ದಕ್ಷಿಣ ಕೊರಿಯಾ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್‌ಸಂಗ್, ಭಾರತೀಯ ಇಂಜಿನಿಯರ್ ಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ.
ಬೆಂಗಳೂರು, [ನ.27]: ವಿಶ್ವದ ಮೊಬೈಲ್ ದಿಗ್ಗಜ ಕಂಪೆನಿಗಳಲ್ಲಿ ಒಂದಾದ ದಕ್ಷಿಣ ಕೊರಿಯಾ ಮೂಲದ ತಂತ್ರಜ್ಞಾನ ಸಂಸ್ಥೆ ಸ್ಯಾಮ್‌ಸಂಗ್ ಭಾರತದಲ್ಲಿ 1000 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.
ಭಾರತದಲ್ಲಿರುವ ತನ್ನ ಮೂರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಕೇಂದ್ರಗಳಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ತಿಳಿಸಿದೆ
undefined
700 ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ
ಭಾರತದಲ್ಲಿ ಬೆಂಗಳೂರು ಸೇರಿದಂತೆ 3 ಆರ್ ಆ್ಯಂಡ್ ಡಿ ಸೆಂಟರ್‌ಗಳಿಗೆ 1,000 ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಲ್ಲಿ 300 ಎಂಜಿನಿಯರ್‌ಗಳನ್ನು ಐಐಟಿಗಳಿಂದ ಆಯ್ಕೆ ಮಾಡಲಾಗುವುದು.
ಕೃತಕ ಬುದ್ಧಿಮತ್ತೆ, ಮೆಶೀನ್ ಲರ್ನಿಂಗ್, ಬಯೊಮೆಟ್ರಿಕ್ಸ್, ಸಿಗ್ನಲ್ ಪ್ರೊಸೆಸಿಂಗ್, ಕಂಪ್ಯೂಟರ್ ವಿಶನ್, ಮೊಬೈಲ್ ಸೆಕ್ಯುರಿಟಿ, ಬಯೊಮೆಟ್ರಿಕ್ಸ್ ಇತ್ಯಾದಿ ವಿಷಯಗಳ ಎಂಜಿನಿಯರ್‌ಗಳಿಗೆ ಆದ್ಯತೆ ನೀಡಲಾಗುವುದು ಸ್ಯಾಮ್ ಸಂಗ್ ಜಾಗತಿಕ ಹಿರಿಯ ಉಪಾಧ್ಯಕ್ಷ ದೀಪೇಶ್ ಶಾ ತಿಳಿಸಿದ್ದಾರೆ.
ಅಬಕಾರಿ ಇಲಾಖೆ ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ
ಸುಮಾರು 22 ವರ್ಷಗಳಿಂದ ಭಾರತದಲ್ಲಿ ಸ್ಯಾಮ್‌ಸಂಗ್ ಆರ್ ಆ್ಯಂಡ್ ಡಿ ವಲಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದು, ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳ ಸಂಬಂಧ ಕೆಲಸ ನಡೆಯುತ್ತಿದೆ.
ಹಾಗಾಗಿ, ಈ ವರ್ಷ ಭಾರತ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 1,000 ಇಂಜಿನಿಯರ್‌ಗಳನ್ನು ನಾವು ನೇಮಿಸಿಕೊಳ್ಳುತ್ತೇವೆ ಎಂದು ದೀಪೇಶ್ ಶಾ ಹೇಳಿದ್ದಾರೆ.