೋಳ ಶಾಸ್ತ್ರ, ಮನಶಾಸ್ತ್ರ

click me!